Home> Karnataka
Advertisement

ಗಾಯದ ಮೇಲೆ ಬರೆ: ಜುಲೈ 1ರಿಂದ ಮತ್ತೆ ವಿದ್ಯುತ್‌ ಬೆಲೆ ಏರಿಕೆ!

ಈ ಪ್ರಸ್ತಾವನೆ ಒಪ್ಪಿಸಿ ಸೂಚಿಸಿದ್ದರೂ ಸಹ ಅವುಗಳು ಕೋರಿದಷ್ಟು ದರಗಳನ್ನು ನಿಗದಿಪಡಿಸಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಎಸ್ಕಾಂಗಳು ಎಷ್ಟು ದರ ಹೆಚ್ಚಳ ಮಾಡಲು ಕೋರಿದ್ದವು ಎಂಬ ಬಗ್ಗೆ ತಿಳಿಯೋಣ. 

ಗಾಯದ ಮೇಲೆ ಬರೆ: ಜುಲೈ 1ರಿಂದ ಮತ್ತೆ ವಿದ್ಯುತ್‌ ಬೆಲೆ ಏರಿಕೆ!

ಜುಲೈ 1ರಿಂದ ವಿದ್ಯುತ್‌ ದರ ಏರಿಕೆ ಮಾಡಲು ಎಸ್ಕಾಂ ನಿರ್ಧರಿಸಿದ್ದು, ದೇಶದಲ್ಲಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೆ ಬರೆ ಎಳೆದಂತಾಗಿದೆ. ವಿದ್ಯುತ್ ದರ 19 ರೂಪಾಯಿಯಿಂದ 31 ರವರೆಗೆ ಏರಿಕೆ ಮಾಡಲು ಎಸ್ಕಾ ತೀರ್ಮಾನಿಸಿದೆ. ‌

ಇದನ್ನೂ ಓದಿ: ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆ : IMD ಎಚ್ಚರಿಕೆ

ಪ್ರತಿ ತಿಂಗಳು 100 ಯೂನಿಟ್‌ ಅಥವಾ ಅದಕ್ಕಿಂತ ಹೆಚ್ಚಾಗಿ ವಿದ್ಯುತ್‌ ಬಳಸುವ ಗ್ರಾಹಕರು ಹೆಚ್ಚುವರಿಯಾಗಿ ರೂ. 19ರಿಂದ 31ರವರೆಗೆ ಪಾವತಿಸಬೇಕಾಗುತ್ತದೆ. ಇನ್ನು ವಿದ್ಯುತ್‌ ಬಿಲ್‌ ಹೆಚ್ಚಳವಾಗಲು ಕಾರಣವೂ ಇದೆ. ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಕಲ್ಲಿದ್ದಲು ಖರೀದಿಗೆ ಮಾಡಿರುವ ವೆಚ್ಚವನ್ನು ಗ್ರಾಹಕರಿಂದ ಪಡೆಯಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣಕ್ಕೆ ಎಸ್ಕಾಂಗಳು ಪ್ರಸ್ತಾವ ಸಲ್ಲಿಸಿದ್ದವು. ಈ ಪ್ರಸ್ತಾವನೆ ಒಪ್ಪಿಸಿ ಸೂಚಿಸಿದ್ದರೂ ಸಹ ಅವುಗಳು ಕೋರಿದಷ್ಟು ದರಗಳನ್ನು ನಿಗದಿಪಡಿಸಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಎಸ್ಕಾಂಗಳು ಎಷ್ಟು ದರ ಹೆಚ್ಚಳ ಮಾಡಲು ಕೋರಿದ್ದವು ಎಂಬ ಬಗ್ಗೆ ತಿಳಿಯೋಣ. 

ಬೆಸ್ಕಾಂ- ರೂ. 55.28
ಮೆಸ್ಕಾಂ- ರೂ. 38.98
ಸೆಸ್ಕಾಂ- ರೂ. 40.47
ಹೆಸ್ಕಾಂ- ರೂ. 49.54
ಗೆಸ್ಕಾಂ- ರೂ. 39.36 

ಇದನ್ನೂ ಓದಿ: Vi ಈ ಯೋಜನೆಯಲ್ಲಿ ಕಡಿಮೆ ಬೆಲೆಯಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಜೊತೆ ಸಿಗುತ್ತಿದೆ ಹಲವು ಲಾಭ

ಕೋವಿಡ್‌ನಿಂದಾಗಿ ಸಮಸ್ಯೆಗಳು ಉಂಟಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಕಾಂ ಕೋರಿದಷ್ಟು ದರ ಏರಿಕೆ ಮಾಡದೆ, ಕೊಂಚ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More