Home> Karnataka
Advertisement

ಅರಿಶಿಣ ಹಣ ಜಮೆ ಮಾಡಲು ವಿಳಂಬ ಖಂಡಿಸಿ ಪ್ರತಿಭಟನೆ: ಟ್ಯಾಂಕ್ ಏರಿ ಆತ್ಮಹತ್ಯೆ ಎಚ್ಚರಿಕೆ

ಹಣ ಜಮೆ ಮಾಡಲು ವಿಳಂಬವಾದ ಹಿನ್ನಲೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಅರಿಶಿಣ ಬೆಳೆಗಾರರು ಪ್ರತಿಭಟನಾ ಧರಣಿ ಮುಂದುವರೆಸಿದ್ದಾರೆ. ಈ ವೇಳೆ, ಡಿಸಿ ಬರಲೇಬೇಕೆಂದು ಮಾದಪ್ಪ ಹಾಗೂ ಬಸವರಾಜು ಎಂಬವರು ಓವರ್ ಹೆಡ್ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ನಡೆಸುತ್ತಿದ್ದು ಡಿಸಿ ಬರದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಅರಿಶಿಣ ಹಣ ಜಮೆ ಮಾಡಲು ವಿಳಂಬ ಖಂಡಿಸಿ ಪ್ರತಿಭಟನೆ: ಟ್ಯಾಂಕ್ ಏರಿ ಆತ್ಮಹತ್ಯೆ ಎಚ್ಚರಿಕೆ

ಚಾಮರಾಜನಗರ:  ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರದ ಮೂಲಕ ಖರೀದಿಸಿರುವ ಅರಿಶಿಣ ಹಣವನ್ನು ರೈತರ ಖಾತೆಗೆ ಜಮೆ ಮಾಡಲು ವಿಳಂಬ ಧೋರಣೆ ತಾಳಿದ್ದಕ್ಕೆ ಕುಪಿತಗೊಂಡ ರೈತರು   ಗುಂಡ್ಲುಪೇಟೆ ಎಪಿಎಂಸಿ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಹಣ ಜಮೆ ಮಾಡಲು ವಿಳಂಬವಾದ ಹಿನ್ನಲೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಅರಿಶಿಣ ಬೆಳೆಗಾರರು ಪ್ರತಿಭಟನಾ ಧರಣಿ ಮುಂದುವರೆಸಿದ್ದಾರೆ. ಈ ವೇಳೆ, ಡಿಸಿ ಬರಲೇಬೇಕೆಂದು ಮಾದಪ್ಪ ಹಾಗೂ ಬಸವರಾಜು ಎಂಬವರು ಓವರ್ ಹೆಡ್ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ನಡೆಸುತ್ತಿದ್ದು ಡಿಸಿ ಬರದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ- ಸೂರಪ್ಪ ಬಾಬು ಮಗಳು ಸುದೀಪ್ ಸರ್ ಹತ್ರ ಯಾಕೆ ಹೋದ್ರು - ಚಂದ್ರಚೂಡ್

ಖರೀದಿ ‌ಕೇಂದ್ರದ ಮೂಲಕ ಖರೀದಿಸಿರುವ ಅರಿಶಿಣದ ಹಣವನ್ನು ಮೂರು ದಿನದೊಳಗೆ ರೈತರ ಖಾತೆಗೆ ಜಮೆ ಮಾಡದೆ 40 ದಿನದ ನಂತರ ಪ್ರತಿಭಟನೆಗೆ ಮಣಿದು ಹಣ ಹಾಕಲಾಗಿದೆ. ಈ ಮೂಲಕ ಸಹಕಾರ ಮಂಡಳಿ ಹಾಗೂ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ‌.

ಇದನ್ನೂ ಓದಿ- ಶಿಕ್ಷಕರುಗಳಿಗೆ ಜು.26 ರಿಂದ ಆ.11 ರ ವರೆಗೆ ಪರಸ್ಪರ ವರ್ಗಾವಣೆ ಕೌನ್ಸಲಿಂಗ್  

ರೈತರು ಅರಿಶಿಣ ಖರೀದಿ ಸಂದರ್ಭದಲ್ಲೂ ಪ್ರತಿಭಟನೆ ಮಾಡಿ ಖರೀದಿಸುವಂತೆ ಮಾಡಿದ್ದಾರೆ. ನಂತರ ಅರಿಶಿಣದ ಹಣ ಖಾತೆಗೆ ಜಮೆ ಮಾಡುವಂತೆಯೂ ಸಹ ಧರಣಿ ನಡೆಸುವ ಪರಿಸ್ಥಿತಿ ಬಂದೊದಗಿದೆ. ಹೀಗಿದ್ದಲ್ಲಿ ನಮ್ಮನ್ನಾಳುವ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿ, ಪ್ರತಿಯೊಂದನ್ನು ಪ್ರತಿಭಟನೆ ಹಾದಿಯ ಮೂಲಕವೇ ಪಡೆಯಬೇಕಾಗಿದೆ‌ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಸಿ ಸ್ಥಳಕ್ಕೆ ಬರಬೇಕು ಹಾಗೂ ನಮ್ಮ ಸಮಸ್ಯೆ ಆಳಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More