Home> Karnataka
Advertisement

ಶಿಕ್ಷಣ ಕ್ಷೇತ್ರವನ್ನು ಕುಲಗೆಡಿಸಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ: ಬಿಜೆಪಿ

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಪ್ರಧಾನಿ ಮೋದಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

ಶಿಕ್ಷಣ ಕ್ಷೇತ್ರವನ್ನು ಕುಲಗೆಡಿಸಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ: ಬಿಜೆಪಿ

ಬೆಂಗಳೂರು: ಶಿಕ್ಷಣ ಕ್ಷೇತ್ರವನ್ನು ಕುಲಗೆಡಿಸಿದ ಕುಖ್ಯಾತಿ ಕಾಂಗ್ರೆಸ್‌ ಪಕ್ಷಕ್ಕೆ(Congress Party) ಸಲ್ಲುತ್ತದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. #SpeakUpCONgress ಹ್ಯಾಶ್ ಟ್ಯಾಗ್ ಬಳಿಸಿ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.

‘ದೇಶದ ಉನ್ನತ ಶಿಕ್ಷಣ ಸಂಸ್ಥೆ(Education System in India)ಗಳಲ್ಲಿ ಖಾಸಗಿ ಲಾಬಿಗೆ ಮಣೆ ಹಾಕಿದ್ದು ಯಾರು? ಕಾಂಗ್ರೆಸ್, ಯಾವ ಪಕ್ಷದ ರಾಜಕೀಯ ನಾಯಕರ ಹೆಸರಿನಲ್ಲಿ ಬೃಹತ್ ವೈದ್ಯ ಹಾಗೂ ತಾಂತ್ರಿಕ ಖಾಸಗಿ ವಿದ್ಯಾ ಸಂಸ್ಥೆಗಳಿವೆ? ಕಾಂಗ್ರೆಸ್, ಶಿಕ್ಷಣ ಕ್ಷೇತ್ರವನ್ನು ಕುಲಗೆಡಿಸಿದ ಕುಖ್ಯಾತಿ ಕಾಂಗ್ರೆಸ್‌ ಪಕ್ಷಕ್ಕೆ ಸಲ್ಲುತ್ತದೆ’ ಅಂತಾ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಉಡಾಫೆ ಹೇಳಿಕೆಗಳಿಂದ ಕಾಲಹರಣ ಮಾಡುವ ಬದಲು ವಿದ್ಯಾರ್ಥಿಗಳನ್ನು ರಕ್ಷಿಸಿ: ಸಿದ್ದರಾಮಯ್ಯ

‘ಸುಳ್ಳಿನ‌ ಇಟ್ಟಿಗೆಯ ಮೇಲೆ ಸತ್ಯದ ಸಮಾಧಿ ಮಾಡುವುದಕ್ಕೆ ಕಾಂಗ್ರೆಸ್ ಹೊರಟಿದೆ. ದೇಶದಲ್ಲಿ ಉನ್ನತ ಶಿಕ್ಷಣವನ್ನು‌ ಉಳ್ಳವರ ಸ್ವತ್ತಾಗಿ ಮಾಡಿದ ಕಾಂಗ್ರೆಸಿಗರು ಈಗ ವೈದ್ಯ ಹಾಗೂ ತಾಂತ್ರಿಕ ಶಿಕ್ಷಣ ಕ್ಷೇತ್ರ(Education Sector)ದ ಸುಧಾರಣೆಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ’ ಅಂತಾ ಬಿಜೆಪಿ ಕುಟುಕಿದೆ.

‘ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು(Congress Leaders)ತಮ್ಮದೇ ಸಾಮ್ರಾಜ್ಯ ಸೃಷ್ಟಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳ ಆದಾಯ ಎಷ್ಟು ಹೆಚ್ಚಳವಾಗಿದೆ? ಬಡ ವಿದ್ಯಾರ್ಥಿಗಳಿಗೆ ಅವರು ನೀಡಿದ ಸೀಟ್ ಎಷ್ಟು? ಶುಲ್ಕ ರಿಯಾಯಿತಿ ಎಷ್ಟು? ಈ ಬಗ್ಗೆ ಮಾತನಾಡಲು ಇದು ಸಕಾಲ!’ ಅಂತಾ ಹೇಳಿದೆ.

ಇದನ್ನೂ ಓದಿ: ರಾಜ್ಯದ ಮೊದಲ ವೈ-ಫೈ ಗ್ರಾಮ ಮೈಸೂರಿನ ರಮ್ಮನಹಳ್ಳಿ; 5 ಡಿಫರೆಂಟ್ ಪ್ಲ್ಯಾನ್ಸ್ ಉಂಟು ಇಲ್ಲಿ

‘ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಪ್ರಧಾನಿ ಮೋದಿ(Narendra Modi) ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಕೇವಲ 7 ವರ್ಷದಲ್ಲಿ 207 ಹೊಸ ವೈದ್ಯ ಕಾಲೇಜು ಆರಂಭಿಸಿ ಸರ್ಕಾರಿ ಕೋಟಾದ ಸೀಟುಗಳನ್ನು ಹೆಚ್ಚಿಸಲಾಗಿದೆ. ಪ್ರತಿಭಾ ಪಲಾಯನ ತಡೆಯಲು ಮೋದಿ ಸರ್ಕಾರ ದೃಢ ಹೆಜ್ಜೆಯಿರಿಸಿದೆ. ಕಾಂಗ್ರೆಸ್ ಕೊಡುಗೆ ಏನು?’ ಅಂತಾ ಬಿಜೆಪಿ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More