Home> Karnataka
Advertisement

ಡ್ಯೂಟಿ ಟೈಂನಲ್ಲಿ ಮೊಬೈಲ್‌ ಬಳಸಿದರೆ ಹುಷಾರ್!

ಡಿಜೆ ಹಳ್ಳಿ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಖಡಕ್ ವಾರ್ನಿಂಗ್ ನೀಡಿದ ಡಿಸಿಪಿ.
 

ಡ್ಯೂಟಿ ಟೈಂನಲ್ಲಿ ಮೊಬೈಲ್‌ ಬಳಸಿದರೆ ಹುಷಾರ್!

ಬೆಂಗಳೂರು: ಕೆಲಸದ ವೇಳೆ ಮೊಬೈಲ್ ಬಳಸುವ ಸಿಬ್ಬಂದಿಗೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಇಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಇತ್ತೀಚಿಗೆ ನಗರದ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಭುಗಿಲೆದ್ದ ಗಲಭೆ ಇನ್ನೂ ಸಹ ಸಂಪೂರ್ಣವಾಗಿ ತಹಬದಿಗೆ ಬಂದಿಲ್ಲ. ಆದರೂ ಕೆಲಸಕ್ಕೆ ನಿಯೋಜನೆ ಮಾಡಿದ ವೇಳೆ ಫುಲ್ ಟೈಂ ಮೊಬೈಲ್‌ ನಲ್ಲೇ ಇರ್ತಿರಿ. ನಿಮ್ಮ ಅಕ್ಕ-ಪಕ್ಕದಲ್ಲಿ ಏನೇ ನಡೀತಾ ಇದ್ರೂ ಸಿಬ್ಬಂದಿಗಳು ತಮ್ಮ ಪಾಡಿಗೆ ತಾವು ಮೊಬೈಲ್ ನಲ್ಲಿ ಬ್ಯುಸಿ ಇರುವುದು ಕಂಡು ಬರುತ್ತಿದೆ. 

ಕರ್ತವ್ಯದ ವೇಳೆ ಇಂತಹ ನಿರ್ಲಕ್ಷ್ಯಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾಗುವುದಿಲ್ಲ. ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ತಿಳಿ ಆಗಿಲ್ಲ, ಹೀಗಿದ್ರೂ ಬಹುತೇಕರು ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ಮುಂದೆ ಇದೇ ರೀತಿ ನಡೆದು ಕೊಂಡ್ರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿಪಿ ಶರಣಪ್ಪ ವಾರ್ನಿಂಗ್ ನೀಡಿದ್ದಾರೆ.

ಡಿಜೆ ಹಳ್ಳಿ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಬೆಳಗಿನ ಪೆರೇಡ್ ವೇಳೆ ಡಿಜೆ ಹಳ್ಳಿ ಪೊಲೀಸ್ ಸಿಬ್ಬಂದಿಗೆ ಶರಣಪ್ಪ ಖಡಕ್ ಎಚ್ಚರಿಕೆ ನೀಡಿದರು.

Read More