Home> Karnataka
Advertisement

Hijab Controversy: ತೀರ್ಪು ಪ್ರಕಟಿಸಿದ ಮೂವರು ನ್ಯಾಯಾಧೀಶರಿಗೆ 'Y' Category ಭದ್ರತೆ

Karnataka Hijab Row - ಹಿಜಾಬ್ ವಿವಾದದಲ್ಲಿ ತೀರ್ಪು ಪ್ರಕಟಿಸಿದ ಮೂವರು ನ್ಯಾಯಾಧೀಶರಿಗೆ ಜೀವ ಬೆದರಿಕೆ ಬಂದ ಹಿನ್ನೆಲೆ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಲಂಕುಷ ತನಿಖೆಗೆ ಆದೇಶಿಸಿದ್ದಾರೆ.
 

Hijab Controversy: ತೀರ್ಪು ಪ್ರಕಟಿಸಿದ ಮೂವರು ನ್ಯಾಯಾಧೀಶರಿಗೆ 'Y' Category ಭದ್ರತೆ

Hijab Row - ಕರ್ನಾಟಕದಲ್ಲಿ ಹಿಜಾಬ್ ವಿವಾದಕ್ಕೆ (Hijab Controversy) ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ ಮೂವರು ನ್ಯಾಯಾಧೀಶರಿಗೆ ಬಸವರಾಜ ಬೊಮ್ಮಾಯಿ ಸರ್ಕಾರ 'ವೈ' ಕೆಟಗರಿ ಭದ್ರತೆಯನ್ನು (Y Category Security) ಒದಗಿಸಿದೆ. ಮೂವರು ನ್ಯಾಯಾಧೀಶರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ನ್ಯಾಯಮೂರ್ತಿಗಳಿಗೆ ಭದ್ರತೆ ಒದಗಿಸುವುದಾಗಿ ಕರ್ನಾಟಕ ಸರ್ಕಾರ ಭರವಸೆ ನೀಡಿತ್ತು. ಶುಕ್ರವಾರವೇ ಮೂವರು ನ್ಯಾಯಾಧೀಶರಿಗೆ ವೈ ಕೆಟಗರಿ ಭದ್ರತೆ ಸಿಕ್ಕಿದೆ.

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ವಿಧಾನಸೌಧ ಪೊಲೀಸ್ ಠಾಣೆಗೆ ಬಂದ ದೂರಿನ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಾಸ್ತವದಲ್ಲಿ, ತೀರ್ಪು ಪ್ರಕಟಿಸಿದ ಮೂವರು ನ್ಯಾಯಾಧೀಶರನ್ನು ಕೊಲ್ಲುವುದಾಗಿ ಕೆಲವರು  ಬೆದರಿಕೆ ಹಾಕಿದ್ದರು.

ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬೊಮ್ಮಾಯಿ, ‘ಹಿಜಾಬ್ ಕುರಿತು ತೀರ್ಪು ನೀಡಿದ ಮೂವರೂ ನ್ಯಾಯಮೂರ್ತಿಗಳಿಗೂ ‘ವೈ’ ಕೆಟಗರಿ ಭದ್ರತೆ ನೀಡಲು ನಿರ್ಧರಿಸಿದ್ದೇವೆ. ಕೆಲವರು ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿರುವ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಡಿಜಿ ಮತ್ತು ಐಜಿ ಅವರಿಗೆ ಸೂಚಿಸಿದ್ದೇನೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ-Serial Blast In Sialkot Of Pakistan: ಪಾಕಿಸ್ತಾನದ ಸಿಯಾಲ್ಕೊಟ್ ನಲ್ಲಿ ಸರಣಿ ಬಾಂಬ್ ಬ್ಲಾಸ್ಟ್, ಸೇನಾ ನೆಲೆಗೆ ಬೆಂಕಿ

ಸರ್ಕಾರ ಏಕೆ ಭದ್ರತೆ ನೀಡಿದೆ?
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ಇಬ್ಬರನ್ನು ಶನಿವಾರ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಲವು ದೂರುಗಳು ದಾಖಲಾಗಿದ್ದವು. ನ್ಯಾಯಾಧೀಶರಿಗೆ ಭದ್ರತೆ ನೀಡುವಂತೆ ಸರಕಾರದ ಮೇಲೆ ನಿರಂತರ ಒತ್ತಡ ಹೇರಲಾಗಿತ್ತು.

ಇದನ್ನೂ ಓದಿ-ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳಿಗೆ ಮಾಸಿಕ 1000 ರೂ ನೆರವು ಘೋಷಿಸಿದ ತಮಿಳುನಾಡು ಸರ್ಕಾರ

ಮೂವರು ನ್ಯಾಯಾಧೀಶರ ತೀರ್ಪು ಏನಾಗಿತ್ತು?
ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳಿಗೆ ಹಾಜರಾಗಲು ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. ವಿಷಯ ಹೈಕೋರ್ಟ್ (Karnataka High Court) ಮೆಟ್ಟಿಲೇರಿತ್ತು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಎಂ ಜೆಬುನ್ನಿಸಾ ಅವರ ವಿಶೇಷ ಪೀಠವು ಹಿಜಾಬ್ ವಿವಾದದ ಕುರಿತು ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸಿದೆ. ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಇದನ್ನೂ ಓದಿ-RRR ಪ್ರೀ ರಿಲೀಸ್ ಇವೆಂಟ್ : ಪ್ರೇಕ್ಷಕರಿಂದ ನೂಕು ನುಗ್ಗಲು, ಪೊಲೀಸರಿಂದ ಲಘು ಲಾಠಿ ಪ್ರಹಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More