Home> Karnataka
Advertisement

Dr Bro in Star Sports: ‘ಬಿಗ್‍ಬಾಸ್’ ಅಲ್ಲ ಕ್ರಿಕೆಟ್ ಕಾಮೆಂಟರಿ ನೀಡಲಿರುವ ಡಾ. ಬ್ರೋ..!

Dr Bro in Star Sports: ಈ ಬಗ್ಗೆ ಮಾಹಿತಿ ಟ್ವೀಟ್ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಡಾ. ಬ್ರೋ ಚೆನ್ನೈಗೆ ಆಗಮಿಸಿ ಪಂದ್ಯ ನಡೆಯಲಿರುವ ಎಂದ ಚಿದಂಬರಂ ಕ್ರೀಡಾಂಗಣಕ್ಕೆ ಆಟೋದಲ್ಲಿ ಬರುವ ವಿಡಿಯೋವನ್ನು ಹಂಚಿಕೊಂಡಿದೆ.

Dr Bro in Star Sports: ‘ಬಿಗ್‍ಬಾಸ್’ ಅಲ್ಲ ಕ್ರಿಕೆಟ್ ಕಾಮೆಂಟರಿ ನೀಡಲಿರುವ ಡಾ. ಬ್ರೋ..!

ಬೆಂಗಳೂರು: ನಮಸ್ಕಾರ ದೇವ್ರು… ಎಂದಕೂಡಲೇ ನಮಗೆಲ್ಲರಿಗೂ ನೆನಪಾಗುವುದೇ ಡಾ. ಬ್ರೋ.. ಸಾಧಿಸುವ ಛಲವಿದ್ದರೆ ಸಾಕು ಏನೂ ಬೇಕಾದರೂ ಮಾಡಬಹುದು ಅನ್ನೋದಕ್ಕೆ ಈ ಡಾ. ಬ್ರೋ ಸಾಕ್ಷಿ. ಯೂಟ್ಯೂಬರ್ ಆಗಿ ಲಕ್ಷಾಂತರ ಜನರ ಅಭಿಮಾನ ಸಂಪಾದಿಸಿರುವ ಡಾ. ಬ್ರೋ ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಕಣ್ಮಣಿಯಾಗಿದ್ದಾರೆ.

ಕೇವಲ 22ರ ಹರೆಯದ ಗಗನ್ ಶ್ರೀನಿವಾಸ್ ಅಲಿಯಾಸ್ ಡಾ. ಬ್ರೋ ದೇಶ-ವಿದೇಶ ಸುತ್ತುತ್ತಾ ಕನ್ನಡದಲ್ಲಿಯೇ ಅಲ್ಲಿನ ಮಾಹಿತಿ ನೀಡುತ್ತಾ ಕನ್ನಡಿಗರಿಗೆ ಅದ್ಭುತ ಮಾಹಿತಿ ನೀಡುತ್ತಿದ್ದಾರೆ. ಅಂಗೈನಲ್ಲಿಯೇ ಕನ್ನಡಿಗರಿಗೆ ಇಡೀ ಪ್ರಪಂಚವನ್ನೇ ಪರಿಚಯಿಸುತ್ತಿರುವ ಡಾ. ಬ್ರೋ ಈ ಬಾರಿ ‘ಬಿಗ್‍ಬಾಸ್’ ಮನೆಗೆ ಪ್ರವೇಶಿಸುತ್ತಾರೆ ಅಂತಾ ಗುಲ್ಲು ಎದ್ದಿತ್ತು. ಕೆಲವರು ಡಾ. ಬ್ರೋ ‘ಬಿಗ್‍ಬಾಸ್’ ಮನೆಗೆ ಬರಬೇಕು ಅಂದರೆ, ಇನ್ನೂ ಕೆಲವರು ಅಲ್ಲಿಗೆ ಹೋಗುವುದ ಬೇಡ ಅಂತಾ ಹೇಳುತ್ತಿದ್ದಾರೆ.

ಇದನ್ನೂ ಓದಿ: ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಸೋಲಿನ ಭೀತಿ! 36 ವರ್ಷಗಳ ಹಳೆಯ ದಾಖಲೆ ಹೇಳುತ್ತಿದೆ ಈ ಸತ್ಯಾಂಶ

ಇದೆಲ್ಲದರ ನಡುವೆ ಡಾ. ಬ್ರೋ ಫ್ಯಾನ್ಸ್‍ಗೆ ಖುಷಿ ಸುದ್ದಿ ಸಿಕ್ಕಿದೆ. ಡಾ. ಬ್ರೋ ‘ಬಿಗ್‍ಬಾಸ್’ ಮನೆಗೆ ಹೋಗುವುದಿಲ್ಲ. ಆದರೆ ಅವರು ಕ್ರಿಕೆಟ್ ಕಾಮೆಂಟರಿ ಮಾಡಲಿದ್ದಾರೆ. ಹೌದು, ಡಾ.ಬ್ರೋ ‘ಬಿಗ್‍ಬಾಸ್‍’ ಮನೆಗೆ ಹೋಗುವ ಬದಲು ಅವರು ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್‍ನಲ್ಲಿ ಅವರು ಕ್ರಿಕೆಟ್ ಕಾಮೆಂಟರಿ ನೀಡಲಿದ್ದಾರೆ.

ಈ ಬಗ್ಗೆ ಸ್ವತಃ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದೆ. ನಾಳೆ ಅಂದರೆ ಭಾನುವಾರ(ಅಕ್ಟೋಬರ್ 7) ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಲಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯವಿದು. ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಹೊಂದಿದೆ. ಕನ್ನಡಲ್ಲಿಯೂ ಈ ಪಂದ್ಯದ ಕಾಮೆಂಟರಿ ಪ್ರಸಾರವಾಗಲಿದೆ. ಇದರಲ್ಲಿ ಡಾ. ಬ್ರೋ ಕೂಡ ಕಾಣಿಸಿಕೊಂಡು ಕ್ರಿಕೆಟ್ ಕಾಮೆಂಟರಿ ನೀಡಲಿದ್ದಾರೆ.

ಇದನ್ನೂ ಓದಿ: Asian Games 2023: ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ ಮಳೆಯಿಂದ ರದ್ದು: ಭಾರತದ ಮುಡಿಗೇರಿದ ಮತ್ತೊಂದು ಚಿನ್ನದ ಪದಕ

ಈ ಬಗ್ಗೆ ಮಾಹಿತಿ ಟ್ವೀಟ್ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಡಾ. ಬ್ರೋ ಚೆನ್ನೈಗೆ ಆಗಮಿಸಿ ಪಂದ್ಯ ನಡೆಯಲಿರುವ ಎಂದ ಚಿದಂಬರಂ ಕ್ರೀಡಾಂಗಣಕ್ಕೆ ಆಟೋದಲ್ಲಿ ಬರುವ ವಿಡಿಯೋವನ್ನು ಹಂಚಿಕೊಂಡಿದೆ. ‘ಸರ್ಪ್ರೈಸ್ ಹೇಗಿತ್ತು ಫ್ರೆಂಡ್ಸ್… ಡಾಕ್ಟರ್ ಬ್ರೋ ಇನ್ಮೇಲೆ ಎಲ್ಲಾ ಅಪ್ಡೇಟ್ಸ್ ಕೊಡ್ತಾರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ನೋಡೋದು ಮರಿಬೇಡಿ’ ಅಂತಾ ಈ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.   

ಈ ವಿಡಿಯೋದಲ್ಲಿ ಮಾತನಾಡಿರುವ ಡಾ. ಬ್ರೋ, ‘ಎಂದಿನಂತೆ ನಾನು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​​ಗೆ ಬಂದಿದ್ದೇನೆ. ಹೊಸ ಮಿಷನ್​ಗೆ ಹೋಗ್ತಾ ಇದೀನಿ’ ಅಂತಾ ಹೇಳಿ ಚೆನ್ನೈಗೆ ಭೇಟಿ ನೀಡಿದ್ದಾರೆ. ಚೆನ್ನೈ ತಲುಪಿದ ಬಳಿಕ ಎಂ.ಚಿದಂಬರಂ ಸ್ಟೇಡಿಯಂಗೆ ಆಟೋದಲ್ಲಿ ಆಗಮಿಸುವ ಡಾ. ಬ್ರೋ ‘ನೀವು ಸಹ ಭಾರತ V/s ಆಸ್ಟ್ರೇಲಿಯಾ ಪಂದ್ಯವನ್ನು ಮಿಸ್ ಮಾಡಿಕೊಳ್ಳಬೇಡಿ’ ಅಂತಾ ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More