Home> Karnataka
Advertisement

ಮಹಾ ಮಳೆಗೆ "ಮಣ್ಣು" ಪಾಲಾದ ಮನೆ

ಮರಗಿಡಿ ಗ್ರಾಮದಲ್ಲಿ ಐದು ಬಡ ಕುಟುಂಬಗಳು ವಾಸಿಸುತ್ತಿದ್ದು, ಶಾಶ್ವತ ನೆಲೆಯಿಲ್ಲದೆ ತಾತ್ಕಾಲಿಕವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಎಲ್ಲರೂ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಾಗಿದ್ದು, ಮನೆಗಳಿಗೆ ಇದುವರೆಗೂ ಹಕ್ಕುಪತ್ರ ಕೂಡ ನೀಡಿಲ್ಲ. 

ಮಹಾ ಮಳೆಗೆ

Rain Effect: ಗುಡ್ಡಕುಸಿದು ಮಣ್ಣಿನಡಿ ಸಿಲುಕಿರುವ ಪಾತ್ರೆ, ಮನೆ ಬಳಕೆ ವಸ್ತುಗಳು... ಅದನ್ನೇಲ್ಲ ನೋಡುತ್ತ ಕೈ ಕಟ್ಟಿಗೆ ಮನೆ ಮುಂದೆ ನಿಂತಿರುವ ಸಂತ್ರಸ್ತರು. ಈ ದೃಶ್ಯ ಕಂಡು ಬಂದಿದ್ದು ಸಕಲೇಶಪುರ ತಾಲ್ಲೂಕಿನ ಮರಗಿಡಿ ಗ್ರಾಮದಲ್ಲಿ. 

ಮಲೆನಾಡು ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದು, ಮಳೆಯ ಆರ್ಭಟಕ್ಕೆ ಮನೆ ಪಕ್ಕದ ಗುಡ್ಡ ಕುಸಿದು, ಎರಡು ಮನೆಗಳಿಗೆ ಹಾನಿಯಾಗಿದೆ. ಸಕಲೇಶಪುರ  ತಾಲ್ಲೂಕಿನ ಮರಗಿಡಿ ಗ್ರಾಮದ ಕಮಲಮ್ಮ, ಗೌರಮ್ಮ ಎಂಬುವವರಿಗೆ ಸೇರಿದ ವಾಸದ ಮನೆಗಳ ಮೇಲೆ ಭಾರೀ ಪ್ರಮಾಣದ ಮಣ್ಣು ಕುಸಿದಿದ್ದು, ಮನೆಯೊಳಗೆಲ್ಲಾ ಮಣ್ಣು ತುಂಬಿಕೊಂಡಿದೆ. 

ಇದನ್ನೂ ಓದಿ- ನೈಸ್ ರಸ್ತೆ ಯೋಜನೆ ಸಂಪೂರ್ಣ ವಶಕ್ಕೆ ಪಡೆಯಲು ಜೆಡಿಎಸ್-ಬಿಜೆಪಿ ಪಕ್ಷಗಳ ಆಗ್ರಹ..!

ಮಣ್ಣು ಕುಸಿಯುವ ಶಬ್ದಕ್ಕೆ ಮನೆಯೊಳಗಿದ್ದವರು ಹೊರ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಇನ್ನೂ ಈ ದುರ್ಘಟನೆಯಿಂದಾಗಿ ಮನೆಯಲ್ಲಿದ್ದ ಪಾತ್ರೆಗಳು, ಪೀಠೋಪಕರಣ ಮಣ್ಣಿನಡಿ ಸಿಲುಕಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲಾ ಮಣ್ಣು ಪಾಲಾಗಿವೆ. 

ಮರಗಿಡಿ ಗ್ರಾಮದಲ್ಲಿ ಐದು ಬಡ ಕುಟುಂಬಗಳು ವಾಸಿಸುತ್ತಿದ್ದು, ಶಾಶ್ವತ ನೆಲೆಯಿಲ್ಲದೆ ತಾತ್ಕಾಲಿಕವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಎಲ್ಲರೂ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಾಗಿದ್ದು, ಮನೆಗಳಿಗೆ ಇದುವರೆಗೂ ಹಕ್ಕುಪತ್ರ ಕೂಡ ನೀಡಿಲ್ಲ. ನಿವೇಶನವಿಲ್ಲದೆ ಬಡ ಕುಟುಂಬಗಳ ಪರದಾಡುತ್ತಿದ್ದು ಎತ್ತರದ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಒಂದೆಡೆ ಮನೆಯ ಮೇಲೆ ಮಣ್ಣು, ಬಂಡೆ ಕುಸಿಯುವ ಆತಂಕವಿದ್ದರೆ, ಇನ್ನೊಂದೆಡೆ ಮನೆಗಳೇ ಕುಸಿಯುವ ಭಯ ಈ ಐದು ಕುಟುಂಬಗಳನ್ನು ಕಾಡುತ್ತಿದೆ. 

ಇದನ್ನೂ ಓದಿ- Tumakuru: ವ್ಯಕ್ತಿಯ ಪ್ರಾಣ ಉಳಿಸಲು ಬಸ್ ಸಹಿತ ಆಸ್ಪತ್ರೆಗೆ ಬಂದ ಚಾಲಕ..!

ಮಳೆ ಮುಂದುವರಿದಿದ್ದು ಮನೆಯ ಮೇಲೆ ಬಂಡೆ ಕುಸಿಯುವ ಆತಂಕ ಎದುರಾಗಿದ್ದು, ಜೀವ ಭಯದಲ್ಲೇ ಬಡ ಕುಟುಂಬಗಳು ಬದುಕುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಹಕ್ಕಪತ್ರ ಅಥವಾ ನಿವೇಶನ ನೀಡುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More