Home> Karnataka
Advertisement

ಕೊರೊನಾ ಸಂಕಷ್ಟದಲ್ಲಿ ನೆರವಾಗುತ್ತಿದ್ದ ಕನ್ನಡಿಗ ಬಿ.ವಿ ಶ್ರೀನಿವಾಸ್ ಪ್ರಶ್ನಿಸಿದ ದೆಹಲಿ ಪೊಲೀಸರು, ವ್ಯಾಪಕ ಖಂಡನೆ

ಕೋವಿಡ್ ದುರಿತಕಾಲದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ದೇಶದೆಲ್ಲೆಡೆ ಶ್ಲಾಘನೆಗೆ ಒಳಗಾಗಿರುವ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರನ್ನು ಈಗ ದೆಹಲಿ ಪೊಲೀಸರು ಕೊರೊನಾಗೆ ಸಂಬಂಧಿಸಿದ ಔಷಧಿಗಳ ವಿತರಣೆ ವಿಚಾರವಾಗಿ ಪ್ರಶ್ನಿಸಿದ್ದಾರೆ.

ಕೊರೊನಾ ಸಂಕಷ್ಟದಲ್ಲಿ ನೆರವಾಗುತ್ತಿದ್ದ ಕನ್ನಡಿಗ ಬಿ.ವಿ ಶ್ರೀನಿವಾಸ್ ಪ್ರಶ್ನಿಸಿದ ದೆಹಲಿ ಪೊಲೀಸರು, ವ್ಯಾಪಕ ಖಂಡನೆ

ನವದೆಹಲಿ: ಕೋವಿಡ್ ದುರಿತಕಾಲದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ದೇಶದೆಲ್ಲೆಡೆ ಶ್ಲಾಘನೆಗೆ ಒಳಗಾಗಿರುವ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರನ್ನು ಈಗ ದೆಹಲಿ ಪೊಲೀಸರು ಕೊರೊನಾಗೆ ಸಂಬಂಧಿಸಿದ ಔಷಧಿಗಳ ವಿತರಣೆ ವಿಚಾರವಾಗಿ ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಯೂತ್ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಹುದ್ದೆಗೆ ಏರಿದ ಮೊದಲ ಕನ್ನಡಿಗ ಬಿ.ವಿ.ಶ್ರೀನಿವಾಸ್

ಈಗ ದೆಹಲಿ ಪೋಲೀಸರ ನಡೆಯನ್ನು ಟ್ವೀಟ್ ಮೂಲಕ ಖಂಡಿಸಿರುವ ರಾಹುಲ್ ಗಾಂಧಿ "ರಕ್ಷಿಸುವವನು ಕೊಲ್ಲುವವನಿಗಿಂತ ಯಾವಾಗಲೂ ದೊಡ್ಡವನಾಗಿರುತ್ತಾನೆ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರು "ಸರ್ಕಾರ ತನಗೆ ತಿಳಿದದ್ದನ್ನು ಮಾಡುತ್ತಿದೆ.ದುರದೃಷ್ಟವಶಾತ್, ದೇಶವು ಸರ್ಕಾರದ ಕೈಯಲ್ಲಿದೆ, ಅವರ ಆದ್ಯತೆಯು ನಾಗರಿಕರ ಜೀವನವಲ್ಲ, ಆದರೆ ರಾಜಕೀಯ ವಿರೋಧಿಗಳನ್ನು ನಿಗ್ರಹಿಸುವುದಾಗಿದೆ" ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಇದನ್ನು ಓದಿ: ದೆಹಲಿಯಲ್ಲಿನ ಬಡ ಕನ್ನಡಿಗರ ಕುಟುಂಬಗಳಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ನೆರವು

ಇನ್ನೊಂದೆಡೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶ್ರೀನಿವಾಸ್ (Srinivas BV) ತಾವು ಕಾನೂನುಬಾಹಿರವಾಗಿ ಏನೂ ಮಾಡದೇ ಇರುವುದರಿಂದ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. "ನಾವು ನಮ್ಮ ಕೆಲಸವನ್ನು ನಿಲ್ಲಿಸುವುದಿಲ್ಲ, ನಮ್ಮ ಸಣ್ಣ ಪ್ರಯತ್ನಗಳಿಂದ ಜೀವ ಉಳಿಸಲು ಸಹಾಯವಾಗುತ್ತವೆ ಎನ್ನುವುದಾದರೆ ನಮ್ಮ ಕೆಲಸವನ್ನು ನಿಲ್ಲಿಸುವುದಿಲ್ಲ ಅಥವಾ ಅಂತಹ ಪಿಐಎಲ್‌ಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಕಳೆದ ಒಂದು ವರ್ಷದಿಂದ ದೆಹಲಿಯ ಯೂತ್ ಕಾಂಗ್ರೆಸ್ ಕಚೇರಿಯೊಳಗೆ ವಾರ್ ರೂಂ ನ್ನು ನಿರ್ವಹಿಸುತ್ತಿದ್ದಾರೆ, ಇದು ಆಮ್ಲಜನಕ ಮತ್ತು ಔಷಧಿಗಳ ಸಹಾಯ ಅಥವಾ ವಿನಂತಿಗಳನ್ನು ಕೇಳುವ ಟ್ವೀಟ್‌ಗಳ ಮೇಲೆ ನಿಗಾ ವಹಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಕಳೆದ ವರ್ಷ ಅವರು "SOS IYC" ಅಡಿಯಲ್ಲಿ ಯೂತ್ ಕಾಂಗ್ರೆಸ್ ಸ್ವಯಂ ಸೇವಕರ ಜಾಲವನ್ನು ಸ್ಥಾಪಿಸಿದರು.

ಇದನ್ನು ಓದಿ: ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷನ ಹುದ್ದೆಗೆ ಕನ್ನಡಿಗನ ಹೆಸರು ಚಾಲ್ತಿ!

ಕೊರೋನಾದ ಎರಡನೇ ಅಲೆ ತೀವ್ರಗೊಂಡಂತಹ ಸಂದರ್ಭದಲ್ಲಿ ಬಹುತೇಕ ಜನರು ಟ್ವೀಟ್ ಮೂಲಕ ಶ್ರೀನಿವಾಸ್ ಅವರ ನೆರವನ್ನು ಕೋರಿದರು.ಅಂತಹ ಕೋರಿಕೆಗಳನ್ನು ಶ್ರೀನಿವಾಸ್ ಅವರು ತಮ್ಮ ಸ್ವಯಂ ಸೇವಕರ ನೆಟ್ ವರ್ಕ್ ನ್ನು ಬಳಿಸಿಕೊಂಡು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Read More