Home> Karnataka
Advertisement

'ಆತ್ಮಾರಾಧನೆ ಮಾಡಿಕೊಳ್ಳುವ ಕಾಂಗ್ರೆಸ್ ಭವಿಷ್ಯ ಇನ್ನಷ್ಟು ಘೋರವಾಗಿರಲಿದೆ'

ಗುರುವಾರ ಹೊರಬಿದ್ದ ‘ಪಂಚ’ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಯು ಉತ್ತರಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ.

'ಆತ್ಮಾರಾಧನೆ ಮಾಡಿಕೊಳ್ಳುವ ಕಾಂಗ್ರೆಸ್ ಭವಿಷ್ಯ ಇನ್ನಷ್ಟು ಘೋರವಾಗಿರಲಿದೆ'

ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ(Randeep Surjewala) ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ಭವಿಷ್ಯ ಇನ್ನಷ್ಟು ಘೋರವಾಗಿರಲಿದೆ ಎಂದು ಟೀಕಿಸಿದೆ.

‘ಪಂಚ’ ರಾಜ್ಯಗಳ ಚುನಾವಣೆ(5 State Election Result)ಯಲ್ಲಿ ನಮಗೆ ಸ್ಥಾನಗಳು ಸಿಗದಿದ್ದರೂ ಕಾಂಗ್ರೆಸ್ ಪ್ರತಿ ಬೀದಿ ಮತ್ತು ಪ್ರದೇಶವನ್ನು ತಲುಪಿದೆ. ಉತ್ತರಾಖಂಡ ಮತ್ತು ಗೋವಾದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಆದರೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದರು.

ಇದನ್ನೂ ಓದಿ: Niranthara Ranga Utsava: ಮಾರ್ಚ್ 23ರಿಂದ 27ರವರೆಗೆ ‘ನಿರಂತರ ರಂಗ ಉತ್ಸವ’

ಸುರ್ಜೇವಾಲಾ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ(BJP), ‘ಜಟ್ಟಿ ಮಣ್ಣಿಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಇದು ಕಾಂಗ್ರೆಸ್‌ಗೆ ಹೇಳಿ ಮಾಡಿಸಿದ ಮಾತು. ಕಾಂಗ್ರೆಸ್ ಪ್ರತಿ ಬೀದಿ ತಲುಪಿದ್ದಲ್ಲ, ಬೀದಿಗೆ ಬಿದ್ದಿದ್ದು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಆತ್ಮಾವಲೋಕನ ಮಾಡಿಕೊಳ್ಳುವ ಸಮಯದಲ್ಲಿ ಆತ್ಮಾರಾಧನೆ ಮಾಡಿಕೊಳ್ಳುವ ಕಾಂಗ್ರೆಸ್ ಭವಿಷ್ಯ ಇನ್ನಷ್ಟು ಘೋರವಾಗಿರಲಿದೆ’ ಅಂತಾ ಟ್ವೀಟ್ ಮಾಡಿದೆ.

ಗುರುವಾರ ಹೊರಬಿದ್ದ ‘ಪಂಚ’ ರಾಜ್ಯಗಳ ಚುನಾವಣೆ(5 State Election Result) ಫಲಿತಾಂಶದಲ್ಲಿಬಿಜೆಪಿಯು ಉತ್ತರಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಕಳಪೆ ಸಾಧನೆ ಮಾಡಿದೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನಷ್ಟೇ ಪಡೆದುಕೊಂಡಿದೆ. ಉತ್ತರಾಖಂಡದಲ್ಲಿ 19, ಪಂಜಾಬ್ ನಲ್ಲಿ 18, ಗೋವಾದಲ್ಲಿ 11 ಮತ್ತು ಮಣಿಪುರದಲ್ಲಿ 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಪಂಜಾಬ್(Punjab Election 2022) ನಲ್ಲಿ ಆಮ್ ಆದ್ಮಿ ಪಕ್ಷವು ಜಯಭೇರಿ ಭಾರಿಸಿದ್ದು, ಸರ್ಕಾರ ರಚಿಸುವ ಸಿದ್ಧತೆಯಲ್ಲಿದೆ. ಇನ್ನುಳಿದಂತೆ 4 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸುವ ಕಸರತ್ತು ನಡೆಸುತ್ತಿದೆ.  

ಇದನ್ನೂ ಓದಿ: ಸಿದ್ದರಾಮಯ್ಯನವರೇ ಇದು ನಿಮ್ಮ ಕರ್ಮದ ಫಲ: ಕಾಂಗ್ರೆಸ್ ಸೋಲಿಗೆ ಬಿಜೆಪಿ ವ್ಯಂಗ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More