Home> Karnataka
Advertisement

Hasanamba Temple: ವ್ಹೀಲ್‌ಚೇರ್‌ನಲ್ಲಿ ಬಂದು ಹಾಸನಾಂಬೆ ದರ್ಶನ ಪಡೆದ ಮಾಜಿ ಪ್ರಧಾನಿ ದೇವೇಗೌಡರು

Hasanamba Darshana 2023: ಶುಕ್ರವಾರ ಶಕ್ತಿದೇವತೆಯ ದರ್ಶನಕ್ಕೆ ಭಕ್ತರ ದಂಡೇ ಹರಿದುಬಂದಿತ್ತು. ಇಂದಿನಿಂದ  12 ದಿನ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಭಕ್ತರಿಗೆ ಹಾಸನಾಂಬೆ ದರ್ಶನ ದೊರೆಯಲಿದೆ. ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

Hasanamba Temple: ವ್ಹೀಲ್‌ಚೇರ್‌ನಲ್ಲಿ ಬಂದು ಹಾಸನಾಂಬೆ ದರ್ಶನ ಪಡೆದ ಮಾಜಿ ಪ್ರಧಾನಿ ದೇವೇಗೌಡರು

ಹಾಸನ: ವ್ಹೀಲ್‌ಚೇರ್‌ನಲ್ಲಿ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನಾಂಬೆಯ ದರ್ಶನ ಪಡೆದರು. ಪತ್ನಿ ಚೆನ್ನಮ್ಮ ಜೊತೆ ಎಚ್‍ಡಿಡಿಯವರು ತಾಯಿಯ ದರ್ಶನ ಪಡೆದುಕೊಂಡರು.

ತಮ್ಮ ಕುಟುಂಬ ಸಮೇತ ಹಾಸನಾಂಬ ದೇವಿಯ ದೇವಸ್ಥಾನಕ್ಕೆ ಆಗಮಿಸಿದ ದೇವೇಗೌಡರು ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ತಾಯಿ ಹಾಸನಾಂಬೆಯ ಮುಂದೆ ಎಚ್‍ಡಿಡಿ ಧ್ಯಾನಸ್ಥರಾದರು. ದೇವೇಗೌಡರ ಫ್ಯಾಮಿಲಿ ಪ್ರತಿವರ್ಷ ಹಾಸನಾಂಬೆ ದೇವಿ ದರ್ಶನ ಪಡೆಯುತ್ತದೆ. ಅದೇ ರೀತಿ ಈ ಬಾರಿ ಪುತ್ರಿ ಅನಸೂಯ ಮಂಜುನಾಥ್ ಸೇರಿದಂತೆ ಕುಟುಂಬಸ್ಥರು ದೇವೇಗೌಡ ದಂಪತಿಗೆ ಸಾಥ್ ನೀಡಿದರು. ವ್ಹೀಲ್‌ಚೇರ್‌ನಲ್ಲಿ ದೇಗುಲಕ್ಕೆ ಬಂದ ಎಚ್‍ಡಿಡಿ ದಂಪತಿಯನ್ನು ಅಧಿಕಾರಿಗಳಾದ ಡಿಸಿ ಸತ್ಯಭಾಮಾ, ಎಡಿಸಿ ಶಾಂತಲಾ ಮತ್ತು ಎಸಿ ಮಾರುತಿ ಅವರು ದೇವಿಯ ದರ್ಶನಕ್ಕೆ ಕರೆದೊಯ್ದರು.

ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಸ್ವಪಕ್ಷಿಯ ಶಾಸಕರ ಹೇಳಿಕೆ ವಿಚಾರ

ಹಾಸನಾಂಬೆ ದರ್ಶನ ಪಡೆದ ರೇವಣ್ಣ

ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಶುಕ್ರವಾರ ಬೆಳ್ಳಂಬೆಳಿಗ್ಗೆ ಹಾಸನಾಂಬೆ ದೇವಿಯ ದರ್ಶನ ಪಡೆದುಕೊಂಡರು. ಇಂದು ಶುಕ್ರವಾರ ಹಿನ್ನೆಲೆ ಮೊದಲ ದಿನ ಬೆಳಿಗ್ಗೆಯೇ ತಮ್ಮ ಆಪ್ತರ ಜೊತೆ ಹಾಸನಾಂಬೆ ತಾಯಿ ದರ್ಶನಕ್ಕೆ ಆಗಮಿಸಿದ ಹೊಳೆನರಸೀಪುರ ಶಾಸಕ ರೇವಣ್ಣನವರು ತಾಯಿಗೆ ಮೊದಲ ಪೂಜೆಗೆ ಸಲ್ಲಿಸಿದರು.

ದೇವಾಲಯಕ್ಕೆ ಭಕ್ತರ ದಂಡು

ಹಾಸನಾಂಬೆಯ ಸಾರ್ವಜನಿಕ ದರ್ಶನೊತ್ಸವ ಇಂದಿನಿಂದ ಆರಂಭವಾಗಲಿದ್ದು, ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದರು. ಶುಕ್ರವಾರ ಶಕ್ತಿದೇವತೆಯ ದರ್ಶನಕ್ಕೆ ಭಕ್ತರ ದಂಡೇ ಹರಿದುಬಂದಿತ್ತು. ಇಂದಿನಿಂದ  12 ದಿನ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಭಕ್ತರಿಗೆ ಹಾಸನಾಂಬೆ ದರ್ಶನ ದೊರೆಯಲಿದೆ. ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಇಂದು ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ಕಾಯುತ್ತಿದ್ದರು. ವರ್ಷದ ಬಳಿಕ ಭಕ್ತರು ಶಕ್ತಿ ದೇವತೆ ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ.  

ಇದನ್ನೂ ಓದಿ: ಮೌಢ್ಯ ಗಳಲ್ಲಿ ನಂಬಿಕೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More