Home> Karnataka
Advertisement

ಸನಾತನ ಧರ್ಮ ವಿರೋಧಿಸುವವರು ಈ ನೆಲದಲ್ಲಿ ಬೇರೂರಿದ್ದಾರೆ : ಖರ್ಗೆ ವಿರುದ್ಧ ಗುಡುಗಿದ ಸೂಲಿಬೆಲೆ


ಟ್ವಿಟರ್‌ನಲ್ಲಿ ನನಗೂ ಅವರಿಗೂ ಆಗಾಗ ಜಗಳ ನಡೆಯುತ್ತೆ, ಅವರು ನನ್ನನ್ನ ಜೈಲಿಗೆ ಹಾಕಿಸ್ತೀನಿ ಅಂತಾರೆ, ಕೃಷ್ಣ ಹುಟ್ಟಿದ್ದು ಜೈಲಲ್ಲಿ, ಸಾವರ್ಕರ್, ಭಗತ್ ಸಿಂಗ್ ಇದ್ದದ್ದು ಜೈಲಲ್ಲಿ. ಈ ಸಮಾಜ ಒಳ್ಳೆಯ ದಿಕ್ಕಿನ ಕಡೆ ನಡಿಬೇಕು ಅಂತ ಯಾರು ಹೇಳ್ತಾರೆ ಅಂತಹವರನ್ನು ಈ ಸರ್ಕಾರ ಜೈಲಿನಲ್ಲಿ ಇಟ್ಟಿದೆ ಎಂದು ಪರೋಕ್ಷವಾಗಿ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ದ ಚಕ್ರವರ್ತಿ ಸೂಲಿಬೆಲೆ ಗುಡುಗಿದರು.

ಸನಾತನ ಧರ್ಮ ವಿರೋಧಿಸುವವರು ಈ ನೆಲದಲ್ಲಿ ಬೇರೂರಿದ್ದಾರೆ : ಖರ್ಗೆ ವಿರುದ್ಧ ಗುಡುಗಿದ ಸೂಲಿಬೆಲೆ

ಕಲಬುರಗಿ : ಅನೇಕ ವರ್ಷಗಳಿಂದ ಇನ್ನೊಬ್ಬರಿಗೆ ತಮ್ಮ ಸೀಟ್‌ನ್ನು ಬಿಟ್ಟು ಕೊಡದೆ, ಮತ್ತೊಬ್ಬರನ್ನು ಎತ್ತಿ ಹಿಡಿಯದೇ ಗಟ್ಟಿಯಾಗಿ ತಳ ಊರಿರುವ ತಂದೆಯ ಮಗನೊಬ್ಬ ಸನಾತನ ಧರ್ಮ ಹೀಗೆ ಮಾಡಿದೆ ಹಾಗೆ ಮಾಡಿದೆ ಅಂತ ಹೇಳ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.

ನಗರದ ಕೋಟೆ ಮುಂದೆ ಹಿಂದು ಜಾಗರಣ ವೇದಿಕೆ ಪ್ರತಿಷ್ಠಾಪನೆ ಆಯೋಜನೆ ಮಾಡಿರುವ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಚಕ್ರವರ್ತಿ, ಸನಾತನ ಧರ್ಮವನ್ನು ವಿರೋಧಿಸುವವರು ಈ ನೆಲದಲ್ಲಿ ಬೇರೂರಿದ್ದಾರೆ, ಅನೇಕ ವರ್ಷಗಳಿಂದ ಇನ್ನೊಬ್ಬರಿಗೆ ತಮ್ಮ ಸೀಟನ್ನು ಬಿಟ್ಟುಕೊಡದೆ ಮತ್ತೊಬ್ಬರನ್ನು ಎತ್ತಿ ಹಿಡಿಯದೇ ಗಟ್ಟಿಯಾಗಿ ತಳ ಊರಿರುವ ತಂದೆಯ ಮಗ ಸನಾತನ ಧರ್ಮ ಮಾತಾಡ್ತಾರೆ ಅಂತ ಪರೋಕ್ಷವಾಗಿ ಪ್ರಿಯಾಂಕ್‌ ಖರ್ಗೆ ವಿರುದ್ಧ ಗುಡುಗಿದರು. 

ಇದನ್ನೂ ಓದಿ: ದಿವಂಗತ ನಟ ಚಿರಂಜೀವಿ ಸರ್ಜಾ ನಟನೆಯ ರಾಜಮಾರ್ತಾಂಡ ಸಿನಿಮಾ

ಅಲ್ಲದೆ, ಟ್ವಿಟರ್‌ನಲ್ಲಿ ನನಗೂ ಅವರಿಗೂ ಆಗಾಗ ಜಗಳ ನಡೆಯುತ್ತೆ, ಅವರು ನನ್ನನ್ನ ಜೈಲಿಗೆ ಹಾಕಿಸ್ತೀನಿ ಅಂತಾರೆ, ಕೃಷ್ಣ ಹುಟ್ಟಿದ್ದು ಜೈಲಲ್ಲಿ, ಸಾವರ್ಕರ್, ಭಗತ್ ಸಿಂಗ್ ಇದ್ದದ್ದು ಜೈಲಲ್ಲಿ. ಈ ಸಮಾಜ ಒಳ್ಳೆಯ ದಿಕ್ಕಿನ ಕಡೆ ನಡಿಬೇಕು ಅಂತ ಯಾರು ಹೇಳ್ತಾರೆ ಅಂತಹವರನ್ನು ಈ ಸರ್ಕಾರ ಜೈಲಿನಲ್ಲಿ ಇಟ್ಟಿದೆ, ಇನ್ನು ನೀನ್‌ ಯಾವ ಕೋತ್ವಾಲ್ ನಾಯಕ ಅಂತ ಹೇಳಿದೆ ಎಂದು ಚಿಂತಕ ಸೂಲಿಬೆಲೆ ಗುಡುಗಿದರು.

ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರೀಯ ಕಥೆಗಳನ್ನು ಕೇಳಿಕೊಂಡು ಬಂದವರು ನಾವು. ನಮನ್ನ ಎದುರಿಸೋದು ಬಾಳ ಕಷ್ಟ ಅಂತ ತಿಳಿದುಕೊಂಡವರಿಗೆ ಪಾಠ ಮಾಡೋ ಅಗತ್ಯ ಇದೆ, ಪ್ರತಿಯೊಂದಕ್ಕೂ ಪ್ಯಾಕ್ಟ್ ಚೆಕ್ ಮಾಡ್ತೇನೆ ಅಂತಾನೆ ನಿಮ್ಮ ಊರಿನ ಮಾಹಾನ್ ಪುರುಷ. ನಾನು ಪ್ಯಾಕ್ಟ್ ಚೆಕ್ ತೋರಿಸುತ್ತೆನೆ ನೋಡಿಕೊಂಡು ಬಿಡು ಎಂದು ಕಲಬುರ್ಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಚಕ್ರವರ್ತಿ ಸೂಲಿಬೆಲೆ ಹರಿಹಾಯ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More