Home> Karnataka
Advertisement

Congress: ಬೈ ಎಲೆಕ್ಷನ್ ನಲ್ಲಿ CD ಮಸಲತ್ತು: ಲಾಭ ಪಡೆಯಲು 'ಕೈ' ಕಸರತ್ತು!

ಉಪ ಚುನಾವಣೆ ತಾಲೀಮಿನಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣವನ್ನು ಬಂಡವಾಳವಾಗಿಸಿಕೊಳ್ಳಲು ಯೋಜನೆ

Congress: ಬೈ ಎಲೆಕ್ಷನ್ ನಲ್ಲಿ CD ಮಸಲತ್ತು: ಲಾಭ ಪಡೆಯಲು 'ಕೈ' ಕಸರತ್ತು!

ಬೆಂಗಳೂರು: ರಾಜ್ಯದಲ್ಲಿ ಮುಂದಿನ ತಿಂಗಳು ಎರಡು ವಿಧಾನಸಭೆ ಮತ್ತು ಒಂದು ಲೋಕಸಭೆಗೆ ಉಪಚುನಾವಣೆ ನಡೆಯಲಿದೆ. ಉಪ ಚುನಾವಣೆ ತಾಲೀಮಿನಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣವನ್ನು ಬಂಡವಾಳವಾಗಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ.

ಸೆಕ್ಸ್ ಸಿಡಿ ಮತ್ತು ಆರು ಸಚಿವರು ತಮ್ಮ ವಿರುದ್ಧ ಚಾನೆಲ್ ಗಳಲ್ಲಿ ಯಾವುದೇ ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವ ವಿಷಯವನ್ನು ಕಾಂಗ್ರೆಸ್(Congress) ಹೈಲೈಟ್ ಮಾಡಲಿದೆ. ಆದರೆ ನಾವು ಉಪ ಚುನಾವಣೆ ಘೋಷಣೆಗೂ ಮುನ್ನ ಪಕ್ಷ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಬಿಜೆಪಿ ಎಂಎಲ್ ಸಿ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

JOBS: ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ

ರಾಜ್ಯದ ಉಪ ಚುನಾವಣೆ(By Election) ಉಸ್ತುವಾರಿಗಾಗಿ ಪಕ್ಷದ ಪ್ರಭಾವಿ ಸಚಿವರು ನಾಯಕರುಗಳನ್ನು ನೇಮಿಸಲಾಗಿದೆ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರುಗಳಾದ ಪ್ರಭು ಚವಾಣ್, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಜಗದೀಶ್ ಶೆಟ್ಟರ್, ಬಿ.ಸಿ ಪಾಟೀಲ್, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಮತ್ತು ಬಿ ಶ್ರೀರಾಮುಲು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವಿಜಯೇಂದ್ರ ಅವರನ್ನು ನೇಮಿಸಲಾಗಿದೆ.

ನನ್ನ ಹತ್ಯೆಗೆ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ - ಸಿ.ಡಿ ಯುವತಿಯ ಗಭೀರ ಆರೋಪ

ಪ್ರತಿದಿನ ಪ್ರಚಾರ ಕಾರ್ಯ ನಡೆಸುವ ಮುಖಂಡರು ಎಲ್ಲಾ ಸಮುದಾಯದ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ. ಇತರ ಪಕ್ಷಗಳಿಗೆ ಹೋಲಿಸಿದರೇ ಈ ಕ್ಷೇತ್ರದಲ್ಲಿ ಬಿಜೆಪಿ(BJP) ಪ್ರಚಾರದಲ್ಲಿ ಮುಂದಿದೆ, ಅಮಿತ್ ಶಾ ಜನವರಿಯಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದು ಸಹಾಯವಾಗಲಿದೆ, ಚುನಾವಣೆಗಾಗಿ ಬಿಜೆಪಿ ಹಲವು ತಿಂಗಳ ಹಿಂದೆಯೆ ತಯಾರಿ ಆರಂಭಿಸಿದೆ, ಇನ್ನೂ ಈ ನಿರ್ಧಿಷ್ಟ ಕ್ಷೇತ್ರಗಳ ಜವಾಬ್ದಾರಿಯನ್ನು ಪ್ರಮುಖ ನಾಯಕರುಗಳಿಗೆ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

"ರೈತರ ಮೇಲೆ ಪ್ರಕರಣ ದಾಖಲಿಸುವುದು ದುಷ್ಟತನದ ಪ್ರದರ್ಶನ"

ಉಪ ಚುನಾವಣೆಗಳಲ್ಲಿ ಸತತ ಸೋಲು ಅನುಭವಿಸುತ್ತಿರುವ ಕಾಂಗ್ರೆಸ್ ಈ ಬಾರಿ ಗೆಲ್ಲಲು ಪಣ ತೊಟ್ಟಿದೆ. ಬೆಳಗಾವಿಗೆ ಸತೀಶ್ ಜಾರಕಿಹೊಳಿ(Satish Jarkiholi), ಮಸ್ಕಿ ಕ್ಷೇತ್ರಕ್ಕೆ ಬಸನಗೌಡ ತುರುವಿಹಾಳ್, ಬಸವಕಲ್ಯಾಣಕ್ಕೆ ಮಲ್ಲಮ್ಮ ರಾವ್ ಅವರನ್ನು ಕಣಕ್ಕಿಳಿಸಿದೆ, ತಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ನಾನು ಮತ್ತು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಉಪಸ್ಥಿತರಿರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

CD Case : ಕಾನೂನಾತ್ಮಕ ಹೋರಾಟಕ್ಕೆ ನಾನೂ ಸಿದ್ಧ - ರಮೇಶ್ ಜಾರಕಿಹೊಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Read More