Home> Karnataka
Advertisement

ವಲಸೆರಾಮಯ್ಯರಿಗೆ ತನ್ನದೆಂದು ಹೇಳಿಕೊಳ್ಳುವ ಒಂದೂ ಕ್ಷೇತ್ರವೂ ಇಲ್ಲ: ಬಿಜೆಪಿ ವ್ಯಂಗ್ಯ

ಈ ಹಿಂದೆ ಮಾತನಾಡಿದ್ದ ಸಿದ್ದರಾಮಯ್ಯನವರು ಮುಂದಿನ ಚುನಾವಣೆಯೇ ನನ್ನ ಕೊನೆಯ ಸ್ಪರ್ಧೆ ಎಂದು ರಾಜಕೀಯದಿಂದ ನಿವೃತ್ತಿಯಾಗುವ ಬಗ್ಗೆ ಮಾತನಾಡಿದ್ದರು.

ವಲಸೆರಾಮಯ್ಯರಿಗೆ ತನ್ನದೆಂದು ಹೇಳಿಕೊಳ್ಳುವ ಒಂದೂ ಕ್ಷೇತ್ರವೂ ಇಲ್ಲ: ಬಿಜೆಪಿ ವ್ಯಂಗ್ಯ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತನ್ನದು ಎಂದು ಹೇಳಿಕೊಳ್ಳುವ ಒಂದೂ ಕ್ಷೇತ್ರವೂ ಇಲ್ಲವೆಂದು ಬಿಜೆಪಿ ವ್ಯಂಗ್ಯವಾಡಿದೆ. ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ #ವಲಸೆರಾಮಯ್ಯ  ಹ್ಯಾಶ್ ಟ್ಯಾಗ್ ಬಳಸಿ ಟೀಕಿಸಿದೆ.

‘#ವಲಸೆರಾಮಯ್ಯ ಅವರೇ ಯಾವುದು ಹಿತವು ನಿಮಗೆ? ಪಟ್ಟ ಶಿಷ್ಯ ಜಮೀರನ ಜಹಾಗೀರ್ ಚಾಮರಾಜಪೇಟೆಯೊ? ಈಗಿನ ಕ್ಷೇತ್ರ ಬದಾಮಿಯೋ? ಇಲ್ಲ 2018ರ ಚುನಾವಣೆಯೇ ನಿಮ್ಮ ಕೊನೆಯ ಚುನಾವಣೆ ಅಂದುಕೊಳ್ಳುವುದೋ? ವಲಸೆ ನಾಯಕ ಸಿದ್ದರಾಮಯ್ಯನವರೇ ಇದಕ್ಕೆ ಉತ್ತರಿಸುವಿರಾ?’ ಎಂದು ಪ್ರಶ್ನಿಸಿದೆ.

fallbacks

ಇದನ್ನೂ ಓದಿ: PSI Recruitment Scam: ಇನ್ನೂ ಪತ್ತೆಯಾಗದೆ ತಲೆಮರೆಸಿಕೊಂಡಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ!

‘ಸಿದ್ದರಾಮಯ್ಯನವರಿಗೆ ಕರ್ನಾಟಕ ದರ್ಶನ ಮಾಡುವ ಆಸೆಯಿದ್ದರೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಹಲವು ಪ್ಯಾಕೇಜ್ ಪ್ರವಾಸದ ವ್ಯವಸ್ಥೆ ಮಾಡುತ್ತೇವೆ. ಅದನ್ನು ಬಿಟ್ಟು ಹಳೆ ಮೈಸೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಬೆಂಗಳೂರು ಎಂದು ವಲಸೆ ಹೋಗಬಹುದಾದ ಕ್ಷೇತ್ರಗಳ ಪಟ್ಟಿ ಮಾಡಿದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಮ್ಮನಿರುವರೇ?’ ಎಂದು ಕುಟುಕಿದೆ.

fallbacks

‘ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಗಳ ಮೂಲಕ ಒಂದು ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಿ, ಜಾತಿ ಜಾತಿಗಳ ಮದ್ಯೆ ಬಿರುಕು ಮೂಡಿಸಿದ ಸಿದ್ದರಾಮಯ್ಯನವರಿಗೆ ತನ್ನದು ಎನ್ನುವ ಒಂದೂ ಕ್ಷೇತ್ರವೂ ಇಲ್ಲ. ಕೋಲಾರ, ಹುಣಸೂರು, ಚಾಮರಾಜಪೇಟೆ, ಕೊಪ್ಪಳ, ಮುಂದೆ? #ಆಣೆರಾಮಯ್ಯನವರೇ ಬಾದಾಮಿ ಜನತೆಗೆ ನಿಮ್ಮ ಅಧಿನಾಯಕಿ ಸೋನಿಯಾ ಮೇಲೆ ಆಣೆ ಮಾಡಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Cabinet Expansion: ಏ.30ರಂದು ದೆಹಲಿಗೆ ಸಿಎಂ ಬೊಮ್ಮಾಯಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಸಾಧ್ಯತೆ

ಈ ಹಿಂದೆ ಮಾತನಾಡಿದ್ದ ಸಿದ್ದರಾಮಯ್ಯನವರು ಮುಂದಿನ ಚುನಾವಣೆಯೇ ನನ್ನ ಕೊನೆಯ ಸ್ಪರ್ಧೆ ಎಂದು ರಾಜಕೀಯದಿಂದ ನಿವೃತ್ತಿಯಾಗುವ ಬಗ್ಗೆ ಮಾತನಾಡಿದ್ದರು. ವರುಣ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಬಾದಾಮಿ, ಕೋಲಾರ ಇಷ್ಟು ಕ್ಷೇತ್ರದ ಜನರು ನಮ್ಮಲ್ಲಿಯೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ನಾನು ಇನ್ನೂ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ತೀರ್ಮಾನ ಮಾಡಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More