Home> Karnataka
Advertisement

Hijab Controversy: ಕ್ಯಾಮರಾ ನೋಡಿ 'ಅಲ್ಲಾಹು ಅಕ್ಬರ್' ಕೂಗಿದ ವಿದ್ಯಾರ್ಥಿನಿ, ಉತ್ತರ ರೂಪದಲ್ಲಿ ಬಂತು 'ಜೈ ಶ್ರೀರಾಮ್', ಕಿಚ್ಚು ಹೆಚ್ಚಿಸುತ್ತಿರುವ ಹಿಜಾಬ್ ವಿವಾದ

Karnataka Hijab Case: ವೈರಲ್ ಆಗಿರುವ ವಿಡಿಯೋದಲ್ಲಿ (Viral Video) ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯೋರ್ವಳನ್ನು ಸುತ್ತುವರೆದ ಜನರು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇನ್ನೊಂದೆಡೆ ಹೇಳಿಕೆ ನೀಡಿರುವ ವಿದ್ಯಾರ್ಥಿನಿ, ಘೋಷಣೆ ಕೂಗುವವರಲ್ಲಿ ಕಾಲೇಜ್ ವಿದ್ಯಾರ್ಥಿಗಳ ಹೊರತಾಗಿ ಬಾಹ್ಯ ಜನರು ಕೂಡ ಶಾಮೀಲಾಗಿದ್ದಾರೆ ಎಂದು ಹೇಳಿದ್ದಾಳೆ.

Hijab Controversy: ಕ್ಯಾಮರಾ ನೋಡಿ 'ಅಲ್ಲಾಹು ಅಕ್ಬರ್' ಕೂಗಿದ ವಿದ್ಯಾರ್ಥಿನಿ,  ಉತ್ತರ  ರೂಪದಲ್ಲಿ ಬಂತು 'ಜೈ ಶ್ರೀರಾಮ್', ಕಿಚ್ಚು ಹೆಚ್ಚಿಸುತ್ತಿರುವ ಹಿಜಾಬ್ ವಿವಾದ

ಬೆಂಗಳೂರು: Karnataka Hijab Controversy - ರಾಜ್ಯದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ತೊಡುವ ವಿವಾದ (The Hijab Controversy Is Catching Fire) ಇದೀಗ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಮಂಗಳವಾರವೂ ಇಂತಹ ಕೆಲವು ವಿಡಿಯೋಗಳು ಮುನ್ನೆಲೆಗೆ ಬಂದಿದ್ದು, ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟದ ಘಟನೆಗಳೂ ನಡೆದಿವೆ. ಏತನ್ಮಧ್ಯೆ, ಮತ್ತೊಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಸ್ಕೂಟಿ ಮೇಲೆ ಹಿಜಾಬ್ ಧರಿಸಿ ಬಂದ  ಹುಡುಗಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದನ್ನುನೀವು ಗಮನಿಸಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿಯಂತೆ ಹರಡುತ್ತಿದೆ ಈ ವಿಡಿಯೋ

ಯುವತಿಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನೋಡು ನೋಡುತ್ತಿದ್ದಂತೆ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹಿಜಾಬ್ ಧರಿಸಿ ದ್ವಿಚಕ್ರ ವಾಹನದ ಮೇಲೆ ಬಂದ ಯುವತಿಯೋರ್ವಳನ್ನು ಯುವತಿಯನ್ನು ಸುತ್ತುವರೆದ ಕೆಲ ಜನರು ಧಾರ್ಮಿಕ ಘೋಷಣೆಗಳನ್ನೂ ಕೂಗುತ್ತಿದ್ದಾರೆ. ಇನ್ನೊಂದೆಡೆ ಇದಕ್ಕೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ, ತನ್ನನ್ನು ಸುತ್ತುವರೆದ ವಿದ್ಯಾರ್ಥಿಗಳಲ್ಲಿ ಹೊರಗಿನವರು ಕೂಡ ಶಾಮೀಲಾಗಿದ್ದಾರೆ ಎಂದು ಹೇಳಿದ್ದಾಳೆ.

ವಿಡಿಯೋದಲ್ಲಿ ಅಂತದ್ದೇನಿದೆ?
ಓರ್ವ ವಿದ್ಯಾರ್ಥಿನಿ ಸ್ಕೂಟಿ ಮೇಲೆ ಕಾಲೇಜಿಗೆ ಆಗಮಿಸುತ್ತಾಳೆ. ತನ್ನ ಸ್ಕೂಟಿಯನ್ನು ಪಾರ್ಕ್ ಮಾಡಿದ ವಿದ್ಯಾರ್ಥಿನಿಯನ್ನು ಗಮನಿಸಿದ ಅದೇ ಕಾಲೇಜಿನ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗೂ ಕೂಗಿಕೊಳ್ಳಲು ಆರಂಭಿಸುತ್ತಾರೆ. ಅವರ ಈ ಕೂಗು ನಿಧಾನಕ್ಕೆ 'ಜೈ ಶ್ರೀರಾಮ್' ಘೋಷಣೆಯಾಗಿ ಪರಿವರ್ತನೆಯಾಗುತ್ತದೆ (In Response Voices Came Jai Shri Ram). ಯಾವ ವಿದ್ಯಾರ್ಥಿನಿಯ ಜೊತೆಗೆ ಈ ಘಟನೆ ನಡೆದಿದೆಯೋ ಆ ವಿದ್ಯಾರ್ಥಿನಿ ಹೆಸರು ಮುಸ್ಕಾನ್ ಎನ್ನಲಾಗಿದ್ದು, ಅವಳು ಕಾಲೇಜಿನ ಬಿ.ಫಾರ್ಮ್ ವಿದ್ಯಾರ್ಥಿನಿಯಾಗಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ-ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿ, ಆನ್‌ಲೈನ್ ತರಗತಿ ಆರಂಭಿಸಿ: ಸಿದ್ದರಾಮಯ್ಯ

'ಅಲ್ಲಾಹ್ ಹು ಅಕ್ಬರ್' ಘೋಷಣೆ ಮೊಳಗಿಸಿದ ವಿದ್ಯಾರ್ಥಿನಿ (The Girl Shouted Allah Hu Akbar)
ಸ್ಕೂಟಿ ಪಾರ್ಕ್ ಮಾಡಿದ ಯುವತಿ ನಿಧಾನಕ್ಕೆ ತನ್ನ ಕ್ಲಾಸ್ ಕಡೆಗೆ ಸಾಗುತ್ತಾಳೆ. ವಿದ್ಯಾರ್ಥಿಗಳತ್ತ ನೋಡುತ್ತಾ ಆಕೆ ಎರಡು ಬಾರಿ 'ಅಲ್ಲಾಹ್ ಹು ಅಕ್ಬರ್' ಘೋಷಣೆ ಕೂಗುತ್ತಾಳೆ. ಏತನ್ಮಧ್ಯೆ ಮಧ್ಯ ಪ್ರವೇಶಿಸಿದ ಕಾಲೇಜಿನ ಸಿಬ್ಬಂಧಿ, ವಿದ್ಯಾರ್ಥಿನಿಗೆ ಕ್ಲಾಸ್ ಗೆ ತೆರಳಲು ಸೂಚಿಸುತ್ತಾರೆ. ವಿದ್ಯಾರ್ಥಿನಿ ಕ್ಲಾಸ್ ಕಡೆಗೆ ಸಾಗುತ್ತಾಳೆ ಮತ್ತು ವಿದ್ಯಾರ್ಥಿಗಳ ಗುಂಪು ಆಕೆಯನ್ನು ಹಿಂಬಾಲಿಸುತ್ತದೆ. ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಮುಸ್ಕಾನ್ ಹತ್ತಿರಕ್ಕೆ ತಲುಪದಂತೆ ತಡೆಯುತ್ತಾರೆ.

ಇದನ್ನೂ ಓದಿ-ರಾಜ್ಯದಲ್ಲಿ ಒಂದು ವಾರ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿಸಿ: ಡಿ.ಕೆ.ಶಿವಕುಮಾರ್

ಕ್ಯಾಮರಾ ನೋಡಿ ವಿದ್ಯಾರ್ಥಿನಿಯ ಪ್ರಶ್ನೆಗಳ ಸುರಿಮಳೆ
ಈ ನಡುವೆ ಘಟನೆಯನ್ನು ಸೆರೆ ಹಿಡಿಯುತ್ತಿದ್ದ ಕ್ಯಾಮರಾ, ಮುಸ್ಕಾನ್ ವರೆಗೆ ತಲುಪುತ್ತದೆ. ಕ್ಯಾಮರಾ ಗಮನಿಸುತ್ತಲೇ ಮುಸ್ಕಾನ್ ಮತ್ತಷ್ಟು ಕೋಪಗೊಂಡು ಕಿರುಚಾಡಲು ಆರಂಭಿಸುತ್ತಾಳೆ. ಇವರು ನಮ್ಮ ಬುರ್ಖಾ ಏಕೆ ತೆಗೆಯಲು ಬಯಸುತ್ತಿದ್ದಾರೆ? ಇವರಿಗೆ ಬುರ್ಖಾ ತೆಗೆಯಿಸುವ ಹಕ್ಕು ಯಾರು ನೀಡಿದರು?' ಎಂದು ಪ್ರಶ್ನಿಸಿ ನಂತರ ಅವು ಕಾಲೇಜು ಕಟ್ಟಡಕ್ಕೆ ಪ್ರವೇಶಿಸುತ್ತಾಳೆ.

ಇದನ್ನೂ ಓದಿ -Hijab Row: ‘ನೆರೆಮನೆಗೆ ಬೆಂಕಿ ಬಿದ್ದಾಗ ಕಾಂಗ್ರೆಸ್ ಮೈ ಕಾಯಿಸಿಕೊಳ್ಳುವ ಬುದ್ಧಿ ತೋರುತ್ತಿದೆ’

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More