Home> Karnataka
Advertisement

ಸಾಲು ಸಾಲು ರಜೆ ಹಿನ್ನೆಲೆ : ಲಗಾಮಿಲ್ಲದೆ ಏರಿಕೆಯಾಯಿತು ಬಸ್ ಟಿಕೆಟ್ ದರ ! ಊರ ಕಡೆ ಮುಖ ಮಾಡಿದವರಿಗೆ ಖಾಸಗಿ ಬಸ್ ಗಳ ಶಾಕ್

Bus Ticket Price Hike : ಹಬ್ಬಕ್ಕೆ ಊರಿಗೆ ಹೊರಡುವವರಿಗೆ ಖಾಸಗಿ ಬಸ್ ಗಳು ಶಾಕ್ ನೀಡಿವೆ. ಮನ ಬಂದನಂತೆ ಟಿಕೆಟ್ ದರದಲ್ಲಿ ಏರಿಕೆ ಮಾಡಿವೆ.

ಸಾಲು ಸಾಲು ರಜೆ ಹಿನ್ನೆಲೆ : ಲಗಾಮಿಲ್ಲದೆ ಏರಿಕೆಯಾಯಿತು ಬಸ್ ಟಿಕೆಟ್ ದರ ! ಊರ ಕಡೆ ಮುಖ ಮಾಡಿದವರಿಗೆ ಖಾಸಗಿ ಬಸ್ ಗಳ ಶಾಕ್

ಬೆಂಗಳೂರು : Bus Ticket Price Hike : ನಾಳೆಯಿಂದ ಸಾಲು ಸಾಲು ರಜೆ. ಯುಗಾದಿ ಹಬ್ಬಕ್ಕೆಂದು ಊರ ಕಡೆ ಮುಖ ಮಾಡಿದವರ ಸಂಖ್ಯೆಯೂ ಹೆಚ್ಚಾಗಿದೆ. ಇಂದು ರಾತ್ರಿಯೇ ಸಿಲಿಕಾನ್ ಸಿಟಿಯಿಂದ ತೆರಳಲು ಐಟಿ‌ ಮಂದಿ ಸಿದ್ಧರಾಗಿದ್ದಾರೆ. ಇನ್ನು ಕೆಲವರು ಕೆಲವರು ನಾಳೆ ರಾತ್ರಿ ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಿದ್ದಾರೆ. ಈ ನಡುವೆ, ಹಬ್ಬಕ್ಕೆ ಊರಿಗೆ ಹೊರಡುವವರಿಗೆ ಖಾಸಗಿ ಬಸ್ ಗಳು ಶಾಕ್ ನೀಡಿವೆ. ಮನ ಬಂದನಂತೆ ಟಿಕೆಟ್ ದರದಲ್ಲಿ ಏರಿಕೆ ಮಾಡಿವೆ. 

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಊರಿಗೆ ಹೊರಟವರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ಕೊಟ್ಟಿದ್ದಾರೆ. ಟಿಕೆಟ್ ದರವನ್ನು ಸಾಮಾನ್ಯ ದರಕ್ಕಿಂತ ದುಬಾರಿ ಮಾಡಲಾಗಿದೆ. ಟಿಕೆಟ್ ಬುಕ್ಕಿಂಗ್ ವೆಬ್ ಸೈಟ್ ನಲ್ಲಿಯೂ  ಹೆಚ್ಚಳ ಮಾಡಿದ ದರವನ್ನು ನಮೂದಿಸಲಾಗಿದೆ. ದರ ಏರಿಕೆ  ಟಿಕೆಟ್ ದರ ದುಪ್ಪಟ್ಟಾದರೂ ಬಹುತೇಕ ಎಲ್ಲಾ ಖಾಸಗಿ ಬಸ್ ಗಳು  ಭರ್ತಿಯಾಗಿರುವುದು ಆಶ್ಚರ್ಯ. ಇನ್ನು ಖಾಸಗಿ ಬಸ್ ಗಳು ಮನಸಿಗೆ ಬಂದಂತೆ ದರ ಏರಿಕೆ‌ ಮಾಡಿದರೂ ಸಾರಿಗೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ  ವಹಿಸಿದೆ. 

ಇದನ್ನೂ ಓದಿ : ಕೋಲಾರದಿಂದಲೇ ಲೋಕಸಭೆ ಪ್ರಚಾರಕ್ಕೆ ಕಾಂಗ್ರೆಸ್ ರಣಕಹಳೆ

ಏಪ್ರಿಲ್ 7 ರಂದು ಭಾನುವಾರ, 9 ರಂದು ಮಂಗಳವಾರ ಯುಗಾದಿ ಹಬ್ಬ, ಸೋಮವಾರ ಒಂದು ದಿನ ರಜೆ ಹಾಕಿದರೆ ಮೂರು ದಿನಗಳ ಸುದೀರ್ಘ ರಜೆ. ಇನ್ನು ಐಟಿ ಮಂದಿಗೆ ನಾಳೆ ಅಂದರೆ ಶನಿವಾರದಿಂದಲೇ ರಜೆ. ಹೀಗಾಗಿ ಬೆಂಗಳೂರಿನಿಂದ ತಮ್ಮ ಊರಿಗೆ ತೆರಳಲು ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಇನ್ನು ಮಧ್ಯ ಒಂದು ದಿನ ಬಿಟ್ಟರೆ ಮತ್ತೆ ರಂಜಾನ್ ರಜೆ. 13 ರಂದು ಎರಡನೇ ಶನಿವಾರ ರಜೆ ಹಾಗೂ14 ರಂದು ಭಾನುವಾರ. ಅಂದರೆ ಏಪ್ರಿಲ್ 7ರಿಂದ ಏಫ್ರಿಲ್ 14ರ ವರೆಗೆ ಬರೊಬ್ಬರಿ 5 ರಜೆ. ಹೀಗಾಗಿ ಕೆಲ ಸಿಬ್ಬಂದಿ ನಾಳೆಯಿಂದಲೇ ವಾರಪೂರ್ತಿ ಆಫೀಸ್ ಗೆ ರಜೆ ಹಾಕಲು ಪ್ಲ್ಯಾನ್ ಹಾಕಿದ್ದಾರೆ. ವಿದ್ಯಾರ್ಥಿಗಳಿಗೆ ರಜೆ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ, ಊರಿಗೆ ತೆರಳಲು ಪೋಷಕರೂ ಕೂಡಾ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಹಾಗಾಗಿಯೇ ಬಸ್ ಟಿಕೆಟ್ ಗೆ ಭಾರೀ ಡಿಮ್ಯಾಂಡ್.  

ರಜೆ ಬರುತ್ತಿದ್ದಂತೆಯೇ ಖಾಸಗಿ ಬಸ್‌ ಗಳು ಈ ರೀತಿ ಸುಲಿಗೆಗೆ ನಿಲ್ಲುವುದರ ವಿರುದ್ಧ  ಜನ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ಪಟ್ಟು ಹೆಚ್ಚಿಗೆ ಹಣ ನೀಡಿ ಇದೀಗ ಟಿಕೆಟ್ ಬುಕ್ ಮಾಡುವ ಸ್ಥಿತಿ ಪ್ರಯಾಣಿಕರದ್ದು. 

ಇದನ್ನೂ ಓದಿ : ದೇಶಕ್ಕೆ ಪ್ರಧಾನಿ ಮೋದಿ, ಬಳ್ಳಾರಿಗೆ ಶ್ರೀರಾಮುಲು: ಅರುಣಾ ಲಕ್ಷ್ಮಿ

ಬೆಂಗಳೂರು-ಶಿವಮೊಗ್ಗ
ಸಾಮಾನ್ಯ ದಿನದ ದರ     ₹450-₹600
ಇವತ್ತಿನ ಟಿಕೆಟ್ ದರ       ₹950- ₹1250

ಬೆಂಗಳೂರು- ಹುಬ್ಬಳಿ
ಇಂದಿನ ದರ               ₹600-   ₹1000
ಇಂದಿನ ಟಿಕೆಟ್           ₹1200-₹1600

ಬೆಂಗಳೂರು-ಮಂಗಳೂರು
ಸಾಮಾನ್ಯ ದಿನದ ದರ          ₹500-   ₹1000
ಇಂದಿನ ದರ                        ₹1000- ₹1400

ಬೆಂಗಳೂರು-ಕಲಬುರುಗಿ
ಸಾಮಾನ್ಯ ದಿನದ ದರ           ₹900- ₹1300
ಇಂದಿನ ದರ                        ₹1400-₹1900

ಬೆಂಗಳೂರು-ಮಡಿಕೇರಿ
ಸಾಮಾನ್ಯ ದಿನದ ದರ           ₹500-₹600
ಇಂದಿನ ದರ                         ₹950- ₹1200

ಬೆಂಗಳೂರು - ಉಡುಪಿ
ಸಾಮಾನ್ಯ ದಿನದ ದರ         ₹600-₹950
ಇಂದಿನ ದರ                       ₹1700-₹2200

ಬೆಂಗಳೂರು-ಧಾರವಾಡ
ಸಾಮಾನ್ಯ ದಿನದ ದರ         ₹650 -₹800
ಇಂದಿನ ದರ                       ₹1350-₹1750

ಬೆಂಗಳೂರು-ಬೆಳಗಾವಿ
ಸಾಮಾನ್ಯ ದಿನದ ದರ                ₹500   ₹800
ಇಂದಿನ ದರ                             ₹1300-₹1800

ಬೆಂಗಳೂರು - ದಾವಣಗೆರೆ
ಸಾಮಾನ್ಯ ದಿನದ ದರ                ₹450  ₹600
ಇಂದಿನ ದರ                             ₹900-₹1300

ಬೆಂಗಳೂರು - ಚಿಕ್ಕಮಗಳೂರು
ಸಾಮಾನ್ಯ ದಿನದ ದರ      ₹550  ₹600
ಇಂದಿನ ದರ                     ₹1100-₹1300

ಬೆಂಗಳೂರು - ಬೀದರ್ 
ಸಾಮಾನ್ಯ ದಿನದ ದರ        ₹850  ₹1200
ಇಂದಿನ ದರ                       ₹1600-₹1800

ಬೆಂಗಳೂರು - ರಾಯಚೂರು 
ಸಾಮಾನ್ಯ  ದಿನದ ದರ    ₹600  ₹900
ಇಂದಿನ ದರ.                  ₹1250-₹1600

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More