Home> Karnataka
Advertisement

Hijab Row: ಪರೀಕ್ಷೆಗೆ ಗೈರಾದ ಹಿಜಾಬ್ ಐಕಾನ್ ಮುಸ್ಕಾನ್

Hijab Row: ಹಿಜಾಬ್ ಪ್ರಕರಣದಲ್ಲಿ 'ಅಲ್ಲಾಹು ಅಕ್ಬರ್' ಘೋಷಣೆ ಕೂಗುವ ಮೂಲಕ ಹಿಜಾಬ್ ಐಕಾನ್ ಆಗಿದ್ದ ಮುಸ್ಕಾನ್ (Muskan), ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ (PES College Mandya) ಇಂದು ಆರಂಭಗೊಂಡ ಪರೀಕ್ಷೆಗೆ ಗೈರಾಗಿದ್ದಾರೆ. 

Hijab Row: ಪರೀಕ್ಷೆಗೆ ಗೈರಾದ ಹಿಜಾಬ್ ಐಕಾನ್ ಮುಸ್ಕಾನ್

Karnataka Hijab Controversy -  ಹಿಜಾಬ್ ಪ್ರಕರಣದಲ್ಲಿ 'ಅಲ್ಲಾಹು ಅಕ್ಬರ್' ಘೋಷಣೆ ಕೂಗುವ ಮೂಲಕ ಹಿಜಾಬ್ ಐಕಾನ್ (Hijab Icon) ಎಂದೆನೆಸಿಕೊಂಡ ಮುಸ್ಕಾನ್, ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಇಂದು ಆರಂಭಗೊಂಡ ಪರೀಕ್ಷೆಗೆ ಗೈರಾಗಿದ್ದಾರೆ. ಇಂದು ಕಾಲೇಜಿನಲ್ಲಿ ಬಿ.ಕಾಮ್ ಪರೀಕ್ಷೆಗಳು ಆರಂಭಗೊಂಡಿದ್ದು, ಪರೀಕ್ಷಾ ಪ್ರವೇಶ ಪತ್ರವನ್ನು ಪಡೆದುಕೊಳ್ಳಲು ಅರ್ಧಗಂಟೆ ಕಾಲಾವಕಾಶ ನೀಡಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ-Karnataka Hijab Row: ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಎರಡನೇ ಅವಕಾಶ ಇಲ್ಲ, ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

 
ಬೆಳಗ್ಗೆ 9.30ಕ್ಕೆ ಆರಂಭವಾಗಿರುವ ಪರೀಕ್ಷೆಗೆ ಪರೀಕ್ಷಾ ಪ್ರವೇಶ ಪತ್ರವನ್ನು ಕೂಡ ಪಡೆದುಕೊಳ್ಳಲು ವಿದ್ಯಾರ್ಥಿನಿ ಮುಸ್ಕಾನ್ ಆಗಮಿಸಿಲ್ಲ ಎನ್ನಲಾಗಿದೆ. ಕಾಲೇಜಿನಲ್ಲಿ ನಡೆದ ಹಿಜಾಬ್ ಪ್ರತಿಭಟನೆಯ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಹಿಜಾಬ್ ಐಕಾನ್ ಎಂದೆನೆಸಿಕೊಂಡ  ಮುಸ್ಕಾನ್, ಇದುವರೆಗೂ ಕೂಡ ಕಾಲೇಜಿನ ಕಡೆಗೆ ಆಗಮಿಸದೇ ಇರುವ ಕಾರಣ ಮುಸ್ಕಾನ್ ಗೆ ಪರೀಕ್ಷೆಗಿಂತ ಹಿಜಾಬ್ ಮುಖ್ಯವಾಯ್ತಾ ಎಂಬ ಪ್ರಶ್ನೆ  ಏಳಲಾರಂಭಿಸಿದೆ.

ಇದನ್ನೂ ಓದಿ-Hijab Controversy: ತೀರ್ಪು ಪ್ರಕಟಿಸಿದ ಮೂವರು ನ್ಯಾಯಾಧೀಶರಿಗೆ 'Y' Category ಭದ್ರತೆ

ಇನ್ನೊಂದೆಡೆ ಕಾಲೇಜಿನಲ್ಲಿ ಹಿಜಾಬ್ ಗೆ ಅವಕಾಶ ನೀಡದಿದ್ದರೆ ಮುಸ್ಕಾನ್ ಳನ್ನು ಕಾಲೇಜಿಗೆ ಕಳುಹಿಸಲ್ಲ ಎಂದು ಆಕೆಯ ಪೋಷಕರು ಹೇಳಿದ್ದಾರೆ. ಜೊತೆಗೆ ಬೇರೆ ಕಾಲೇಜಿಗೆ ಸೇರಿಸುವ ಬಗ್ಗೆಯೂ ಕೂಡ ಚಿಂತನೆ ನಡೆಸಿರುವ ಅವರು, ಹಿಜಾಬ್ ಗೆ ಅವಕಾಶ ಇರುವ ಕಾಲೇಜಿಗೆ ತಮ್ಮ ಮಗಳನ್ನು ಸೇರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More