Home> Karnataka
Advertisement

ಅಧಿಕ ಧರಕ್ಕೆ ಮಾಸ್ಕ್ ಹಾಗೂ ಸ್ಯಾನಿಟೇಜರ್ ಮಾರಾಟ: ದೂರು ದಾಖಲಿಸಿಕೊಂಡು ದಂಡ ವಸೂಲಿ

ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಸರ್ಕಾರ ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ 179 ನ್ಯಾಯಬೆಲೆ ಅಂಗಡಿಗಳನ್ನು ಅಧಿಕಾರಿಗಳು ತಪಾಸಣೆ ನಡೆಸಿದರು. 

ಅಧಿಕ ಧರಕ್ಕೆ ಮಾಸ್ಕ್ ಹಾಗೂ ಸ್ಯಾನಿಟೇಜರ್ ಮಾರಾಟ: ದೂರು ದಾಖಲಿಸಿಕೊಂಡು ದಂಡ ವಸೂಲಿ

ಬೆಂಗಳೂರು: ಕೊರೋನಾವೈರಸ್  (Coronavirus)  ಕೋವಿಡ್-19 ಹಿನ್ನೆಲೆಯಲ್ಲಿ ಅಧಿಕ ದರಕ್ಕೆ ಮಾಸ್ಕ್ ಹಾಗೂ ಸ್ಯಾನಿಟೇಜರ್ (Sanitizer) ಮಾರಾಟ ಮಾಡುತ್ತಿದ್ದ ಔಷಧಿ ಅಂಗಡಿಗಳ ಮೇಲೆ ದಾಳಿ ನಡೆಸಿದ ಕಾನೂನು ಮಾಪನ ಇಲಾಖೆ ಅಧಿಕಾರಿಗಳು ಹುಬ್ಬಳ್ಳಿ ನಗರ ಸೇರಿದಂತೆ ಇತರ ಕಡೆ  ಮೊಕದ್ದಮೆ ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ.

ಒಟ್ಟು 236 ಅಂಗಡಿಗಳನ್ನು ತಪಾಸಣೆ ನೆಡಿಸಿದ ಅಧಿಕಾರಿಗಳು 10 ಮೊಕದ್ದಮೆಗಳನ್ನು ದಾಖಲಿಸಿ 20 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಸರ್ಕಾರ ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ 179 ನ್ಯಾಯಬೆಲೆ ಅಂಗಡಿಗಳನ್ನು ಅಧಿಕಾರಿಗಳು ತಪಾಸಣೆ ನಡೆಸಿದರು. ವಿವಿಧ ನಿಯಮಗಳನ್ನು ಉಲಂಘಸಿದ ನ್ಯಾಯಬೆಲೆ ಅಂಗಡಿಗಳ ಮೇಲೆ 62 ಮೊಕದ್ದಮೆ ದಾಖಲಿಸಿ 75 ಸಾವಿರ ದಂಡ ವಸೂಲಿ ಮಾಡಿದ್ದಾರೆ.  

ಕಾರ್ಯಾಚರಣೆಯಯಲ್ಲಿ ಸಹಾಯಕ ನಿಯಂತ್ರಕರಾದ ಮಧುಕರ.ಆರ್.ಘೋಡಕೆ, ನೀರಿಕ್ಷಕರಾದ ಸಿದ್ದಪ್ಪ ಪೂಜಾರಿ, ವೆಂಕಟೇಶ ತಿಳಗೊಳ, ಎಸ್.ಎಸ್. ಹಿರೇಮಠ ಭಾಗವಹಿಸಿದ್ದರು.
 

Read More