Home> Karnataka
Advertisement

‘ಕೈ’ ಪಕ್ಷವನ್ನು ಮಕಾಡೆ ಮಲಗಿಸಲಿರುವ ‘ಭಾರತ್ ಜೋಡೋ’ & ಸಿದ್ದರಾಮೋತ್ಸವ: ಬಿಜೆಪಿ

ವ್ಯಕ್ತಿಪೂಜೆ ಬೇಡ, ಪಕ್ಷಪೂಜೆ ಮಾಡಿ ಎಂದ ಡಿಕೆಶಿ ಈಗ ತನ್ನದೇ ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರೆ. ಹೈಕಮಾಂಡ್‌ ಸಿದ್ದರಾಮಯ್ಯ ಪರವಾಗಿ ನಿಂತಿದೆಯೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಕೈ’ ಪಕ್ಷವನ್ನು ಮಕಾಡೆ ಮಲಗಿಸಲಿರುವ ‘ಭಾರತ್ ಜೋಡೋ’ & ಸಿದ್ದರಾಮೋತ್ಸವ: ಬಿಜೆಪಿ

ಬೆಂಗಳೂರು: ‘ಭಾರತ್‌ ಜೋಡೋ’ ಅಭಿಯಾನ ಮತ್ತು ‘ಸಿದ್ದರಾಮೋತ್ಸವ!’ ಈ 2 ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸಲಿವೆ ಎಂದು ಬಿಜೆಪಿ ಟೀಕಿಸಿದೆ. #ಕಾಂಗ್ರೆಸ್‌ಛೋಡೋಯಾತ್ರೆ ಹ್ಯಾಶ್ ಟ್ಯಾಗ್ ಬಳಸಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದೆ.

‘ಬಿರುಕು ಬಿಟ್ಟಿರುವ ಕಾಂಗ್ರೆಸ್ ಮನೆ ಸಿದ್ದರಾಮೋತ್ಸವದ ಬಳಿಕ ನೆಲಸಮವಾಗಲಿದೆ. ಮನೆಯೊಳಗಿದ್ದವರು ಗುಳೆ ಹೊರಡಲನುವಾಗಿದ್ದಾರೆ. ಅಕ್ಟೊಬರ್ ತಿಂಗಳಲ್ಲಿ ನಡೆಲಿರುವ ‘ಭಾರತ್ ಜೋಡೋ’ ಕಾರ್ಯಕ್ರಮಕ್ಕೂ ನಾಯಕರು ಸಿಗಲಾರದಷ್ಟು ಕಾಂಗ್ರೆಸ್‌ ಖಾಲಿಯಾಗಲಿದೆ. ಈ ಎರಡು ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸಲಿದೆ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: Contractor Santosh Patil : ಗುತ್ತಿಗೆದಾರ ಸಂತೋಷ ಪಾಟೀಲ್ ಪ್ರಕರಣ : ರಾಜ್ಯಪಾಲರ ಮೊರೆ ಹೋದ ಕುಟುಂಬಸ್ಥರು

‘ಭಾರತ್ ಜೋಡೋ’ ಅಭಿಯಾನದ ಅಂಗವಾಗಿ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಲು ಉದ್ದೇಶಿಸಿರುವ ರಾಹುಲ್ ಗಾಂಧಿ ಅವರೇ, ಭಾರತ ಈಗ ಮತ್ತಷ್ಟು ಬಲಿಷ್ಠವಾಗಿದೆ. ಮುರಿದು ಹೋಗಿರುವುದು ಕಾಂಗ್ರೆಸ್ ಪಕ್ಷ, ಮೊದಲು ‘ಕಾಂಗ್ರೆಸ್ ಜೋಡೋ ‘ಅಭಿಯಾನ ಮಾಡಿ. ಮುಂದೊಂದು ದಿನ ಕಾಂಗ್ರೆಸ್‌ ಪಕ್ಷದ ಬಾಗಿಲು ಮುಚ್ಚಲೂ ಹಿಂಬಾಲಕರು ಸಿಗಲಾರರು!’ ಎಂದು ಬಿಜೆಪಿ ಕುಟುಕಿದೆ.

ಒಡಕು ಕನ್ನಡಿ, ಮಸುಕು ಪ್ರತಿಬಿಂಬ!

ಇನ್ನು ಸಿದ್ದರಾಮೋತ್ಸವವನ್ನು #ಕಾಂಗ್ರೆಸ್‌ಹಾಸ್ಯೋತ್ಸವವೆಂದು ವ್ಯಂಗ್ಯವಾಡಿರುವ ಬಿಜೆಪಿ, ‘ಒಡೆದ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಒಡೆದೇ ಇರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯರದು ಎಂದೂ ಒಂದಾಗದ ಒಡಕು ಮನಸು. ಬ್ರೇಕ್ ಪಾಸ್ಟ್ ಮೀಟಿಂಗ್‌ನಿಂದ ಇದೆಲ್ಲ ಸರಿ ಹೋಗುವ ಮಾತೇ? ಒಡಕು ಕನ್ನಡಿ, ಮಸುಕು ಪ್ರತಿಬಿಂಬ!’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: GST ಏರಿಕೆಗೆ ವಿರೋಧ : ಇಂದು ಯಶವಂತಪುರ APMC ಯಾರ್ಡ್ ಬಂದ್

‘ಸಿದ್ದರಾಮೋತ್ಸವದಿಂದ ಎರಡರಲ್ಲಿ ಯಾವುದಾದರೂ ಒಂದು ನಿಶ್ಚಿತ! ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿದ್ದರೆ, ಸಿದ್ದರಾಮಯ್ಯ ಪಕ್ಷ ಬಿಡುತ್ತಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಡಿಕೆಶಿ ಪಕ್ಷ ಒಡೆಯುತ್ತಾರೆ. ನಕಲಿ ಗಾಂಧಿಗಳಿಗೀಗ ಇತ್ತ ದರಿ, ಅತ್ತ ಪುಲಿ ಗಾದೆಯ ಅನುಭವ!’ವೆಂದು ಬಿಜೆಪಿ ಟೀಕಿಸಿದೆ.

‘ವ್ಯಕ್ತಿಪೂಜೆ ಬೇಡ, ಪಕ್ಷಪೂಜೆ ಮಾಡಿ ಎಂದ ಡಿಕೆಶಿ ಈಗ ತನ್ನದೇ ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲೇ ನಡೆಯುವ ವ್ಯಕ್ತಿ ‌ಪೂಜೆಗೆ ರಾಹುಲ್ ಗಾಂಧಿ ಮುಖ್ಯ ಅತಿಥಿಯಂತೆ, ಹೈಕಮಾಂಡ್‌ ಸಿದ್ದರಾಮಯ್ಯ ಪರವಾಗಿ ನಿಂತಿದೆಯೇ? ಡಿಕೆಶಿ ತಯಾರಿಸಿದ ಊಟವನ್ನು ಸಿದ್ದರಾಮಯ್ಯಗೆ ಬಡಿಸುವ ಹುನ್ನಾರವೇ ಇದು?’ ಎಂದು ಬಿಜೆಪಿ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More