Home> Karnataka
Advertisement

Basavaraj Bommai : 'ಗಣೇಶೋತ್ಸವ ಮುಗಿದ ಮೇಲೆ ಜನೋತ್ಸವ ಮಾಡಲು ನಿರ್ಧಾರ'

ಬಿಜೆಪಿ ಪಕ್ಷಕ್ಕೆ ಇಂದು ದೊಡ್ಡ ದಿನವಾಗಿದೆ, ಇದು ಶಕ್ತಿ ತುಂಬಿರುವ ದಿನ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Basavaraj Bommai : 'ಗಣೇಶೋತ್ಸವ ಮುಗಿದ ಮೇಲೆ ಜನೋತ್ಸವ ಮಾಡಲು ನಿರ್ಧಾರ'

ಬೆಂಗಳೂರು : ಬಿಜೆಪಿ ಪಕ್ಷಕ್ಕೆ ಇಂದು ದೊಡ್ಡ ದಿನವಾಗಿದೆ, ಇದು ಶಕ್ತಿ ತುಂಬಿರುವ ದಿನ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಇಂದು ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದ್ದಕ್ಕೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮ ನೆಚ್ಚಿನ ಹೋರಾಟಗಾರರಾದ ಯಡಿಯೂರಪ್ಪನವರಿಗೆ ಅತ್ಯಂತ ಉನ್ನತ ಮಟ್ಟದ ಸ್ಥಾನವನ್ನ ನೀಡಿದ್ದಾರೆ. ಇದು ನಮ್ಮ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೆ ಸಂತೋಷವಾಗಿದೆ. ಚುನಾವಣಾ ಸಮಿತಿಯಲ್ಲು ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪಿಎಂ ಮೋದಿ, ನಡ್ಡಾ ಹಾಗೂ ಅಮಿತ್ ಶಾ ರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇದೊಂದು ರಾಜಕೀಯವಾಗಿ ಅತ್ಯಂತ ಮಹತ್ವದ ಹಾಗೂ ದೂರದೃಷ್ಟಿ ನಿರ್ಣಯವಾಗಿದೆ. ಬಿಜೆಪಿ ಬೆಳವಣಿಗೆ ಅತ್ಯಂತ ಸುದೀರ್ಘ ಕಾಲ ಜೋಡಣೆ ಆಗಿದ್ರೆ ಅದು ಯಡಿಯೂರಪ್ಪನವರು. ಸಿಎಂ ಸ್ಥಾನದಿಂದ ಕೆಳಗಿಳಿನ ನಂತ್ರವೂ ಬಹಳ ಸಕ್ರಿಯವಾಗಿದ್ರು. ನಾನು ಹಿಂದೆಯೇ ಹೇಳಿದ್ದೇ ಅವರ ಮಾರ್ಗದರ್ಶನದಲ್ಲೇ ನಾವು ಮುನ್ನಡೆಯುತ್ತೇವೆ ಎಂದು. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಹೋಗುತ್ತೇವೆ. 

ಇದನ್ನೂ ಓದಿ : BS Yediyurappa : 'ದಕ್ಷಿಣ ರಾಜ್ಯಗಳನ್ನು ನೋಡಿಕೊಳ್ಳಬೇಕೆಂದು ಪಿಎಂ ಮೋದಿ ಹೇಳಿದ್ದಾರೆ'

ಬಿಜೆಪಿ ಪಕ್ಷಕ್ಕೆ ದೊಡ್ಡ ಶಕ್ತಿ ಸಿಕ್ಕಿದೆ, ಮೋದಿಯವ್ರ ದೂರದೃಷ್ಟಿ ಇದೆ. ಅವರು ಸಮಗ್ರ ಭಾರತದ ಅಭಿವೃದ್ಧಿ ಜೊತೆಗೆ ಬಿಜೆಪಿ ಯನ್ನ ಅಖಂಡಗೊಳಿಸಬೇಕು ಎಂಬುದಿದೆ. ಬಿಜೆಪಿಯನ್ನ ದಕ್ಷಿಣ ಭಾರತದಲ್ಲಿ ಶಕ್ತಿಶಾಲಿಯಾಗಿ ಕಟ್ಟಬೇಕು ಎಂದರು. 

ಮೋದಿಜಿಯವರ ದೂರದೃಷ್ಟಿ. ಸಮಗ್ರ ಭಾರತದ ಅಭಿವೃದ್ಧಿ ಜೊತೆಗೆ ದೇಶದಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಮಾಡಬೇಕು ಅನ್ನೋದು ಮೋದಿಜಿಯವರ ಸಂಕಲ್ಪವಾಗಿದೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕಾರಣಿಯಲ್ಲಿ ದಕ್ಷಿಣ ಭಾರತದಲ್ಲಿ ಪಕ್ಷಬಲವರ್ಧನೆ ಮಾಡಬೇಕು ಅಂತ ಮೋದಿ ಹೇಳಿದ್ದರು. ಮಿಷನ್ ದಕ್ಷಿಣ್ ಅಂತ ನಮ್ಮೆಲ್ಲ ನಾಯಕರು ಹೇಳಿದ್ರು. ಇಡೀ ದಕ್ಷಿಣ ಭಾರತದಲ್ಲಿ ಒಂದು ಶಕ್ತಿಯುತ ಸ್ಥಾನಮಾನ ನೀಡಿದೆ. 2023 ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ಶತಸಿದ್ದ. ವಿಪಕ್ಷಗಳ ಸರ್ವೇ ಹೇಗಿದೆ ಅನ್ನೋದು ಚೆನ್ನಾಗಿ ಗೊತ್ತಿದೆ. ಕರ್ನಾಟಕದ ಜನತೆಗೆ ಮೂಡ್ ಏನಿದೆ ಅನ್ನೋದು ಗೊತ್ತಿದೆ. ಬರುವಂತಹ ದಿನಗಳಲ್ಲಿ ಅದು ಕೂಡ ಗೊತ್ತಾಗುತ್ತದೆ. ನಮ್ಮ ಎಲ್ಲಾ ಕ್ಯಾಬಿನೆಟ್ ಸಚಿವರಿಗೆ ಶಕ್ತಿ ತುಂಬಿದೆ. ಸಮಗ್ರ ಕರ್ನಾಟಕದ ಅಭಿವೃದ್ಧಿಯ ಅಜೆಂಡಾ ಇಟ್ಕೊಂಡು ಜನರ ವಿಶ್ವಾಸಗಳಿಸುತ್ತೇವ ಅನ್ನೊ ನಂಬಿಕೆ ಇದೆ ಎಂದರು. 

ರಾಜಕಾರಣ ನಿಂತ ನೀರಲ್ಲ, ಹಿಂದಿನ ರಾಜಕಾರಣ ಬೇರೆ. ಈಗ ಕಾಂಗ್ರೆಸ್ ಹವಾ ಕಡಿಮೆಯಾಗಿದೆ. ಅಬ್ಬರದ ಮಾತುಗಳಿಂದ ಮತಗಳು ಬರಲ್ಲ. ಆ ಭ್ರಮೆಯಲ್ಲಿದ್ದಾರೆ. ನಮಗೆ ಆತ್ಮವಿಶ್ವಾಸವಿದೆ. ಮೂರು ವರ್ಷಗಳ ಆಡಳಿತದಲ್ಲಿ ಸರ್ಕಾರ ಜನಪರವಾಗಿದೆ. ಸರ್ಕಾರ ನಮ್ಮ ಕೈ ಹಿಡಿಯುತ್ತಾರೆ ಅನ್ನೊ ವಿಶ್ವಾಸವಿದೆ. ಗಣೇಶೋತ್ಸವ ಮುಗಿದ ಮೇಲೆ ಜನೋತ್ಸವ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಮತ್ತೆ 142 ಕೋಟಿ ವಿಶೇಷ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More