Home> Karnataka
Advertisement

ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಸಾವು ಆತ್ಮಹತ್ಯೆ: ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗ

ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ದಾರ್ಥ್ ಅವರ ಸಾವು ಆತ್ಮಹತ್ಯೆಯಿಂದಲೇ ಸಂಭವಿಸಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್) ತಜ್ಞರು ವರದಿ ನೀಡಿದ್ದಾರೆ.

ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಸಾವು ಆತ್ಮಹತ್ಯೆ: ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗ

ಮಂಗಳೂರು:  ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ದಾರ್ಥ್ ಅವರ ಸಾವಿಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್) ಅಂತಿಮ ವರದಿ ಹೊರಬಂದಿದ್ದು,  ಸಾವು ಆತ್ಮಹತ್ಯೆಯಿಂದಲೇ ಸಂಭವಿಸಿದೆ ಎಂದು ತಜ್ಞರು ವರದಿ ನೀಡಿದ್ದಾರೆ.

ಎಫ್‌ಎಸ್‌ಎಲ್ ವರದಿಯನ್ನು ಅಧ್ಯಯನ ನಡೆಸಿ ಶುಕ್ರವಾರ ಅಂತಿಮ ವರದಿ ಸಲ್ಲಿಸಿರುವ ವೈದ್ಯರು ಸಿದ್ಧಾರ್ಥ್ ಅವರ ಸಾವು ಆತ್ಮಹತ್ಯೆ ಇಂದಲೇ ಸಂಭವಿಸಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಅಂತಿಮ ವರದಿಯನ್ನು ಶುಕ್ರವಾರ ಪ್ರಕರಣದ ತನಿಖಾಧಿಕಾರಿಗೆ ತಲುಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜುಲೈ 29ರಂದು ಸಂಜೆ ರಾಷ್ಟ್ರೀಯ ಹೆದ್ಧಾರಿ 66 ರಲ್ಲಿ ಕಲ್ಲಾಪು ಬಳಿಯ ನೇತ್ರಾವತಿ ಸೇತುವೆ ಬಳಿಯಿಂದ ಸಿದ್ಧಾರ್ಥ್ ನಾಪತ್ತೆಯಾಗಿದ್ದರು. ಆಗಸ್ಟ್ 1 ರಂದು ಹೊಯ್ಗೆ ಬಜಾರ್ ಎಂಬಲ್ಲಿ ನದಿ ತೀರದಲ್ಲಿ ಸಿದ್ಧಾರ್ಥ್ ಅವರ ಶವ ಪತ್ತೆಯಾಗಿತ್ತು. 

ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ನೀರಿಗೆ ಬಿದ್ದು ಉಸಿರುಗಟ್ಟಿ ಸಿದ್ಧಾರ್ಥ್ ಅವರ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಿದ್ದರು. ಇದೀಗ ಎಫ್‌ಎಸ್‌ಎಲ್ ವರದಿ ಪ್ರಕರಣದ ತನಿಖಾಧಿಕಾರಿ ಅವರ ಕೈ ಸೇರಿದೆ. ಸಿದ್ಧಾರ್ಥ ಅವರ ಸಾವಿಗೆ ಸಂಬಂಧಿಸಿದಂತೆ ಇನ್ನೂ ಹಲವು ಅಂಶಗಳ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
 

Read More