Home> Karnataka
Advertisement

ನೂತನ ಸಂಸತ್ ಭವನ ಕಟ್ಟಡಕ್ಕೆ 'ಕರ್ನಾಟಕದ ಪುರೋಹಿತರಿಂದ ಭೂಮಿ ಪೂಜೆ' ನೆರವೇರಿಸಿದ ಪ್ರಧಾನಿ ಮೋದಿ

ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಸಂಪೂರ್ಣ ಜವಾಬ್ದಾರಿಗಳನ್ನೂ ನಮ್ಮ ರಾಜ್ಯದ ಶೃಂಗೇರಿ ಮಠಕ್ಕೆ ವಹಿಸಿರುವುದು ಬಹಳ ಹೆಮ್ಮಯ ಸಂಗತಿ

ನೂತನ ಸಂಸತ್ ಭವನ ಕಟ್ಟಡಕ್ಕೆ 'ಕರ್ನಾಟಕದ ಪುರೋಹಿತರಿಂದ ಭೂಮಿ ಪೂಜೆ' ನೆರವೇರಿಸಿದ ಪ್ರಧಾನಿ ಮೋದಿ

ನವದೆಹಲಿ: ಹೊಸ ಸಂಸತ್ ಭವನ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಇಂದು ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದೆ.

ಈಗಾಗಲೇ ಭೂಮಿ ಪೂಜೆ ಕಾರ್ಯಕ್ರಮ ಆರಂಭವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಸೇರಿದಂತೆ ಹಲವು ಗಣ್ಯರು ಇಂಡಿಯಾ ಗೇಟ್ ಬಳಿ ಉಪಸ್ಥಿತರಿದ್ದಾರೆ.

'ಕಾಂಗ್ರೆಸ್​​ ಅವತ್ತು ಮಾಡಿದ ಅವಮಾನಕ್ಕೆ ಇವತ್ತು ಸೇಡು ತೀರಿಸಿಕೊಂಡಿದ್ದೇವೆ’

ನೂತನ ಸಂಸತ್ ಭವನದ ಕಟ್ಟಡಕ್ಕೆ ಭೂಮಿ ಪೂಜೆ ಆರಂಭವಾಗಿದ್ದು, ಪ್ರಧಾನಿ ಮೋದಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಟಾಟಾ ಟ್ರಸ್ಟ್ ಚೇರ್‌ಮನ್ ರತನ್ ಟಾಟಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಕೇಂದ್ರ ಸಚಿವ ಹೆಚ್.‌ಎಸ್. ಪುರಿ ಹಾಗೂ ಹಲವು ಧಾರ್ಮಿಕ ಮುಖಂಡರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಅನ್ನದಾತರ ಮೇಲೆ ಕಿಡಿ ಕಾರಿದ ಹೆಚ್.ಡಿ. ಕುಮಾರಸ್ವಾಮಿ

ಅಲ್ಲದೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಸಂಪೂರ್ಣ ಜವಾಬ್ದಾರಿಗಳನ್ನೂ ನಮ್ಮ ರಾಜ್ಯದ ಶೃಂಗೇರಿ ಮಠಕ್ಕೆ ವಹಿಸಿರುವುದು ಬಹಳ ಹೆಮ್ಮಯ ಸಂಗತಿಯಾಗಿದೆ. ಶೃಂಗೇರಿ ಮಠದಿಂದ ನಾಲ್ವರು ಪುರೋಹಿತರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಟಿ.ವಿ.ಶಿವಕುಮಾರ ಶರ್ಮ, ಕೆ.ಎಸ್.ಲಕ್ಷ್ಮಿ ನಾರಾಯಣ ಸೋಮಯಾಜಿ, ಕೆ.ಎಸ್. ಗಣೇಶ್ ಸೋಮಯಾಜಿ, ಸಿ,ನಾಗರಾಜ ಅಡಿಗ ಶೃಂಗೇರಿಯಿಂದ ದೆಹಲಿಗೆ ಬಂದು ಪುರೋಹಿತರು ಮತ್ತು ರಾಘವೇಂದ್ರ ಭತ್ತ ಮತ್ತು ಋಷ್ಯಶೃಂಗ ಅವ್ರು ದೆಹಲಿಯಾ ಶೃಂಗೇರಿ ಮಠದ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಾಲ್ವರು ಪುರೋಹಿತರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ರಾಜ್ಯಾದ್ಯಂತ ನಾಳೆ ಖಾಸಗಿ ಆಸ್ಪತ್ರೆಗಳ 'OPD' ಬಂದ್..!

ನೂತನ ಸಂಸತ್ ಭವನ ಕಟ್ಟಡ ನಿರ್ಮಾಣ ಕಾಮಗಾರಿ ಹೊಣೆಯನ್ನು ಟಾಟಾ ಪ್ರಾಜೆಕ್ಟ್ ಸಂಸ್ಥೆಗೆ ನೀಡಿರುವುದು ವಿಶೇಷ.

'ಬಿಜೆಪಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಿ ಜನರ ಗಮನ ಬೇರೆಡೆ ಸೆಳೆಯಲು ಗೋಹತ್ಯೆ ನಿಷೇಧ ಕಾಯ್ದೆ ತರುತ್ತಿದೆ'

Read More