Home> Karnataka
Advertisement

"ಸಂತೋಷ್ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು"

ನಗರದಲ್ಲಿ ನಡೆದ ಬಿಜೆಪಿ ಮಹಿಳಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮೃತ ಸಂತೋಷ್ ಪತ್ನಿಗೆ ಉದ್ಯೋಗ ಕೊಡುವುದರಲ್ಲಿ ತಪ್ಪೇನಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದರು. 

ರಾಯಚೂರು: ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಹೇಳಿದರು. 

ಇದನ್ನು ಓದಿ:  ಜೀ5 ಒಟಿಟಿಯಲ್ಲಿ ಏಕ್ ಲವ್ ಯಾ ಧಮಾಕಾ...ಜಸ್ಟ್ 7 ದಿನದಲ್ಲಿ ಭರ್ಜರಿ ಸ್ಟ್ರೀಮಿಂಗ್

ನಗರದಲ್ಲಿ ನಡೆದ ಬಿಜೆಪಿ ಮಹಿಳಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮೃತ ಸಂತೋಷ್ ಪತ್ನಿಗೆ ಉದ್ಯೋಗ ಕೊಡುವುದರಲ್ಲಿ ತಪ್ಪೇನಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದರು. 

ಇದನ್ನು ಓದಿ:  Viral Video : ತಾಂಜೇನಿಯಾದ ಹುಡುಗನ ಮೈ ಮೇಲೆ KGF 2 ಭೂತ : ನಟನೆ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಇನ್ನು ಇದೇ ಸಂದರ್ಭದಲ್ಲಿ ಲವ್ ಜಿಹಾದ್ ಬಗ್ಗೆ ಮಾತನಾಡಿ, ರಾಜ್ಯ ಸೇರಿ ಬೇರೆ ಕಡೆಗಳಲ್ಲಿಯೂ ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚಾಗಿದೆ.  ಹಿಂದೂ ಹೆಣ್ಣು ಮಕ್ಕಳನ್ನು ಮೋಸ ಮಾಡಿ, ಅವರ ಜೀವನ ನಾಶ ಮಾಡಲಾಗುತ್ತಿದೆ. ಇದನ್ನು ತಡೆಯಲು ಆಗುತ್ತಿಲ್ಲ ಎಂಬ ಕೋಪಕ್ಕೆ ಹಿಂದೂ ಸಂಘಟನೆಗಳು ಲವ್‌ ಕೇಸರಿ ಎಂಬ ಹೇಳಿಕೆಯನ್ನು ನೀಡರಬಹುದು. ಯಾವುದೋ ಸಮುದಾಯ ಹಾಗೇ ಮಾಡ್ತಿದೆ ಅಂದ್ರೆ, ಅದರ ವಿರುದ್ಧವಾಗಿ ನಾವೂ ಮಾಡೋದು ಸರಿಯಲ್ಲ ಎಂದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More