Home> Karnataka
Advertisement

ಸೋನಿಯಾ ಪರ ಕಾಂಗ್ರೆಸ್ ಹೋರಾಟ: ಇಟಲಿವರೆಗೆ ಪಾದಯಾತ್ರೆ ಮಾಡಿ ಎಂದ ಬಿಜೆಪಿ

"ಇಟಲಿ ಮಾತೆಗಾಗಿ" ಕಾಂಗ್ರೆಸ್ಸಿಗರು ಭಾರತ ಬಿಟ್ಟು ತೊಲಗಿ ಅಭಿಯಾನ ಮಾಡಿದರೆ ನಮ್ಮ ಅಭ್ಯಂತರವಿಲ್ಲವೆಂದು ಬಿಜೆಪಿ ಟೀಕಿಸಿದೆ.  

ಸೋನಿಯಾ ಪರ ಕಾಂಗ್ರೆಸ್ ಹೋರಾಟ: ಇಟಲಿವರೆಗೆ ಪಾದಯಾತ್ರೆ ಮಾಡಿ ಎಂದ ಬಿಜೆಪಿ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹೆಸರಿನಲ್ಲಿ ಕೇಂದ್ರ ಸರ್ಕಾರವು ಇ.ಡಿಯನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಗೆ ಕಿರುಕುಳ ನೀಡುತ್ತಿದೆ. ಇದನ್ನು ಖಂಡಿಸಿ ಜುಲೈ 21ರಂದು ಕಾಂಗ್ರೆಸ್ ಬೆಂಗಳೂರಿನಲ್ಲಿ ಬಹೃತ್ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದು, ‘ರಾಜಭವನ’ಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದೆ. ಅಂದು ರಾಜ್ಯದ 22 ಜಿಲ್ಲೆಗಳಲ್ಲಿಯೂ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕೆ #ಕಾಂಗ್ರೆಸ್‌ಇಟಲಿಪಾದಯಾತ್ರೆ ಎಂದು ಬಿಜೆಪಿ ಟೀಕಿಸಿದೆ.

‘ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ‌ ನಡೆಸಿದ ಲೂಟಿಯನ್ನು "ಮನೆಗಳ್ಳತನ" ಎಂದು ಹೇಳಿದರೆ ಕಾಂಗ್ರೆಸ್ಸಿಗರಿಗೆ ರೋಷ ಉಕ್ಕಬಹುದು, ಆದರೆ ಅದೇ ಸತ್ಯ! ಈ ಮನೆಗಳ್ಳತನವನ್ನು ಸಮರ್ಥಿಸಿ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ನಡೆಸುತ್ತಿರುವುದರ ಅರ್ಥವೇನು?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: GST Rates Hike: ಬಡವರ ಹೊಟ್ಟೆಗೆ ಒದೆಯುವುದೇ ಪ್ರಧಾನಿ ಮೋದಿಯವರ ‘ಅಚ್ಚೇ ದಿನ್’- ಸಿದ್ದರಾಮಯ್ಯ

‘ಹಿಂದೂಗಳ ಹತ್ಯೆಯಾದಾಗ, ಸೈನಿಕರ ಮೇಲೆ ದಾಳಿಯಾದಾಗ, ತಾಲೀಬಾನಿ ಮಾದರಿಯಲ್ಲಿ ಕತ್ತು ಸೀಳಿದಾಗ ಬೀದಿಗೆ ಇಳಿಯದ ಕಾಂಗ್ರೆಸ್ ಈಗ ನಕಲಿ ಗಾಂಧಿಗಳನ್ನು #ED ವಿಚಾರಣೆ ಕರೆದಿರುವುದನ್ನು ವಿರೋಧಿಸಿ ಬೀದಿಗೆ ಇಳಿದಿದೆ. ನಿಮ್ಮ ಈ ಹೋರಾಟ ಭಾರತದ ಬೀದಿಗಳಿಗೆ ಮಾತ್ರ ಸೀಮಿತವೋ ಅಥವಾ ಇಟಲಿಯವರೆಗೂ ವಿಸ್ತರಣೆಯಾಗುತ್ತದೆಯೋ?’ ಎಂದು ಬಿಜೆಪಿ ಕುಟುಕಿದೆ.

‘ನ್ಯಾಷನಲ್ ಹೆರಾಲ್ಡ್, 2ಜಿ ಹಗರಣ, ಕಲ್ಲಿದ್ದಲು ಹಂಚಿಕೆ, ಕಾಮನ್ ವೆಲ್ತ್ ಹಗರಣದ ಮೂಲಕ ಕಪ್ಪು ಹಣ ಸೃಷ್ಟಿಯಲ್ಲಿ ವಿಶ್ವಕ್ಕೆ ಮಾದರಿಯಾದವರು‌ ಇಟಲಿ ಮೂಲದ ಆಂಟೋನಿಯೋ ಮೈನೋ ಉರುಫ್‌ ಸೋನಿಯಾ ಗಾಂಧಿ. ಹಾಗಾದರೆ ಈ ಬಗ್ಗೆ ಇಟಲಿಯಲ್ಲೂ ಕಾಂಗ್ರೆಸ್ ಜಾಗೃತಿ ಅಭಿಯಾನ ನಡೆಸುತ್ತದೆಯೇ?’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ‘ಜೈ ಭೀಮ್ʼ ಮತ್ತು ‘ಜನ ಗಣ ಮನ’ ಸಿನಿಮಾಗಳು ನನ್ನ ಮನ ಕಲಕಿವೆ: ಎಚ್‌ಡಿಕೆ

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಡಿಜಿಟಲ್ ಅಭಿಯಾನದಂತೆ, ಪಾಸ್ ಪೋರ್ಟ್ ಅಭಿಯಾನ ಮಾಡಿ ನಿಮ್ಮ ಪಕ್ಷದ ಶಾಶ್ವತ ಅಧ್ಯಕ್ಷೆ ಆಂಟೋನಿಯೋ ಮೈನೋ ಪರ ಇಟಲಿಯವರೆಗೂ ಪಾದಯಾತ್ರೆ ಹಮ್ಮಿಕೊಳ್ಳಿ. ಕಾಂಗ್ರೆಸ್‌ ಛೋಡೋ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯಬಹುದು!’ ಎಂದು ವ್ಯಂಗ್ಯವಾಡಿದೆ.

‘ಅಂದು "ಬ್ರಿಟಿಷರಿಗೆ" ಭಾರತ ಬಿಟ್ಟು ತೊಲಗಿ ಅಭಿಯಾನ ಆರಂಭಿಸಲಾಗಿತ್ತು. ಇಂದು "ಇಟಲಿ ಮಾತೆಗಾಗಿ" ಕಾಂಗ್ರೆಸ್ಸಿಗರು ಭಾರತ ಬಿಟ್ಟು ತೊಲಗಿ ಅಭಿಯಾನ ಮಾಡಿದರೆ ನಮ್ಮ ಅಭ್ಯಂತರವಿಲ್ಲ’ವೆಂದು ಬಿಜೆಪಿ ಟೀಕಿಸಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More