Home> Karnataka
Advertisement

ಚಾಮರಾಜನಗರ: 5 ಮೀ. ದೂರದಲ್ಲಿ ಮಾಲೀಕ ಇದ್ರೂ ಬೈಕ್ ಎಗರಿಸಿದ ಕತರ್ನಾಕ್ ಕಳ್ಳ- ವಾಚ್ ವಿಡಿಯೋ

ವೈರಲ್: ಎಷ್ಟೋ ಬಾರಿ ನಾವು ಹೊರಗೆ ನಿಲ್ಲಿಸಿ ಹೋದ ವಾಹನ ನಾವು ಮತ್ತೆ ವಾಪಸ್ ಬರುವಷ್ಟರಲ್ಲಿ ಅಲ್ಲಿಂದ ಮಾಯವಾಗಿರುತ್ತದೆ. ಇಂತಹ ಸುದ್ದಿಗಳನ್ನು ನಾವು ದಿನ ಬೆಳಗಾದರೆ ಕೇಳುತ್ತಲೇ ಇರುತ್ತೇವೆ. ಆದರೆ, ಇಲ್ಲೊಬ್ಬ ಕತರ್ನಾಕ್ ಕಳ್ಳ ಮಾಲೀಕನ ಎದುರೇ ಬೈಕ್ ಕದ್ದು ಪರಾರಿಯಾಗಿದ್ದಾನೆ.

ಚಾಮರಾಜನಗರ: 5 ಮೀ. ದೂರದಲ್ಲಿ ಮಾಲೀಕ ಇದ್ರೂ ಬೈಕ್ ಎಗರಿಸಿದ ಕತರ್ನಾಕ್ ಕಳ್ಳ- ವಾಚ್ ವಿಡಿಯೋ

ಚಾಮರಾಜನಗರ:  ದಿನ ಬೆಳಗಾದರೆ ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನಗಳ ಕಳ್ಳತನದ ಬಗ್ಗೆ ಸುದ್ದಿಗಳನ್ನು ಓದುತ್ತಲೇ ಇರುತ್ತೇವೆ. ಇದಕ್ಕೆ ಕಳ್ಳರ ಚಾಣಾಕ್ಷತೆ ಮಾತ್ರವಲ್ಲ, ನಮ್ಮ ನಿರ್ಲಕ್ಷವೂ ಕಾರಣ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಇದಕ್ಕೆ ಕನ್ನಡಿ ಹಿಡಿದಂತಿದೆ ಈ ವಿಡಿಯೋ. 

ವಾಸ್ತವವಾಗಿ, ಎಷ್ಟೋ ಬಾರಿ ನಾವು ಹೊರಗೆ ನಿಲ್ಲಿಸಿ ಹೋದ ವಾಹನ ನಾವು ಮತ್ತೆ ವಾಪಸ್ ಬರುವಷ್ಟರಲ್ಲಿ ಅಲ್ಲಿಂದ ಮಾಯವಾಗಿರುತ್ತದೆ. ಆದರೆ, ಇಲ್ಲೊಬ್ಬ ಕತರ್ನಾಕ್ ಕಳ್ಳ ಮಾಲೀಕನ ಎದುರೇ ಬೈಕ್ ಕದ್ದು ಪರಾರಿಯಾಗಿರುವ ಘಟನೆ ಚಾಮರಾಜನಗರದಲ್ಲಿ ಭಾನುವಾರ (ಅಕ್ಟೋಬರ್ 09) ರಂದು ರಾತ್ರಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಇದನ್ನೂ ಓದಿ- ಟಿಪ್ಪು, ತಾಳಗುಪ್ಪ ರೈಲುಗಳಿಗೆ ಒಡೆಯರ್, ಕುವೆಂಪು ಎಕ್ಸಪ್ರೆಸ್ ಎಂದು ಮರುನಾಮಕರಣ

ಭಾನುವಾರ (ಅಕ್ಟೋಬರ್ 09) ರಂದು ರಾತ್ರಿ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ, ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನವನ್ನು ( ಮೊಪೆಡ್) ನಿಲ್ಲಿಸಿ ಔಷಧಿ ಕೊಳ್ಳಲು ಮೆಡಿಕಲ್ ಶಾಪಿಗೆ ಹೋಗುತ್ತಾನೆ. ಆದರೆ, ಈ ಸಂದರ್ಭದಲ್ಲಿ ಆತ ಮೊಪೆಡ್ ನಲ್ಲಿಯೇ ಕೀ ಬಿಟ್ಟು ಹೋಗಿರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಕಳ್ಳ ಮಾಲೀಕನ ಎದುರೇ ಬೈಕ್ ಸ್ಟಾರ್ಟ್ ಮಾಡಿ ಅಲ್ಲಿಂದ ಹೊರಟೇ ಬಿಡುತ್ತಾನೆ.

ಇದನ್ನೂ ಓದಿ- ದೇವರಗುಡ್ಡದ ಕಾರ್ಣಿಕ.. 'ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್'

ಬೈಕ್ ಮಾಲೀಕ ತಕ್ಷಣ ಕಳ್ಳನನ್ನು ಹಿಡಿಯಲು ಅವನ ಬೆನ್ನತ್ತಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಈ ರೀತಿಯಾಗಿ 5 ಮೀ. ಅಂತರದಲ್ಲಿ ಮಾಲೀಕ ಇದ್ದರೂ ಕತರ್ನಾಕ್ ಕಳ್ಳ ಬೈಕ್ ಎಗರಿಸಿ ಪರಾರಿ ಆಗಿದ್ದಾನೆ.  

ಇಲ್ಲಿದೆ ವಿಡಿಯೋ:-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More