Home> Karnataka
Advertisement

ಶೀಲ ಶಂಕಿಸಿ ಪತ್ನಿ ಹತ್ಯೆ: ನೇಪಾಳ ಮೂಲದ ಆಸಾಮಿ ಅಂದರ್

ಮೊಬೈಲ್ ನಲ್ಲಿ ಮಾತನಾಡುತ್ತೀಯ ಎಂದು ಅನುಮಾನಿಸಿ ಪತ್ನಿಯನ್ನು  ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶೀಲ ಶಂಕಿಸಿ ಪತ್ನಿ ಹತ್ಯೆ: ನೇಪಾಳ ಮೂಲದ ಆಸಾಮಿ ಅಂದರ್

ಬೆಂಗಳೂರು: ಮೊಬೈಲ್ ನಲ್ಲಿ ಮಾತನಾಡುತ್ತೀಯ ಎಂದು ಅನುಮಾನಿಸಿ ಪತ್ನಿಯನ್ನು  ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೇಪಾಳ ಮೂಲದ ಕಮಲಾದೇವಿ(45) ಕೊಲೆಯಾದ ಮಹಿಳೆ.ಕೊಲೆ ಮಾಡಿದ ಪತಿರಾಯ ತೇಜ್ ಬಹದ್ದೂರ್ (52) ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.ನೇಪಾಳ (Nepal) ಮೂಲದ ಈ ದಂಪತಿ 20 ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿತ್ತು. ಮೊದಲು ಸಂಜಯನಗರದಲ್ಲಿ ವಾಸವಾಗಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಮನೆ ಬದಲಿಸಿ ಚನ್ನಸಂದ್ರದಲ್ಲಿ ವಾಸವಾಗಿದ್ದರು.ಇವರಿಗೆ ಒಬ್ಬ ಮಗ ಹಾಗೂ ಮಗಳಿದ್ದು, ಮಗಳನ್ನು ಮದುವೆ ಮಾಡಿಕೊಡಲಾಗಿತ್ತು. ಈ ಬಡಾವಣೆಗೆ ಬಂದ ಕೆಲವೇ ದಿನಗಳಲ್ಲಿ ಪತ್ನಿ ಮಗನನ್ನು ಬಿಟ್ಟು ತೇಜ್ ಬಹದ್ದೂರ್‌ ಹಂದಿ ಫಾರ್ಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. 

ಇದನ್ನೂ ಓದಿ: ಕಿರುತೆರೆಗೆ ಬಂಡವಾಳ ಹಾಕಿರೋ ನಟ, ನಟಿಯರು ಯಾರ‍್ಯಾರು ಗೊತ್ತಾ..?

ಮನೆ ಬಿಟ್ಟು ಹೋಗಿ ವಾಪಸ್ ಬಂದಿದ್ದ ಪತಿರಾಯ

ಬಿ.ಚನ್ನಸಂದ್ರದಲ್ಲಿ ತಾಯಿ ಮಗ ಇಬ್ಬರೇ ವಾಸವಾಗಿದ್ದರು. ಮಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ತೇಜ್ ಬಹದ್ದೂರ್ ವಾಪಸ್ ಮನೆಗೆ ಬಂದು ನಿನ್ನ ಜೊತೆಯಲ್ಲಿರುವುದಾಗಿ ಪತ್ನಿಗೆ ಹೇಳಿದ್ದ. ಬಂದ ನಂತರ ಬೇರೆಯವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡುವದನ್ನು ಗಮನಿಸಿ  ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ಚಾಕುವಿನಿಂದ ಮೂರು ಬಾರಿ ಇರಿದು ಕೊಲೆ

ನಿನ್ನೆ( ಶುಕ್ರವಾರ) ಮಗ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಇದೇ ವಿಚಾರವಾಗಿ ದಂಪತಿ ನಡುವೆ ರಾತ್ರಿ 8.30ರ ಸುಮಾರಿನಲ್ಲಿ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ತೇಜ್ ಬಹದ್ದೂರ್ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿ ಹೊಟ್ಟೆ ಹಾಗೂ ಕಿಬ್ಬೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಇರಿದಿದ್ದಾನೆ.ಚೂರಿ ಇರಿದವನೇ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಈ ವೇಳೆ ಕಮಲಾದೇವಿ ಸಹಾಯಕ್ಕಾಗಿ ತನ್ನ ಮೆಟ್ಟಿಲು ಇಳಿದು ಬಂದಿದ್ದಾಳೆ.ಈ ವೇಳೆ ರಕ್ತ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.ಕಮಲಾದೇವಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ತಕ್ಷಣ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಸಿದ್ದರಾಮಯ್ಯರಿಂದ ಏಕಪಾತ್ರಾಭಿನಯ: ಬಿಜೆಪಿ ವ್ಯಂಗ್ಯ

ಸ್ಥಳಕ್ಕೆ ಆಗಮಿಸಿದ ರಾಮಮೂರ್ತಿನಗರ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಅಂಬೇಡ್ಕರ್‌ ಆಸ್ಪತ್ರೆಗೆ ರವಾನಿಸಿ ಆರೋಪಿ ತೇಜ್ ಬಹದ್ದೂರ್ ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೂರ್ವ ವಿಭಾಗ ಡಿಸಿಪಿ  ಭೀಮಾಶಂಕರ್ ಗುಳೇದ್ ಪರೀಶಿಲನೆ ನಡೆಸಿ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Read More