Home> Karnataka
Advertisement

Jewelery seized: ಮತದಾರರಿಗೆ ಹಂಚಲು ತಂದಿದ್ದ ಎಂಟೂವರೆ ಕೆಜಿ ಆಭರಣ ಸೀಜ್

Election: ಹಲಸೂರು ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿಚುನಾವಣೆ ಹೊತ್ತಲ್ಲಿ ಮತದಾರರಿಗೆ ಹಂಚಲು ತಂದಿದ್ದ ಕೆಜಿಗಟ್ಟಲೇ ಆಭರಣಗಳನ್ನ ಸೀಜ್ ಮಾಡಿದ್ದಾರೆ.

Jewelery seized: ಮತದಾರರಿಗೆ ಹಂಚಲು ತಂದಿದ್ದ ಎಂಟೂವರೆ ಕೆಜಿ ಆಭರಣ ಸೀಜ್

ಬೆಂಗಳೂರು: ಹಲಸೂರು ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿಚುನಾವಣೆ ಹೊತ್ತಲ್ಲಿ ಮತದಾರರಿಗೆ ಹಂಚಲು ತಂದಿದ್ದ ಕೆಜಿಗಟ್ಟಲೇ ಆಭರಣಗಳನ್ನ ಸೀಜ್ ಮಾಡಿದ್ದಾರೆ.
ಪಂಕಜ್ ಗೌಡ,ಭಗವಾನ್ ಸಿಂಗ್, ವಡಿವೇಲು ಬಂಧಿತ ಆರೋಪಿಗಳಾಗಿದ್ದಾರೆ.‌

ಈ ಆಭಣಗಳನ್ನ ಮತದಾರರಿಗೆ ಚುನಾವಣೆ ಹೊತ್ತಲ್ಲಿ ನೀಡಬೇಕೆಂದು ಸಾಗಿಸುತ್ತಿದ್ದು ಸುಮಾರು 8.50 ತೂಕದ ಗೋಲ್ಡ್ ಕೊಟೇಡ್ ಆಭರಣಗಾಳಗಿವೆ.ಸರ, ಉಂಗುರ,ಕಿವಿಯೋಲೆ,ಬ್ರೇಸ್ ಲೇಟ್, ಬಳೆಗಳು ವಶಕ್ಕೆ ಪಡೆಯಲಾಗಿದ್ದು, ಅಂದಾಜು 1,47 ಕೋಟಿ ಮೌಲ್ಯದ್ದಾಗಿದೆ.

ಇದನ್ನೂ ಓದಿ:  ಕೂತುಹಲ ಮೂಡಿಸಿದ ರಮೇಶ್ ಜಾರಕಿಹೊಳಿ,ಲಕ್ಷ್ಮಣ್ ಸವದಿ ಭೇಟಿ

ಗೋಲ್ಡ್ ಕೊಟೇಡ್ ಆಭರಣಗಳನ್ನ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಂಚಲು ತಂದಿದ್ದಾಗಿ ಮಾಹಿತಿ ಚುನಾವಣಾಧಿಕಾರಿ ಮುನಿಯನಾಯಕ ನೀಡಿದ್ದ ದೂರಿನ ಮೇರೆಗೆ ನಿನ್ನೆ ಸಂಜೆ ದಾಳಿ ನಡೆಸಲಾಗಿದೆ.

ಹಲಸೂರು ಉಪ ವಿಭಾಗ ಎಸಿಪಿ ರಾಮಚಂದ್ರ, ಇನ್ಸ್‌ಪೆಕ್ಟರ್ ಹರೀಶ್ ಬಾಬು, ಸಬ್ ಇನ್ಸ್‌ಪೆಕ್ಟರ್ ಮಧು ಕಾರ್ಯಾಚರಣೆ ನಡೆಸಿ ಆಭರಣ ಸಮೇತ ಆರೋಪಿಗಳನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:  Siddaramaiah : ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಅಯ್ಯಪ್ಪ ಸ್ವಾಮಿ ಮೊರೆ ಹೋದ ಯುವ ಉದ್ಯಮಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

Read More