Home> Karnataka
Advertisement

ಅಮುಲ್ ಜೊತೆ ನಂದಿನಿ ವಿಲೀನ ಮಾಡಲಾಗುತ್ತದೆಂಬ ಸುಳ್ಳು ಸುದ್ದಿ ಕೊಟ್ಟಿದ್ಯಾರು?: ಬಿಜೆಪಿ ಪ್ರಶ್ನೆ

Amul-Nandini Merger: ಹಳೆಯ ಮೈಸೂರು ಭಾಗಕ್ಕೆ ನೀವು ಮಾಡಿದ ಅನ್ಯಾಯದ ಬಗ್ಗೆ ಹೇಳಿದ ಕೂಡಲೇ ಇಷ್ಟೊಂದು ಹೆದರಿಬಿಟ್ಟರೆ ಹೇಗೆ ಎಚ್‍ಡಿಕೆಯವರೆ? ಎಂದು ಬಿಜೆಪಿ ಪ್ರಶ್ನಿಸಿದೆ.

ಅಮುಲ್ ಜೊತೆ ನಂದಿನಿ ವಿಲೀನ ಮಾಡಲಾಗುತ್ತದೆಂಬ ಸುಳ್ಳು ಸುದ್ದಿ ಕೊಟ್ಟಿದ್ಯಾರು?: ಬಿಜೆಪಿ ಪ್ರಶ್ನೆ

ಬೆಂಗಳೂರು: ತಂದಿಟ್ಟು ತಮಾಷೆ ನೋಡುವ ಕಲೆ ನಮ್ಮ ಎಚ್.ಡಿ.ಕುಮಾರಸ್ವಾಮಿಯವರಿಗೆ ಸಿದ್ಧಿಸಿದೆ ಎಂದು ಬಿಜೆಪಿ ಟೀಕಿಸಿದೆ. ಗುಜರಾತ್‌ನ ಅಮುಲ್‌ ಜೊತೆ ಕರ್ನಾಟಕ ಹಾಲು ಮಹಾಮಂಡಳ (KMF –ನಂದಿನಿ)ಯನ್ನು ವಿಲೀನಗೊಳಿಸುವ ಕೇಂದ್ರ ಗೃಹ ಸಚಿವ ಅಮಿತ್‌ ಶಾರ ಹೇಳಿಕೆಗೆ ಮಾಜಿ ಸಿಎಂ ಎಚ್‍ಡಿಕೆ ವಿರೋಧ ವ್ಯಕ್ತಪಡಿಸಿದ್ದರು.

ಬುಧವಾರ ಎಚ್‍ಡಿಕೆ ಟೀಕೆಗೆ ತಿರುಗೇಟು ನೀಡಿರುವ ಬಿಜೆಪಿ, ‘ತಂದಿಟ್ಟು ತಮಾಷೆ ನೋಡುವ ಕಲೆ, ನಮ್ಮ ಕುಮಾರಸ್ವಾಮಿಯವರಿಗೆ ಸಿದ್ಧಿಸಿದೆ. ನಂದಿನಿ ಬ್ರ್ಯಾಂಡ್‌ ವಿಷಯ ಮುಂದಿಟ್ಟುಕೊಂಡು ಕರ್ನಾಟಕ ಮತ್ತು ಗುಜರಾತ್ ಮಧ್ಯೆ ವೈಮನಸ್ಯ ಮೂಡಿಸುವ ವಿಫಲಯತ್ನ ಮಾಡಿದ್ದಾರೆ. ನಂದಿನಿಯನ್ನು ಅಮುಲ್‌ ಜೊತೆ ವಿಲೀನ ಮಾಡಲಾಗುತ್ತದೆ ಎಂಬ ಸುಳ್ಳು ಸುದ್ದಿ ಕೊಟ್ಟಿದ್ಯಾರು?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: Mysuru: ಅಗ್ನಿಶಾಮಕ ವಸತಿ ಗೃಹದಲ್ಲಿ ಸಿಲೆಂಡರ್ ಸ್ಫೋಟ, 10ಕ್ಕೂ ಹೆಚ್ಚು ಮಂದಿಗೆ ಗಾಯ!

‘ಹಳೆಯ ಮೈಸೂರು ಭಾಗಕ್ಕೆ ನೀವು ಮಾಡಿದ ಅನ್ಯಾಯದ ಬಗ್ಗೆ ಹೇಳಿದ ಕೂಡಲೇ ಇಷ್ಟೊಂದು ಹೆದರಿಬಿಟ್ಟರೆ ಹೇಗೆ ಎಚ್‍ಡಿಕೆಯವರೆ? ಆ ಭಾಗದಲ್ಲಿ ಜನ ಏನು ಹೇಳುತ್ತಿದ್ದಾರೋ ಅದನ್ನೇ ನಾವೂ ಹೇಳುತ್ತಿದ್ದೇವಷ್ಟೆ. ಜೊತೆಗೆ ರಾಜ್ಯದ ಅಷ್ಟೂ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು ಕನ್ನಡಿಗರೇ ಎಂಬುದು ತಮಗೆ ತಿಳಿದಿರಲಿ’ ಎಂದು ಬಿಜೆಪಿ ಟೀಕಿಸಿದೆ.

‘ಕರ್ನಾಟಕದ ಮೇಲೆ ಅಸೂಯೆ, ಅಸಹನೆ ನಮಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರ ಆತಂಕ ನಮಗೆ ಅರ್ಥವಾಗುತ್ತದೆ. ಜನರಲ್ಲಿ ತಪ್ಪು ಕಲ್ಪನೆ ಸೃಷ್ಟಿಸಲು ಸೂತ್ರಗಳನ್ನು ತರಾತುರಿಯಲ್ಲಿ ಹೆಣೆಯುತ್ತಿದ್ದಾರೆ. ಕುಟುಂಬ ರಾಜಕಾರಣ ಅಂತ್ಯವಾಗುವುದೆಂಬ ಭಯವೇ?’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ₹1000 ನೋಟಿನಂತೆ, ಡಿಕೆಶಿ ₹2000 ನೋಟಿನಂತೆ: ಬಿಜೆಪಿ ಟೀಕೆ

‘ಅಪ್ಪಟ ಕನ್ನಡಿಗ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಹೇಗೆ ಗೌರವಿಸಬೇಕು ಎಂಬುದನ್ನು ಎಚ್‍ಡಿಕೆ ಬಿಜೆಪಿಯನ್ನು ನೋಡಿ ಕಲಿಯಬೇಕು. ನಿಮ್ಮ ರಾಜಕೀಯದ ಆಸೆಗಾಗಿ ಕೆಲ ಕಾಲ ತಂದೆಯನ್ನೇ ದೂರವಿಟ್ಟ ಅವಕಾಶವಾದಿಯಲ್ಲವೇ ನೀವು? ಕನ್ನಡಿಗರನ್ನು ನೀವು ನಡೆಸಿಕೊಂಡಿದ್ದಕ್ಕಿಂತಲೂ ಗೌರವಯುತವಾಗಿ ಬಿಜೆಪಿ ನಡೆಸಿಕೊಳ್ಳುತ್ತಿದೆ ಎಂಬುದು ನೆನಪಿರಲಿ’ ಎಂದು ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More