Home> Karnataka
Advertisement

Boy Killed Crocodile: ನೀರು ತರಲು ಹೋದ ಬಾಲಕನ ಮೇಲೆ ಮೊಸಳೆ ದಾಳಿ -ಮೃತದೇಹಕ್ಕಾಗಿ ಹುಡುಕಾಟ!

Boy Killed Crocodile: ನೀರು ತರಲು ಹೋದ ವೇಳೆ ಮೊಸಳೆ ದಾಳಿಗೆ ಬಾಲಕನೋರ್ವ ಬಲಿಯಾದ ಘಟನೆ ರಾಯಚೂರು ಜಿಲ್ಲೆಯ ಕುರುವಕಲಾ ಗ್ರಾಮದಲ್ಲಿ ನಡೆದಿದೆ. ಬೇಸಿಗೆ ಕಾಲದಲ್ಲಿ ನದಿ ಕೆರೆಗಳ ನೀರು ಬತ್ತುತ್ತದೆ ಅದೇ ರೀತಿ ಕೃಷ್ಣಾ ನದಿ ಬತ್ತಲು ಆರಂಭವಾಗಿ ಆ ವೇಳೆ ಮೊಸಳೆಗಳ ಹಾವಳಿ ಹೆಚ್ಚಾಗುತ್ತವೆ.

Boy Killed Crocodile: ನೀರು ತರಲು ಹೋದ ಬಾಲಕನ ಮೇಲೆ ಮೊಸಳೆ ದಾಳಿ -ಮೃತದೇಹಕ್ಕಾಗಿ ಹುಡುಕಾಟ!

ರಾಯಚೂರು: ನೀರು ತರಲು ಹೋದ ವೇಳೆ ಮೊಸಳೆ ದಾಳಿಗೆ ಬಾಲಕನೋರ್ವ ಬಲಿಯಾದ ಘಟನೆ ರಾಯಚೂರು ಜಿಲ್ಲೆಯ ಕುರುವಕಲಾ ಗ್ರಾಮದಲ್ಲಿ ನಡೆದಿದೆ. ಬೇಸಿಗೆ ಕಾಲದಲ್ಲಿ ನದಿ ಕೆರೆಗಳ ನೀರು ಬತ್ತುತ್ತದೆ ಅದೇ ರೀತಿ ಕೃಷ್ಣಾ ನದಿ ಬತ್ತಲು ಆರಂಭವಾಗಿ ಆ ವೇಳೆ ಮೊಸಳೆಗಳ ಹಾವಳಿ ಹೆಚ್ಚಾಗುತ್ತವೆ. ನದಿ ತೀರದಲ್ಲಿ ಹೋದವರನ್ನು ಬೇಸಿಗೆ ಸಮಯದಲ್ಲಿ ತಮ್ಮ ಆಹಾರವನ್ನಾಗಿ ಮಾಡಿಕೊಳ್ಳುತ್ತವೆ. 

ಹೀಗೆ ಇದೇ ರೀತಿ ಮೊಸಳೆ ನದಿ ತೀರಕ್ಕೆ ಬಂದ ಬಾಲಕನ್ನು ತಿಂದಿರುವ ಘಟನೆ ಕುರುವಕಲಾ ಗ್ರಾಮದಲ್ಲಿ ಸಂಭವಿಸಿದೆ. ತಂದೆ- ತಾಯಿಯ ಜೊತೆ ಹೊಲಕ್ಕೆ ಹೋಗಿದ್ದ ನವೀನ್ ನದಿಯಲ್ಲಿ ನೀರು ತರಲು ಹೋದಾಗ ಮೊಸಳೆ ದಾಳಿ ನಡೆಸಿದೆ.  ಕೃಷ್ಣಾನದಿ ಹಂಚಿಗೆ ಇರುವ ಹೊಲ. ಹೀಗಾಗಿ ಬಾಯಾರಿಕೆಗೆ ನದಿಯ ನೀರನ್ನೇ ತಂದು ಕುಡಿಯುತ್ತಿದ್ದ ಕುಟುಂಬ. 

ಇದನ್ನೂ ಓದಿ: Karnataka CM: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಶಾಂತಿ, ಸಾಮರಸ್ಯ ಹಾಗೂ ಪ್ರಗತಿ ಸಾಧಿಸಲು ಬದ್ಧ - ಸೋನಿಯಾ ಗಾಂಧಿ

ಶಾಲೆಗಳಿಗೆ ರಜೆ ಇದ್ದರಿಂದ  ಈ ವೇಳೆ ಬಾಯಾರಿಕೆ ಆಗಿದ್ದಕ್ಕೆ ಕುಡಿಯಲು ನೀರು ತರಲು ಕೃಷ್ಣಾನದಿಗೆ ಹೋಗಿದ್ದಾನೆ. ದಂಡೆಗೆ ಮೊಸಳೆಗಳಿರುವ ಬಗ್ಗೆ ತಿಳಿಯದೆ ನೀರು ತುಂಬಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ನೀರಿಗೆ ಹೋದ ಮಗ ಎಷ್ಟು ಹೊತ್ತಾದರೂ ಬಾರದನ್ನು ಗಮನಿಸಿ ಪೋಷಕರು ಕೃಷ್ಣಾ ನದಿ ತೀರದಲ್ಲಿ ಹುಡುಕುವಾಗ ಬಾಲಕನ ಮೇಲೆ ದಾಳಿ ನಡೆಸಿ ಬಲಿ ಪಡೆದಿರುವುದು ಗಮನಕ್ಕೆ ಬಂದಿದೆ. 

ಇದನ್ನೂ ಓದಿ: Former CM Basavaraja Bommai: ಕರ್ನಾಟಕದ ಜನತೆಯ ನಿರೀಕ್ಷೆ ಹುಸಿ: ಸರ್ಕಾರದ ವಿರುದ್ಧ ಮಾಜಿ ಸಿಎಂ ವಾಗ್ದಾಳಿ

ಬಾಲಕ ನವೀನ್ ಮೃತ ದೇಹಕ್ಕೆ ಹುಡುಕಾಟ ನಡೆಸಿರುವ ಕುಟುಂಬಸ್ಥರು ಇನ್ನೂ ಪತ್ತೆಯಾಗದಿರುವುದು ಪೋಷಕರು ಸಂಕಟ ಮುಗಿಲು ಮುಟ್ಟಿದ್ದೆ. ಸದ್ಯ ಬೇಸಿಗೆ ಕಾಲದಲ್ಲಿ ಕೃಷ್ಣಾ ನದಿ ಬತ್ತಲು ಶುರುವಾಗುತ್ತಿದಂತೆ ಮೊಸಳೆಗಳ ಕಾಟ ವಿಪರೀತವಾಗುತ್ತದೆ. ಇದರಿಂದಾಗಿ ನದಿ ಪಾತ್ರದ ಜಮೀನುಗಳ ರೈತರು ತಮ್ಮ ಜಮೀನಿಗೆ ಹೋಗಲು ಹೆದರುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

  

Read More