Home> Karnataka
Advertisement

Saalumarada Thimmakka : ಡಾ. ಸಾಲುಮರದ ತಿಮ್ಮಕ್ಕಗೆ ಸಚಿವ‌ ಸಂಪುಟ ದರ್ಜೆಯ ಸ್ಥಾನಮಾನ!

ರಾಜ್ಯ ಸರ್ಕಾರ  ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ‌ಪುರಸ್ಕೃತರೂ ಆಗಿರುವ ನಾಡೋಜ ಡಾ. ಸಾಲುಮರದ‌ ತಿಮ್ಮಕ್ಕನವರನ್ನು 'ಪರಿಸರ ರಾಯಭಾರಿಯನ್ನಾಗಿ'ನೇಮಿಸಿದೆ.  

Saalumarada Thimmakka : ಡಾ. ಸಾಲುಮರದ ತಿಮ್ಮಕ್ಕಗೆ ಸಚಿವ‌ ಸಂಪುಟ ದರ್ಜೆಯ ಸ್ಥಾನಮಾನ!

ಬೆಂಗಳೂರು : ನಾಡೋಜ, ಪರಿಸರ ಪ್ರೇಮಿ ಡಾ. ಸಾಲುಮರದ ತಿಮ್ಮಕ್ಕನವರಿಗೆ ರಾಜ್ಯ ಸಚಿವ‌ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ರಾಜ್ಯ ಸರ್ಕಾರ  ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ‌ಪುರಸ್ಕೃತರೂ ಆಗಿರುವ ನಾಡೋಜ ಡಾ. ಸಾಲುಮರದ‌ ತಿಮ್ಮಕ್ಕನವರನ್ನು 'ಪರಿಸರ ರಾಯಭಾರಿಯನ್ನಾಗಿ'ನೇಮಿಸಿದೆ.  

ಇದನ್ನೂ ಓದಿ : Heavy Rain in Karnataka : ಕರಾವಳಿ ಭಾಗದಲ್ಲಿ ಐದು ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' 

ಈ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಯಭಾರಿಯಾಗಿರುವುದರಿಂದ ರಾಜ್ಯ, ಅಂತಾರಾಜ್ಯ ಪ್ರವಾಸ ಕೈಗೊಂಡಾಗ ಅದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಅವರಿಗೆ ಈಗಾಗಲೇ ನೀಡಿರುವ ಬಿಡಿಎ ನಿವೇಶನದಲ್ಲಿ ಸರ್ಕಾರವೇ ಮನೆ ಕಟ್ಟಿಸಿಕೊಡಲಿದೆ. ಜತೆಗೆ ಸರ್ಕಾರ ಹತ್ತು ಎಕರೆ ಜಮೀನು ನೀಡಲಿದೆ ಎಂದು ಪ್ರಕಟಿಸಿಲಾಗಿದೆ. ತಿಮ್ಮಕ್ಕ ಅವರ ಬಗ್ಗೆ ವೆಬ್‌ಸೈಟ್‌ ಮತ್ತು ತಿಮ್ಮಕ್ಕ ಸೇರಿದಂತೆ ರಾಜ್ಯದಲ್ಲಿರುವ ಇಂತಹ ಮಹಾನ್‌ ಸಾಧಕರನ್ನು ಪರಿಚಯಿಸುವ ವೆಬ್‌ ಸೀರಿಸ್‌ ರೂಪಿಸುವಂತೆ ಈಗಾಗಲೇ ವಾರ್ತಾ ಇಲಾಖೆಗೆ ಸೂಚಿಸಿರುವುದಾಗಿ ಹೇಳಿದರು. ಸಾಲುಮರದ ತಿಮ್ಮಕ್ಕ ಅವರ 111ರ ಜನುಮದಿನದ ಸಂಭ್ರಮ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಹೇಳಿದ್ದರು.

ಸಾಧನೆ ಮಾಡಲು ಯಾವುದೇ ಪದವಿ, ನೆರವು, ಅವಕಾಶದ ಅಗತ್ಯವಿಲ್ಲ. ಕಾಯಕನಿಷ್ಠೆ ಇಟ್ಟುಕೊಂಡು ಎಲ್ಲರಿಗೂ ಒಳ್ಳೆಯದು ಮಾಡಬೇಕು ಎಂಬ ಧ್ಯೇಯ ಇದ್ದರೆ ಜಗತ್ತನ್ನೆ ಬದಲಾವಣೆ ಮಾಡುವ ಶಕ್ತಿ ಆಗಬಹುದು ಎಂಬುದಕ್ಕೆ ತಿಮ್ಮಕ್ಕ ನಿದರ್ಶನ. ಅವರು ತಾವೇ ಅವಕಾಶ ಮಾಡಿಕೊಂಡು ಸಾಧನೆ ಮಾಡಿದವರು. ಅವರ ಸಾಧನೆ ಚಿರಸ್ಥಾಯಿ ಆಗಿರುತ್ತದೆ ಎಂದು ತಿಳಿಸಿದ್ದರು. ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರವಾಗಬೇಕು. ಅವರ ಬಗ್ಗೆ ಪ್ರಚಾರ ಎಂದರೆ ಅದು ಹಸಿರಿನ ಪ್ರಚಾರ. ಯುವಕರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕು.

ಇದನ್ನೂ ಓದಿ : 'ರಾಜ್ಯದಲ್ಲಿವೆ 231 ಡ್ಯಾಂಗಳು, ಆದ್ರೂ, 10 ಲಕ್ಷ ಹೆಕ್ಟೇರ್ ಗೆ ನೀರಾವರಿ ಇಲ್ಲ'

ಕಳೆದ ಎರಡು ಸಾವಿರ ವರ್ಷಗಳಲ್ಲಿ ಆಗಿರುವುದಕ್ಕಿಂತ ಕಳೆದ ಇಪ್ಪತ್ತು ವರ್ಷದಲ್ಲಿ ಹೆಚ್ಚು ಮಾಲಿನ್ಯವಾಗಿದೆ. ಮನುಷ್ಯನ ಆಸೆಯಿಂದ ಪರಿಸರ ನಾಶಕ್ಕೆ ಕಾರಣವಾಗಿದೆ. ನಾವು ಇವತ್ತು ಪರಿಸರ ಹಾಳು ಮಾಡಿದರೆ ಮುಂದಿನ ಪೀಳಿಗೆಯ ಆಸ್ತಿ ಕಳ್ಳತನ ಮಾಡಿದಂತೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದರು. ಸರ್ಕಾರ 100 ಕೋಟಿ ರೂಪಾಯಿ ಪರಿಸರ ಬಜೆಟ್‌ ರೂಪಿಸಿದೆ. ಅವಶ್ಯಕತೆ ಬಿದ್ದರೆ ಈ ಬಜೆಟ್‌ನ ಗಾತ್ರವನ್ನು ಇನ್ನಷ್ಟು ಹೆಚ್ಚಿಸಲು ಬದ್ಧರಿದ್ದೇವೆ ಎಂದು ತಿಳಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More