Home> Karnataka
Advertisement

Sadananda Gowda : ಬ್ಲಾಕ್ ಫಂಗಸ್ ಸೋಂಕಿಗೆ ರಾಜ್ಯಕ್ಕೆ 1,600 ಬಾಟಲಿ ಔಷಧಿ..!

ಇಲ್ಲಿಯವರೆಗೆ ರಾಜ್ಯಕ್ಕೆ ಒಟ್ಟು 1,660 ಬಾಟಲಿ ಔಷಧಿಗಳು ಬಂದಿವೆ.

Sadananda Gowda : ಬ್ಲಾಕ್ ಫಂಗಸ್ ಸೋಂಕಿಗೆ ರಾಜ್ಯಕ್ಕೆ 1,600 ಬಾಟಲಿ ಔಷಧಿ..!

ಬೆಂಗಳೂರು : ದೇಶದ ವಿವಿಧ ರಾಜ್ಯಗಳಿಗೆ ಇಂದು ಕೇಂದ್ರ ಸರ್ಕಾರ 'ಬ್ಲ್ಯಾಕ್ ಫಂಗಸ್' ಗೆ ಇಂಜಕ್ಷನ್ ಹಂಚಿಕೆ ಮಾಡಲಾಗಿದೆ. ಅದ್ರಲ್ಲಿ ರಾಜ್ಯಕ್ಕೆ ಆಂಫೊಟೆರಿಸಿನ್ ಬಿ 1,270 ವಯಲ್ಸ್ ಗಳನ್ನು ನೀಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

'ಬ್ಲ್ಯಾಕ್ ಫಂಗಸ್'(Black Fungus) ಪ್ರಕರಣಗಳು ಮೊದಲು ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಕಂಡುಬಂದಿದ್ದವು. ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಮಾತ್ರ ವರದಿ ಆಗಿವೆ, ಹಾಗಾಗಿ ಮೆಡಿಸಿನ್ಸ್   ಬೇಡಿಕೆ ಹೆಚ್ಚಾಗಿದೆ. 'ಬ್ಲ್ಯಾಕ್ ಫಂಗಸ್' ಚಿಕಿತ್ಸೆಗೆ ಬಳಸಲಾಗುವ ಆಂಫೊಟೆರಿಸಿನ್-ಬಿ ಅನ್ನು ಮೈಲಾನ್ ಲ್ಯಾಬ್ಸ್ ಆಮದು ಮಾಡಿಕೊಳ್ಳುತ್ತಿದೆ, ಇನ್ನೂ ದೇಶದಲ್ಲಿ ಐದು ಕಂಪನಿಗಳು ತಯಾರಿಸುತ್ತಿವೆ. ಮೇ ಅಂತ್ಯದ ವೇಳೆಗೆ ದೇಶದಲ್ಲಿ 1.63 ಲಕ್ಷ ಬಾಟಲಿ ಔಷಧಿ ತಯಾರಿಸಲಾಗುತ್ತಿದೆ. ಇಲ್ಲಿಯವರೆಗೆ ರಾಜ್ಯಕ್ಕೆ ಒಟ್ಟು 1,660 ಬಾಟಲಿ ಔಷಧಿಗಳು ಬಂದಿವೆ. ಮೈಲಾನ್ ಲ್ಯಾಬ್ಸ್ ನಿಂದ 40,000 ಬಾಟಲಿ ಔಷಧಿ ಇಂದು  ದೇಶಕ್ಕೆ ಆಮದು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ : Heavy Rainfall : ರಾಜ್ಯದಲ್ಲಿ ಮೇ 25 ರವರೆಗೆ ಗುಡುಗು ಸಿಡಿಲು ಸಹಿತ ಭಾರೀ ಮಳೆ : ಹವಾಮಾನ ಇಲಾಖೆ

ದೇಶದಲ್ಲಿ ಐದು ಕಂಪನಿಗಳಿಗೆ ತಯಾರಿಸಲು ಪರವಾನಗಿ ನೀಡಲಾಗಿದೆ. ಇದೆ ತಿಂಗಳಲ್ಲಿ ಆಂಫೊಟೆರಿಸಿನ್-ಬಿ(Amphotericin B) ಒಟ್ಟು 3,63,000 ಬಾಟಲಿ ಔಷಧಿ ಆಮದು ಮಾಡಿಕೊಳ್ಳಲಾಗುವುದು, ಇದರ ಪರಿಣಾಮವಾಗಿ ಒಟ್ಟು 5,26752 ಬಾಟಲುಗಳು ಲಭ್ಯವಿವೆ. ಜೂನ್ ನಲ್ಲಿ 3,15,000 ಬಾಟಲುಗಳನ್ನು ಆಮದು ಮಾಡಿಕೊಳ್ಳಲಾಗುವುದು. ಜೂನ್ ನಲ್ಲಿ ದೇಶಿಯ 5,70,114 ಬಾಟಲಿ ಔಷಧಿ ಲಭ್ಯವಿರುತ್ತದೆ ಎಂದು  ಸದಾನಂದ ಗೌಡ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : One Nation One Ration Card : ಪಡಿತರ ಚೀಟಿದಾರರಿಗೊಂದು ಸಿಹಿ ಸುದ್ದಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More