Home> Karnataka
Advertisement

BJP: ಜನೇವರಿಯಿಂದಲೇ ಜಿಲ್ಲಾ-ತಾಲೂಕು ಪಂ. ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ..!

ಏಪ್ರಿಲ್‍ನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿ  ಚುನಾವಣೆಗಾಗಿ ಬಿಜೆಪಿ ತಳಮಟ್ಟದಿಂದಲೇ ಸಕಲ ತಯಾರಿ ನಡೆಸುತ್ತಿದ್ದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಗೆಲ್ಲಲು ಸಹಾಯ

BJP: ಜನೇವರಿಯಿಂದಲೇ ಜಿಲ್ಲಾ-ತಾಲೂಕು ಪಂ. ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ..!

ಬೆಂಗಳೂರು: ರಾಜ್ಯಾದ್ಯಂತ ತನ್ನ ಹೆಜ್ಜೆ ಮೂಡಿಸಲು ಮುಂದಾಗಿರುವ ಬಿಜೆಪಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿ  ಚುನಾವಣೆಗಾಗಿ ಎಲ್ಲ ಪೂರ್ವಸಿದ್ಧತೆಗಳನ್ನು ನಡೆಸುತ್ತಿದೆ. ಏಪ್ರಿಲ್‍ನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿ  ಚುನಾವಣೆಗಾಗಿ ಬಿಜೆಪಿ ತಳಮಟ್ಟದಿಂದಲೇ ಸಕಲ ತಯಾರಿ ನಡೆಸುತ್ತಿದ್ದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಗೆಲ್ಲಲು ಸಹಾಯವಾಗಲಿದೆ.

ಬಿಜೆಪಿ ಕಾರ್ಯಕಾರಿಣಿ ಸಭೆ ಜನವರಿ ಮೊದಲ ವಾರದಲ್ಲಿ ನಡೆಯಲಿದ್ದು, ಗ್ರಾಮ ಪಂಚಾಯತಿ ಚುನಾವಣೆ(Election)ಗೆ ನಡೆಸಿದ ತಂತ್ರಗಾರಿಕೆಯನ್ನೇ ಇಲ್ಲಿಯೂ ಬಳಸಲು ನಿರ್ಧರಿಸಲಾಗಿದೆ. ಈಗಾಗಲೇ ಕೆಲವು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಅನಧಿಕೃತ ಕ್ಯಾಂಪೇನ್ ಆರಂಭಿಸಿದ್ದಾರೆ. ಗ್ರಾಮದ ಪ್ರತಿ ಮನೆಗಳಿಗೂ ತೆರಳಿ ಪ್ರಚಾರ ಮಾಡುತ್ತಿದ್ದಾರೆ, ಈ ಯೋಜನೆಯಿಂದಾಗಿ ಪಕ್ಷ ತಳಮಟ್ಟದಿಂದ ಬಲವಾಗಲಿದ್ದು ದೊಡ್ಡ ಚುನಾವಣೆ ಗೆಲ್ಲಲು ಸಹಾಯವಾಗಲಿದೆ.

ಆದಿಚುಂಚನಗಿರಿ ಶ್ರೀ ಮಠದಿಂದ ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣದ ಚಿಂತನೆ: ಸಚಿವ ಎಸ್.ಟಿ. ಸೋಮಶೇಖರ್

ಒಂದು ಲಕ್ಷಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರಿಗೆ ಪಕ್ಷವನ್ನು ವಿಜಯದತ್ತ ಕೊಂಡೊಯ್ಯುವ ಜವಾಬ್ದಾರಿಯನ್ನು ನೀಡಿದ್ದರಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಬಳಸಿದ ತಂತ್ರಗಳು ಫಲ ನೀಡುತ್ತಿವೆ. ಗ್ರಾಮೀಣ ಜನತೆಯನ್ನು ಪಕ್ಷಕ್ಕೆ ಸೆಳೆಯಲು, ನಾವು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸುತ್ತೇವೆ ಮತ್ತು ಚುನಾಯಿತ ಪ್ರತಿನಿಧಿಗಳು ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆ.

ಬೆಂಗಳೂರು ಒಂದರಲ್ಲೇ ಬ್ರಿಟನ್‌ನಿಂದ ಬಂದವರು 31 ಜನ!

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನತೆಗೆ ನೀಡಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

'ಮಾರ್ಚ್-2021ರಲ್ಲಿ SSLC-PUC ಪರೀಕ್ಷೆಗಳು ನಡೆಯುವುದಿಲ್ಲ'

ಗ್ರಾಮ ಪಂಚಾಯತಿ ಚುನಾವಣೆಗೆ ಕೆಲಸ ಮಾಡಿದ ಹಿರಿಯ ನಾಯಕರ ಅದೇ ಆರು ತಂಡಗಳು ರಾಜ್ಯಾದ್ಯಂತ ಪ್ರವಾಸ ಮಾಡಲಿವೆ ಎಂದು ತಿಳಿದುಬಂದಿದೆ. ಸಂಘಟನಾ ಕಾರ್ಯಕರ್ತರು ಮುಂಬರುವ ಚುನಾವಣೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಗ್ರಾಪಂ ಚುನಾವಣೆ ಜವಾಬ್ದಾರಿ ಹೊತ್ತಿದ್ದವರೇ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಜವಾಬ್ದಾರಿ ಹೊರಲಿದ್ದಾರೆ.

ಸಿಎಂ ಬಿಎಸ್ ವೈಗೆ ಮತ್ತೆ ಎದುರಾಗಿದೆ 'ಡಿನೋಟಿಫಿಕೇಷನ್' ಸಂಕಷ್ಟ..!

Read More