Home> Karnataka
Advertisement

ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟ, ಪ್ರಿಯಕರನ ಮನೆಯಲ್ಲೇ ಯುವತಿಯ ಸೂಸೈಡ್ ಅಟೆಂಪ್ಟ್!

ಯುವತಿಗೆ ಬೇರೆ ಸಂಬಂಧಗಳು ಬಂದಾಗ ತ್ಯಾಗರಾಜ್ ಮದುವೆ ಆಗುವ ಭರವಸೆ ನೀಡಿ ನಿಲ್ಲಿಸಿದ್ದಾನೆ. ಕೈಕೊಡುವ ಸೂಕ್ಷ್ಮತೆ ಅರಿತು ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಮದುವೆ ಪ್ರಸ್ತಾಪ ಮಾಡಿದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.

ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟ, ಪ್ರಿಯಕರನ ಮನೆಯಲ್ಲೇ ಯುವತಿಯ ಸೂಸೈಡ್ ಅಟೆಂಪ್ಟ್!

ನಂಜನಗೂಡು: ಮದುವೆ ಆಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರನ ಮನೆಯಲ್ಲೇ ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆ(Suicide Attempt Case)ಗೆ ಯತ್ನಿಸಿದ ಘಟನೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ. ಗೆಳೆಯನ ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ ಇದೀಗ ಮೈಸೂರಿನ ಕೆ.ಆರ್.ಆಸ್ಪತ್ರೆ(KR Hospital) ಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಹುಟ್ಟುಹಬ್ಬದ  ಸಂಭ್ರಮ(Birthday Celebration)ದ ದಿನವೇ ಘಟನೆ ನಡೆದಿದೆ. ಹುಟ್ಟುಹಬ್ಬದ ಆಚರಣೆ ವೇಳೆ ಸ್ನೇಹಿತರ ಎದುರೇ ಪ್ರಿಯತಮೆಗೆ ಕಪಾಳಮೋಕ್ಷ ಮಾಡಿದ ಪ್ರಿಯಕರನ ವರ್ತನೆಗೆ ಬೇಸತ್ತ ಪ್ರಿಯತಮೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಇದನ್ನೂ ಓದಿ: ಎಸಿಬಿ ಕೆಲಸಕ್ಕೆ ನೋ ಸಾಥ್: ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ನಿಲ್ತಾ ರಾಜ್ಯ ಸರ್ಕಾರ..!?

ಕಂದೇಗಾಲ ಗ್ರಾಮ(Mysore District)ದ ಪ್ರಭುಸ್ವಾಮಿ ಎಂಬುವರ ಪುತ್ರ ತ್ಯಾಗರಾಜ್ ಅದೇ ಗ್ರಾಮದ ಕಾವ್ಯ ಎಂಬ ಯುವತಿಯನ್ನು ಕಳೆದ 4 ವರ್ಷಗಳಿಂದ ಪ್ರೀತಿಸಿದ್ದಾನೆ. ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. 3 ದಿನಗಳ ಹಿಂದೆ ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಸಂಭ್ರಮಾಚರಣೆ ಆಚರಿಸಲು ಮುಂದಾದ ತ್ಯಾಗರಾಜ್ ಪ್ರಿಯತಮೆ ಕಾವ್ಯಾಳನ್ನೂ ಸಹ ಆಹ್ವಾನಿಸಿದ್ದ. ಈ ವೇಳೆ ಮದುವೆ ಪ್ರಸ್ತಾಪ ಮಾಡಿದ ಕಾವ್ಯಾಗೆ ಸ್ನೇಹಿತರ ಎದುರು ಕಪಾಳಕ್ಕೆ ಹೊಡೆದಿದ್ದಾನೆ.

ಇದರಿಂದ ಮನನೊಂದ ಯುವತಿ ಕಾವ್ಯ ಕಂದೇಗಾಲ ಗ್ರಾಮದ ಗೆಳೆಯನ ಮನೆಗೆ ಆಗಮಿಸಿ ತ್ಯಾಗರಾಜ್ ತಾಯಿಗೆ ವಿಚಾರವನ್ನು ತಿಳಿಸಿದ್ದಾಳೆ. ನನ್ನನ್ನು ಮದುವೆ ಆಗುವುದಾಗಿ ನಂಬಿಸಿ ವಂಚಿಸುವ ಯತ್ನ(Cheated by Lover) ನಡೆಸುತ್ತಿದ್ದಾನೆಂದು ಆರೋಪಿಸಿ ವಿಷ ಸೇವಿಸಿದ್ದಾಳೆ. ನಂತರ ಗ್ರಾಮಸ್ಥರು  ಕಾವ್ಯಳನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯ ತುರ್ತು ಘಟಕಕ್ಕೆ ರವಾನಿಸಲಾಗಿದೆ. ತ್ಯಾಗರಾಜ್ ತಂದೆ  ಮದುವೆಗೆ ಅಡ್ಡಿಪಡಿಸಿದ್ದಾರೆಂದು ಹೇಳಲಾಗಿದೆ.

ಇದನ್ನೂ ಓದಿ: ಗೃಹ ಸಚಿವರು ಆಗಮಿಸಬೇಕಾದ ದಾರಿಯಲ್ಲಿ ಶಾರ್ಟ್ ಸರ್ಕ್ಯೂಟ್; ಬದಲಾದ ಮಾರ್ಗ

ಯುವತಿಗೆ ಬೇರೆ ಸಂಬಂಧಗಳು ಬಂದಾಗ ತ್ಯಾಗರಾಜ್ ಮದುವೆ ಆಗುವ ಭರವಸೆ ನೀಡಿ ನಿಲ್ಲಿಸಿದ್ದಾನೆ. ಕೈಕೊಡುವ ಸೂಕ್ಷ್ಮತೆ ಅರಿತ ಕಾವ್ಯ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಮದುವೆ ಪ್ರಸ್ತಾಪ ಮಾಡಿದ್ದಾಳೆ. ಈ ವೇಳೆ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಹುಲ್ಲಹಳ್ಳಿ ಪೊಲೀಸರು ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ನ್ಯಾಯ ಕೊಡಿಸುವಂತೆ ಯುವತಿ ಮನೆಯವರು ಹುಲ್ಲಹಳ್ಳಿ ಪೊಲೀಸ್ ಠಾಣೆ(Hullahalli Police Station)ಯಲ್ಲಿ ದೂರು ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More