Home> Karnataka
Advertisement

ರಣಾಂಗಣವಾದ ಗ್ರಾಮ ಪಂಚಾಯತಿ; ಗ್ರಾಪಂ ಸದಸ್ಯನಿಗೆ ಪಿಡಿಓ ಹಲ್ಲೆ..!

ಅಭಿವೃದ್ಧಿ ವಿಚಾರವಾಗಿ ಆಲನಹಳ್ಳಿ ಗ್ರಾಪಂ ಕಚೇರಿಯಲ್ಲಿ ಪಿಡಿಓ ಮಹೇಶ್ ಮತ್ತು ಗ್ರಾಪಂ ಸದಸ್ಯ ಯೋಗೇಶ್ ಪರಸ್ವರ ಹೊಡೆದಾಡಿಕೊಂಡಿದ್ದಾರೆ.

ರಣಾಂಗಣವಾದ ಗ್ರಾಮ ಪಂಚಾಯತಿ; ಗ್ರಾಪಂ ಸದಸ್ಯನಿಗೆ ಪಿಡಿಓ ಹಲ್ಲೆ..!

ಮೈಸೂರು: ಮೈಸೂರು ಜಿಲ್ಲೆಯ ಹೆಚ್.ಡಿ‌.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮ ಪಂಚಾಯತ್(Alanahall​ Gram Panchayat)ಕಚೇರಿ ರಣಾಂಗಣವಾಗಿ ಮಾರ್ಪಟ್ಟಿತ್ತು. ಕಚೇರಿಯ ಒಳಾವರಣ ಹಾಗೂ ಹೊರಾವರಣದಲ್ಲಿ ಪಿಡಿಓ ಹಾಗೂ ಗ್ರಾಪಂ ಸದಸ್ಯನ ನಡುವೆ ಬಿಗ್ ಫೈಟ್(PDO And Gram Panchayat Member Fight) ನಡೆದಿದೆ. 

ಇದನ್ನೂ ಓದಿ: Siddaramaiah: ಸಿದ್ದರಾಮಯ್ಯರ ‘ಅಡ್ಡಕಸುಬಿ’ ಬಜೆಟ್ ಹೇಳಿಕೆಗೆ ಬಿಜೆಪಿ ಸಿಡಿಮಿಡಿ

ಅಭಿವೃದ್ಧಿ ವಿಚಾರವಾಗಿ ಆಲನಹಳ್ಳಿ ಗ್ರಾಪಂ ಕಚೇರಿ(Alanahall​ Gram Panchayat)ಯಲ್ಲಿ ಪಿಡಿಓ ಮಹೇಶ್ ಮತ್ತು ಗ್ರಾಪಂ ಸದಸ್ಯ ಯೋಗೇಶ್ ಪರಸ್ವರ ಹೊಡೆದಾಡಿಕೊಂಡಿದ್ದಾರೆ. ಪಿಡಿಓ ಮತ್ತು ಗ್ರಾಪಂ ಸದಸ್ಯರ ನಡುವಿನ ಕಿತ್ತಾಟದ ದೃಶ್ಯವು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿಯೂ ಸಖತ್ ವೈರಲ್ ಆಗುತ್ತಿದೆ.

ಗ್ರಾಪಂ ಸದಸ್ಯ ಯೋಗೇಶ್ ಮೇಲೆ ಪಿಡಿಓ ಮಹೇಶ‍್(PDO Mahesh) ಹಲ್ಲೆ ನಡೆಸಿರುವ ದೃಶ‍್ಯವು ಮೊಬೈಲ್ ನಲ್ಲಿ ಸೆರೆಯಾಗಿದೆ. ಕಚೇರಿಯ ಒಳಗಡೆಯೇ ಗ್ರಾಪಂ ಸದಸ್ಯನ ಮೇಲೆ ಹಲ್ಲೆ ನಡೆದಿದೆ. ಪಿಡಿಓ ಮಹೇಶ‍್ ಜೊತೆಗೆ ಕೈಜೋಡಿಸಿದ ಮತ್ತೊಬ್ಬ ಸದಸ್ಯನೂ ಕೂಡ ಗ್ರಾಪಂ ಸದಸ್ಯನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಹೆಚ್.ಡಿ.ಕೋಟೆ ಠಾಣೆ(HD Kote Police Station)ಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: SR Hiremath : ಗೋವು ರಕ್ಷಕರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಎಸ್.ಆರ್. ಹಿರೇಮಠ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More