Home> Karnataka
Advertisement

Bengaluru: ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ‌ ಫೈರಿಂಗ್

ರೌಡಿಶೀಟರ್ ನರಸಿಂಹ ರೆಡ್ಡಿ (Narasimha Reddy) ಎಂಬಾತನನ್ನು ಬಂಧಿಸಲು ಹೋದಾಗ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ರೌಡಿಶೀಟರ್ ಹಲ್ಲೆ  ಮಾಡುತ್ತಿದ್ದಂತೆ ಗಿರಿನಗರ ಪೊಲೀಸ್ ಠಾಣೆ ಪಿಎಸ್ ಐ ಸುನೀಲ್ ರೆಡ್ಡಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.

Bengaluru: ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ‌ ಫೈರಿಂಗ್

ಬೆಂಗಳೂರು: ನಗರದಲ್ಲಿ ರೌಡಿಶೀಟರ್ ಗಳ ಉಪಟಳ ಹೆಚ್ಚಾಗಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗುಂಡು ಸದ್ದು ಮಾಡಿದೆ. ಬೆಂಗಳೂರಿನಲ್ಲಿಂದು (Benglauru) ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಫೈರಿಂಗ್ ನಡೆದಿದೆ. ಗಿರಿನಗರ ಪೊಲೀಸ್ ಠಾಣೆ ಪಿಎಸ್ ಐ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ರೌಡಿಶೀಟರ್ ನರಸಿಂಹ ರೆಡ್ಡಿ (Narasimha Reddy) ಎಂಬಾತನನ್ನು ಬಂಧಿಸಲು ಹೋದಾಗ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ರೌಡಿಶೀಟರ್ ಹಲ್ಲೆ ಮಾಡುತ್ತಿದ್ದಂತೆ ಗಿರಿನಗರ ಪೊಲೀಸ್ (Girinagar Police) ಠಾಣೆ ಪಿಎಸ್ ಐ ಸುನೀಲ್ ರೆಡ್ಡಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ- Mekedatu Issue: ಕೈ ನಾಯಕರ ವಿರುದ್ಧ FIR ದಾಖಲು; ಆರೋಪ ಸಾಬೀತಾದರೆ ದಂಡದ ಜತೆ 3 ರಿಂದ 6 ತಿಂಗಳ ಸೆರೆವಾಸ

30 ಕ್ಕೂ ಹೆಚ್ಚು ಕೇಸ್..!
30 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ನರಸಿಂಹ ರೆಡ್ಡಿ (Narasimha Reddy)  ಕಾಲಿಗೆ ಗುಂಡು ಹಾರಿಸಲಾಗಿದೆ. ಕೊಲೆ, ದರೋಡೆ, ಕಿಡ್ನಾಪ್, ಮನೆಗಳ್ಳತನ ಸೇರಿದಂತೆ ಒಟ್ಟು 30 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನರಸಿಂಹ ರೆಡ್ಡಿ ಆರೋಪಿಯಾಗಿದ್ದ. ಇತ್ತೀಚೆಗೆ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಗಾಗಿ ಸರ್ಚಿಂಗ್ ನಡೆದಿತ್ತು. ಆರೋಪಿ ಹೊಸಕೆರೆಹಳ್ಳಿ ಕೆರೆ ಕೋಡಿ ಬಳಿ‌ ಇರುವ ಮಾಹಿತಿ ಪಡೆದಿದ್ದ ಗಿರಿನಗರ ಪೊಲೀಸರು ಬಂಧಿಸಲು ತೆರಳಿದ್ದರು. ಆದರೆ ಈ ವೇಳೆ ಪೊಲೀಸರ ಮೇಲೆಯೇ ಆರೋಪಿ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.

fallbacks

ಇದನ್ನೂ ಓದಿ- Road Accident: ರಾಮನಗರ ಜಿಲ್ಲೆಯ ಕುಂಬಳಗೋಡು ಬಳಿ ರಸ್ತೆ ಅಪಘಾತ, ಆರು ಜನರ ದುರ್ಮರಣ

ಕಾನ್ಸ್ ಟೇಬಲ್ ಮೋಹನ್ ಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಲು ಯತ್ನಿಸಿದ್ದ‌. ಅಲ್ಲದೇ ಪಿಎಸ್ಐ ಸುನೀಲ್ ಮೇಲೂ ಹಲ್ಲೆಗೆ ಮುಂದಾಗಿದ್ದು, ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಲಾಗಿದೆ. ಆದರೂ ಮಾತು ಕೇಳದ ಹಿನ್ನೆಲೆ ರೌಡಿಶೀಟರ್ ನರಸಿಂಹ ರೆಡ್ಡಿ ಕಾಲಿಗೆ ಗುಂಡು ಹಾರಿಸಿದ್ದಾರೆ ಪಿಎಸ್ಐ. ಗಾಯಗೊಂಡಿರುವ ಕಾನ್ಸ್ ಟೇಬಲ್ ಹಾಗೂ ಗುಂಡೇಟು ತಿಂದಿರುವ ರೌಡಿಶೀಟರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More