Home> Bengaluru
Advertisement

ಪೂರಕ ಪರೀಕ್ಷೆಯಲ್ಲಿಯೂ ಫೇಲ್‌ ಆಗಿದ್ದಕ್ಕೆ ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿ..!

ಚಾರ್ಲ್ಸ್ ಆರು ತಿಂಗಳ ಹಿಂದೆ ನಡೆದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ನಂತರ ಮರು ಪರೀಕ್ಷೆ ಕಟ್ಟಿ ಎಕ್ಸಾಂ ಬರೆದಿದ್ದ, ಅದರಲ್ಲೂ ಅನುತ್ತೀರ್ಣನಾದ. ಈ ವೇಳೆ ಕಾಲೇಜಿನವರು ಮೃತ ಬಾಲಕನ ಫೋಷಕರಿಗೆ ಬೇರೆ ಕಾಲೇಜಿಗೆ ಸೇರಿಸುವಂತೆ ಹೇಳಿದ್ದರು ಎನ್ನಲಾಗಿದೆ.

ಪೂರಕ ಪರೀಕ್ಷೆಯಲ್ಲಿಯೂ ಫೇಲ್‌ ಆಗಿದ್ದಕ್ಕೆ ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿ..!

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೋರ್ವ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಯ್ಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಚಾರ್ಲ್ಸ್(18) ಮೃತ ವಿದ್ಯಾರ್ಥಿಯಾಗಿದ್ದು, ಚಾರ್ಲ್ಸ್ ಆರು ತಿಂಗಳ ಹಿಂದೆ ನಡೆದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ನಂತರ ಮರು ಪರೀಕ್ಷೆ ಕಟ್ಟಿ ಎಕ್ಸಾಂ ಬರೆದಿದ್ದ ಚಾರ್ಲ್ಸ್, ಅದರಲ್ಲೂ ಅನುತ್ತೀರ್ಣನಾದ. ಈ ವೇಳೆ ಕಾಲೇಜಿನವರು ಮೃತ ಬಾಲಕನ ಫೋಷಕರಿಗೆ ಬೇರೆ ಕಾಲೇಜಿಗೆ ಸೇರಿಸುವಂತೆ ಹೇಳಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕಂಡಕ್ಟರ್ ಆತ್ಮಹತ್ಯೆ ಕೇಸ್, ಸರ್ಕಾರದ ಮೇಲೆ ವಿಪಕ್ಷಗಳು ತೀವ್ರ ದಾಳಿ : ಸದನದಲ್ಲಿ ಜಟಾಪಟಿ

ಮೊದಲ ಬಾರಿ ಫೇಲಾಗಿದ್ದಾಗಿನಿಂದಲೂ ಮನನೊಂದಿದ್ದ ಚಾರ್ಲ್ಸ್, ಪುನಃ ಅನುತ್ತೀರ್ಣವಾದ ಹಿನ್ನೆಲೆ, ಖಿನ್ನತೆಗೊಳಗಾಗಿ, ಸಾಯಲು ನಿರ್ಧಾರ ಮಾಡಿದ್ದು, ಅದರಂತೆ ಜುಲೈ 5ರ ಮಧ್ಯರಾತ್ರಿ ಮನೆಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸದ್ಯ ಚಾರ್ಲ್ಸ್ ಮೃತದೇಹವನ್ನು ಸಿ.ವಿ.ರಾಮನ್ ಆಸ್ಪತ್ರೆಗೆ  ರವಾನಿಸಲಾಗಿದ್ದು, ನಗರದ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More