Home> Karnataka
Advertisement

ಕರ್ನಾಟಕ ವಿಪಕ್ಷ ನಾಯಕನ ಸ್ಥಾನಕ್ಕೆ ಪ್ರಧಾನಿ ಮೋದಿ ಟವಲ್ ಹಾಕಿದ್ದಾರಾ?: ಕಾಂಗ್ರೆಸ್ ಟೀಕೆ

ಮಣಿಪುರ, ಹರ್ಯಾಣಗಳ ಹೊತ್ತಿ ಉರಿದರೂ ಅತ್ತ ಸುಳಿಯದ ಪ್ರಧಾನಿ ಮೋದಿಗೆ ನಮ್ಮ ಸರ್ಕಾರದ ಮೇಲೆ ಏಕಿಷ್ಟು ಆಸಕ್ತಿ? ಯಶಸ್ವಿಯಾದ ನಮ್ಮ ಗ್ಯಾರಂಟಿ ಯೋಜನೆಗಳು ಮೋದಿಯವರ ನಿದ್ದೆಗೆಡಿಸಿವೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿ ಟ್ವೀಟ್ ಮಾಡಿದೆ.

ಕರ್ನಾಟಕ ವಿಪಕ್ಷ ನಾಯಕನ ಸ್ಥಾನಕ್ಕೆ ಪ್ರಧಾನಿ ಮೋದಿ ಟವಲ್ ಹಾಕಿದ್ದಾರಾ?: ಕಾಂಗ್ರೆಸ್ ಟೀಕೆ

ಬೆಂಗಳೂರು: ಕರ್ನಾಟಕದ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ವಹಿಸಿಕೊಂಡಂತಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಇನ್ನೂ ವಿಪಕ್ಷ ನಾಯಕ ಹೆಸರು ಫೈನಲ್ ಮಾಡದ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದೆ.

ಕರ್ನಾಟಕದ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿಯವರೇ ವಹಿಸಿಕೊಂಡಂತಿದೆ! ಬೇರೆಲ್ಲಾ ಕೆಲಸ ಬಿಟ್ಟು ಕರ್ನಾಟಕದ ಬಗ್ಗೆ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ನಿರಂತರವಾಗಿ ಮಾತಾಡುತ್ತಿದ್ದಾರೆ. ವಿಪಕ್ಷ ನಾಯಕನ ಸ್ಥಾನಕ್ಕೆ ಮೋದಿಯರು ಟವಲ್ ಹಾಕಿದ್ದಾರಾ ಬಿಜೆಪಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಸಾವು ಪ್ರಕರಣ

‘ಮಣಿಪುರ, ಹರ್ಯಾಣಗಳ ಹೊತ್ತಿ ಉರಿದರೂ ಅತ್ತ ಸುಳಿಯದ ಪ್ರಧಾನಿ ಮೋದಿಗೆ ನಮ್ಮ ಸರ್ಕಾರದ ಮೇಲೆ ಏಕಿಷ್ಟು ಆಸಕ್ತಿ? ಯಶಸ್ವಿಯಾದ ನಮ್ಮ ಗ್ಯಾರಂಟಿ ಯೋಜನೆಗಳು ಮೋದಿಯವರ ನಿದ್ದೆಗೆಡಿಸಿವೆಯೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿ ಟ್ವೀಟ್ ಮಾಡಿದೆ.

‘ಮಧ್ಯಪ್ರದೇಶದಲ್ಲಿ ದಲಿತರಿಗೆ ಮೂತ್ರ ಕುಡಿಸಲಾಗುತ್ತಿದೆ, ಹರ್ಯಾಣ ಗಲಭೆಯಲ್ಲಿ ಹೊತ್ತಿ ಉರಿಯುತ್ತಿದೆ, ಮಣಿಪುರದಲ್ಲಿ ಮಹಿಳೆಯರನ್ನು ಅತ್ಯಾಚಾರ ಎಸಗಿ ಬೆತ್ತಲೆ ಮೆರವಣಿಗೆ ಮಾಡಲಾಗುತ್ತಿದೆ. ಎಲ್ಲವೂ ಬಿಜೆಪಿ ಆಡಳಿತದ ರಾಜ್ಯಗಳೇ, ಕರ್ನಾಟಕದ ಬಗ್ಗೆ ಮಾತಾಡುವ ಪ್ರಧಾನಿ ಮೋದಿ ತಮ್ಮ ಡಬಲ್ ಇಂಜಿನ್ ರಾಜ್ಯಗಳ ಅವಾಂತರಗಳನ್ನು ಗಮನಿಸಲಿ’ ಎಂದು ಕಾಂಗ್ರೆಸ್ ಕುಟುಕಿದೆ.  

ಇದನ್ನೂ ಓದಿ: ವಿಜಯಪುರ ಜಿಲ್ಲೆಗೆ ಕಾಲಿಟ್ಟ ಮದ್ರಾಸ್ ಐ ಸೊಂಕು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More