Home> Karnataka
Advertisement

ಹಿಜಾಬ್ ನಿಷೇಧ: ರಾಜ್ಯ ಬಂದ್ ಕರೆ ಕೊಟ್ಟರೆ ತಪ್ಪೇನು? ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ

ಹಿಜಾಬ್ ವಿವಾದದ ಕುರಿತಂತೆ ರಾಜ್ಯ ಹೈಕೋರ್ಟ್ ತೀರ್ಪಿನಿಂದಾಗಿ  ಅಸಮಾಧಾನಗೊಂಡಿರುವ ಸಮುದಾಯದ ಮುಖಂಡರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಆದರೆ, ಅವರು ನ್ಯಾಯಾಲಯದ ತೀರ್ಪು ಧಿಕ್ಕರಿಸಿ ಈ ಪ್ರತಿಭಟನೆ ಮಾಡುವುದಾಗಿ ಹೇಳಿಲ್ಲ ಎಂಬುದನ್ನು ಸಿದ್ದರಾಮಯ್ಯ ಉಲ್ಲೇಖಿಸಿದರು. 
 

 ಹಿಜಾಬ್ ನಿಷೇಧ: ರಾಜ್ಯ ಬಂದ್ ಕರೆ ಕೊಟ್ಟರೆ ತಪ್ಪೇನು? ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಹಿಜಾಬ್ ಇಸ್ಲಾಂ ಧರ್ಮದ ಮುಖ್ಯ ಭಾಗವಲ್ಲ ಎಂದು ತೀರ್ಪು ನೀಡಿರುವ ರಾಜ್ಯ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದರ ಜೊತೆಗೆ ಇಂದು ಕರ್ನಾಟಕ ಬಂದ್​ಗೆ ಕರೆ ನೀಡಿರುವ ಮುಸ್ಲಿಂ ಸಂಘಟನೆಗಳ ನಡೆಯ ಬಗ್ಗೆ ವಿಧಾನ ಸಭೆ ಕಲಾಪದಲ್ಲಿ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಬಂದ್, ಪ್ರತಿಭಟನೆ ಮಾಡೋದು ಅವರ ಹಕ್ಕು. ಇದು ತೀರ್ಪಿನ ವಿರುದ್ಧ ಪ್ರತಿಭಟನೆ ಅಲ್ಲ, ಸ್ವಲ್ಪ ಅಸಮಾಧಾನ ಆಗಿದೆ. ಹಾಗಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ, ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ ಎಂದರು.

ಹಿಜಾಬ್ ವಿವಾದದ ಕುರಿತಂತೆ ರಾಜ್ಯ ಹೈಕೋರ್ಟ್ ತೀರ್ಪಿನಿಂದಾಗಿ  ಅಸಮಾಧಾನಗೊಂಡಿರುವ ಸಮುದಾಯದ ಮುಖಂಡರು ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಆದರೆ, ಅವರು ನ್ಯಾಯಾಲಯದ ತೀರ್ಪು ಧಿಕ್ಕರಿಸಿ ಈ ಪ್ರತಿಭಟನೆ ಮಾಡುವುದಾಗಿ ಹೇಳಿಲ್ಲ ಎಂಬುದನ್ನು ಸಿದ್ದರಾಮಯ್ಯ ಉಲ್ಲೇಖಿಸಿದರು. 

ಇದನ್ನೂ ಓದಿ- Karnataka Bandh: ಹಿಜಾಬ್ ಧರಿಸಲು ಅನುಮತಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್

ಹಿಜಾಬ್ ವಿವಾದದ ಕುರಿತು ಹೈಕೋರ್ಟ್ (High Court) ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದವರು ಸುಪ್ರೀಂ ಕೋರ್ಟಿನಲ್ಲಿ  ಮೇಲ್ಮನವಿ ಹೋಗಬಹುದು, ಹೋಗಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಎಲ್ಲರಿಗೂ ಅವಕಾಶ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

ಉಡುಪಿ ಶಾಸಕ ರಘುಪತಿ ಭಟ್ ಈ ವಿಷಯ ಚರ್ಚೆ ಆರಂಭಿಸಿ, ಹಿಜಾಬ್ ಬಗ್ಗೆ ತೀರ್ಪು ಬಂದಿದೆ. ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗೋಕೆ ಅವಕಾಶ ಇದೆ. ಅವರು ಹೋಗಬಹುದು. ಈಗ ಬಂದ್ ಮಾಡೋದು, ಕೋರ್ಟ್ ತೀರ್ಪಿನ ಮೇಲೆ ಪ್ರಭಾವ ಬೀರಿದ್ದಾರೆ ಎಂದರೆ ಏನ್ ಅರ್ಥ? ಇಂತವರ ಮೇಲೆ ಕ್ರಮ ಆಗಬೇಕು ಎಂದರು.

ಇದಕ್ಕೆ ದ್ವನಿಗೂಡಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೋರ್ಟ್ ಆದೇಶದ ವಿರುದ್ಧ ಹೋರಾಟ ಮಾಡೋದು ಎಂದರೆ ಏನ್ ಅರ್ಥ.. ಬೇರೆ ಯಾವುದೇ ವಿಚಾರದ ಮೇಲೆ ಪ್ರತಿಭಟನೆ ಸರಿ. ಆದರೆ ಬಂದ್ ಮಾಡೋದು ಸರಿಯಲ್ಲ. ಕೋರ್ಟ್ ತೀರ್ಪು ಒಪ್ಪಲ್ಲ ಎಂದ್ರೆ ಎನ್ ಅರ್ಥ ಅವರ ಮೇಲೆ ಕ್ರಮ ಆಗಬೇಕು ಎಂದರು.

ಇದನ್ನೂ ಓದಿ- Hijab verdict:ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್‌ನ ನಿರ್ಧಾರದ ಬಗ್ಗೆ ಮೆಹಬೂಬಾ ಮುಫ್ತಿ ಹೇಳಿದ್ದೇನು!?

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೋರ್ಟ್ ತೀರ್ಪು ಒಪ್ಪಬೇಕು ಸರಿ, ಆದ್ರೆ ಶಾಂತಿಯುತವಾಗಿ ಬಂದ್ ಮಾಡಿದ್ರೆ ಸರ್ಕಾರ ನಿಲ್ಲಿಸೋಕೆ ಆಗತ್ತಾ ? ತೀರ್ಪು ಒಪ್ಪದೇ ಮೇಲ್ಮನವಿ ಹಾಕೋದು ಯಾಕೆ? ತೀರ್ಪು ಒಪ್ಪಿಲ್ಲ ಎಂದೇ ಅರ್ಥ ಅಲ್ವೆ. ಈಗ ಅವರು ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಾ ಇದ್ದಾರೆ ತಪ್ಪೇನಿದೆ ಎಂದು ಕೇಳಿದರು.

ಸಿದ್ದರಾಮಯ್ಯ ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಸಿಟಿ ರವಿ, ನಾನು ವಕೀಲ ಅಲ್ಲ , ಸಿದ್ದರಾಮಯ್ಯ ವಕೀಲರು. ಹಿಜಾಬ್ ತೀರ್ಪು ಒಪ್ಪದೇ ಮೇಲ್ಮನವಿ ಹಾಕಲು ಅವಕಾಶ ಇದೆ. ಆದ್ರೆ ಶಿಕ್ಷಣ ವ್ಯವಸ್ಥೆ ಮಾಡೋಕೆ ಅವಕಾಶ ಉಂಟಾ? ಬೆದರಿಕೆ ಹಾಕಿ ಪರಿಸರ ವಾತಾವರಣ ಮಾಡೋಕೆ ಅವಕಾಶ ಇದೆಯೇ? ಅಲ್ಲಿಯ ವಾತಾವರಣ ಹಾಳು ಮಾಡೋದು ಸರಿಯೇ? ಇದರಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಹಾ ಪಾಪ ಎಂದು ಹರಿಹಾಯ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More