Home> Karnataka
Advertisement

ದೆಹಲಿ ಹೈಕೋರ್ಟಿನಲ್ಲಿ ಇಂದು ಡಿಕೆಶಿ ತಾಯಿ ಮತ್ತು ಪತ್ನಿ ಅರ್ಜಿ ವಿಚಾರಣೆ

ಹಿಂದಿನ ನಾಲ್ಕು ಬಾರಿಯೂ ಸುದೀರ್ಘ ವಿಚಾರಣೆ ಆಗಿರಲಿಲ್ಲ. ಇಂದು ಸುದೀರ್ಘ ವಿಚಾರಣೆ ನಡೆದು ಆದೇಶ ಹೊರಬೀಳುವ ಸಾಧ್ಯತೆ ಇದೆ.

ದೆಹಲಿ ಹೈಕೋರ್ಟಿನಲ್ಲಿ ಇಂದು ಡಿಕೆಶಿ ತಾಯಿ ಮತ್ತು ಪತ್ನಿ ಅರ್ಜಿ ವಿಚಾರಣೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಮತ್ತು ಬೇನಾಮಿ ಆಸ್ತಿ ಗಳಿಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರ ಪತ್ನಿ ಉಷಾ ಹಾಗೂ ತಾಯಿ ಗೌರಮ್ಮ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಸಮನ್ಸ್​ ಕುರಿತ ವಿಚಾರಣೆಯನ್ನು ದೆಹಲಿ ಹೈಕೋರ್ಟ್​ ಇಂದು ನಡೆಸಲಿದೆ.

ಕಳೆದ ಸೋಮವಾರ ವಿಚಾರಣೆ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಬ್ರಿಜೇಶ್ ಸೇಥಿ ನೇತೃತ್ವದ ಏಕಸದಸ್ಯ ಪೀಠದ ಎದುರು ಉಷಾ ಮತ್ತು ಗೌರಮ್ಮ ಅವರಿಗೆ ನವೆಂಬರ್ 8ನೇ ತಾರೀಖಿನೊಳಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿರುವುದಾಗಿ ಜಾರಿ ನಿರ್ದೇಶನಾಲಯದ ಪರ ವಕೀಲರು ತಿಳಿಸಿದರು. 

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀಡಿದ್ದಾರೆ ಎಂದು ಹೇಳಲಾಗುತ್ತಿರುವ ಸಮನ್ಸ್​ ತಮ್ಮ ಕಕ್ಷಿದಾರರಿಗೆ ತಲುಪಿಲ್ಲ ಎಂದು ಗೌರಮ್ಮ ಹಾಗೂ ಉಷಾ ಪರ ವಕೀಲರು ಹೇಳಿದರು. ಈ ಹಿನ್ನೆಲೆಯಲ್ಲಿ ನವೆಂಬರ್ 6ರವರೆಗೆ ಕಾದು 7ನೇ ತಾರೀಖಿನಂದು ಮತ್ತೆ  ವಿಚಾರಣೆ ನಡೆಸೋಣ ಎಂದು ಹೇಳಲಾಗಿತ್ತು. ಹಿಂದಿನ ನಾಲ್ಕು ಬಾರಿಯೂ ಸುದೀರ್ಘ ವಿಚಾರಣೆ ಆಗಿರಲಿಲ್ಲ. ಇಂದು ಸುದೀರ್ಘ ವಿಚಾರಣೆ ನಡೆದು ಆದೇಶ ಹೊರಬೀಳುವ ಸಾಧ್ಯತೆ ಇದೆ.

 

Read More