Home> Karnataka
Advertisement

Bus Strike: ಸಾರಿಗೆ ನೌಕರರ ಮುಷ್ಕರಕ್ಕೆ 6 ದಿನಗಳಲ್ಲಿ 60 ಬಸ್ಸುಗಳು ಬಲಿ..!

ಬಸ್ ಮುಷ್ಕರದಲ್ಲಿ ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಸೇರಿದ 60 ಬಸ್‌ಗಳು ಹಾನಿ

Bus Strike: ಸಾರಿಗೆ ನೌಕರರ ಮುಷ್ಕರಕ್ಕೆ 6 ದಿನಗಳಲ್ಲಿ 60 ಬಸ್ಸುಗಳು ಬಲಿ..!

ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೆ ಮಾಡುವಂತೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರವು ಇಂದಿಗೆ 6 ನೇ ದಿನಕ್ಕೆ ಕಾಲಿಟ್ಟಿದೆ. ಏಪ್ರಿಲ್ 7 ರಿಂದ 13 ರವರೆಗೆ ನಡೆದ ಈ ಬಸ್ ಮುಷ್ಕರದಲ್ಲಿ ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಸೇರಿದ 60 ಬಸ್‌ಗಳು ಹಾನಿಗೊಳಗಾಗಿವೆ. ಅಲ್ಲದೆ  ಒಬ್ಬ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಲಾಗಿದೆ.

ಮುಷ್ಕರದಲ್ಲಿ(Bus Strike) ಸಾರಿಗೆ ಸಂಸ್ಥೆಗಳು ಅನುಭವಿಸಿದ ಹಾನಿಯ ಕುರಿತು ಇಂದು ಅಧಿಕಾರಿಗಳು ಮಾಹಿತಿ ಬಿಡುಗಡೆ ಮಾಡಿದ್ದಾರೆ. ಕೆಎಸ್‌ಆರ್‌ಟಿಸಿ 34 ಬಸ್‌ಗಳಿಗೆ ಹೆಚ್ಚು ಹಾನಿಯಾಗಿವೆ. ಬಸ್ ವಿಂಡ್‌ಶೀಲ್ಡ್ ಗಳು, ಕಿಟಕಿಗಳು ಮತ್ತು ಹಿಂಭಾಗದ ವಿಂಡ್‌ಶೀಲ್ಡ್ ಗಳು ಹಾನಿಯಾಗಿವೆ.

ಇದನ್ನೂ ಓದಿ- CBSE 10ನೇ ತರಗತಿ ಪರೀಕ್ಷೆ ರದ್ದಾದ ಬೆನ್ನಲೇ SSLC ಪರೀಕ್ಷೆಗಳ ಬಗ್ಗೆ ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ!

ತುಮಕೂರು ಬಳಿ ಬಸ್ಸಿನ ಮೇಲೆ ನಡೆದ ಕಲ್ಲು ತೂರಾಟ ಘಟನೆಯಲ್ಲಿ ಡ್ರೈವರ್(Bus Driver) ಮತ್ತು ಕಂಡಕ್ಟರ್  ಗಾಯಗೊಂದಿದ್ದರೆ. ಸಧ್ಯ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ  ಕೋಲಾರ್ ಬಳಿ ನಡೆದ ಘಟನೆಯಲ್ಲಿ ಬಸ್ ಚಾಲಕನ ಮೇಲೆ ಪೆಟ್ರೋಲ್ ಎರಚಲಾಗಿತ್ತು.

ಇದನ್ನೂ ಓದಿ- Covid-19: ರಂಜಾನ್‌ಗಾಗಿ ರಾಜ್ಯ ಸರ್ಕಾರದಿಂದ 'ಹೊಸ ಮಾರ್ಗಸೂಚಿ'ಗಳು..!

ಎನ್‌ಇಕೆಆರ್‌ಟಿಸಿಯ 20 ಬಸ್‌ಗಳು ಹಾನಿಯಾಗಿವೆ ಎಂದು ವರದಿ ಮಾಡಿದ್ದರೆ, ಬಿಎಂಟಿಸಿ(BMTC) ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿಯ ತಲಾ ಎರಡೂ-ಮೂರು ಬಸ್‌ಗಳಿಗೆ ಹಾನಿಯಾಗಿದೆ ಎಂದು ವರದಿ ಮಾಡಿದ್ದಾರೆ.

ಇದನ್ನೂ ಓದಿ- Ashwath Narayan: 'ಪದವಿ ಮತ್ತು ಸ್ನಾತಕೋತರ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಎಕ್ಸಾಮ್ ಸಾಧ್ಯವಿಲ್ಲ'
 
ಸಾರ್ವಜನಿಕ ಆಸ್ತಿಪಾಸ್ತಿಗಳನ್ನೂ  ಹಾನಿ ಮಾಡುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಅಧಿಕಾರಿಗಳಿಗೆ ಸೂಚನೆ ನೀಡಿದ ಒಂದು ದಿನದ ನಂತರ ಈ ಡೇಟಾ ಬಿಡುಗಡೆ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More