Home> Karnataka
Advertisement

Bengaluru Central Lok Sabha Result 2024: ಸತತ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸಿದ ಪಿ.ಸಿ.ಮೋಹನ್

Bangalore Central Lok Sabha Result 2024: 2008ರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೆಲವು ಕ್ಷೇತ್ರಗಳನ್ನು ವಿಭಜಿಸಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಸೃಷ್ಟಿ ಆಯಿತು. 2009ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ HT ಸಾಂಗ್ಲಿಯಾನ ಸೋಲುಂಡರು

Bengaluru Central Lok Sabha Result 2024: ಸತತ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸಿದ ಪಿ.ಸಿ.ಮೋಹನ್

Bengaluru Central Lok Sabha Result 2024: ನಾಡಿನ ಶಕ್ತಿಕೇಂದ್ರ ವಿಧಾನಸೌಧ ಸುತ್ತ ವ್ಯಾಪಿಸಿಕೊಂಡಿರುವ ಬೆಂಗಳೂರು ಕೇಂದ್ರ ಲೋಕಸಭಾ ಅಧಿಪತಿ ಯಾರು ಎಂಬ ಕುತೂಹಲ ಹೆಚ್ಚಾಗಿದೆ. ರಾಜಕೀಯ ವಿಶ್ಲೇಷಕರ ಲೆಕ್ಕಚಾರವೇ ತಲೆ ಕೆಳಗೆ ಮಾಡುವಂತ ಫಲಿತಾಂಶ ನೀಡುವ ಅನೇಕ ಕ್ಷೇತ್ರಗಳಿವೆ. ಅಂತಹ ಕ್ಷೇತ್ರಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವಂತ ಕ್ಷೇತ್ರವೇ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಜಾತಿ, ಧರ್ಮ, ಭಾಷೆ ಎಲ್ಲವೂ ಮೀರಿ ಫಲಿತಾಂಶ ನೀಡುತ್ತಾ ಬಂದಿದೆ..ಈ ಬಾರಿಯೂ ಅಂತಹ ಕೌತುಕ ಬೆಂಗಳೂರು ಕೇಂದ್ರ ಕ್ಷೇತ್ರ ಕಾಪಾಡಿಕೊಂಡಿದೆ. ಬಿಜೆಪಿ ಹಾಲಿ ಸಂಸದ ಪಿಸಿ ಮೋಹನ ಮತ್ತೊಮ್ಮೆ ಜಯ ದಾಖಲಿಸಲು ಕಸರತ್ತು ಆರಂಭಿಸಿದ್ರೆ, ಇತ್ತ ಕಾಂಗ್ರೆಸ್ ಮನ್ಸೂರ್ ಖಾನ್ ಅವರನ್ನ ಸ್ಪರ್ದಿಯಾಗಿ ಕಣದಲ್ಲಿ ಇಳಿಸಿದೆ, ಹಾಗಾದರೆ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ಪರಿಚಯ ಇಲ್ಲಿದೆ.

2008ರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೆಲವು ಕ್ಷೇತ್ರಗಳನ್ನು ವಿಭಜಿಸಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಸೃಷ್ಟಿ ಆಯಿತು. 2009ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ HT ಸಾಂಗ್ಲಿಯಾನ ಸೋಲುಂಡರು. ಆದ್ರೆ, ಕೇಸರಿ ಬ್ರಿಗೇಡ್‌ ಅಭ್ಯರ್ಥಿ ಪಿಸಿ ಮೋಹನ್‌ ಗೆಲುವಿನ ನಗೆ ಬೀರಿದ್ದರು. ಅಂದಿನಿಂದ ಸತತ ಮೂರು ಬಾರಿ ಉದ್ಯಮಿ ಕಮ್‌ ರಾಜಕಾರಣಿ ಗೆಲುವಿನ ಖುಷಿಯಲ್ಲೇ ಇದ್ದಾರೆ. ಒಂಬತ್ತು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ  ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಮತ್ತು ಬಿಜೆಪಿ 3 ರಲ್ಲಿ ಗೆಲುವು ಸಾಧಿಸಿದೆ. ಅಂದರೆ ಈ ಹಿಂದಿನಂತೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಸರ್ವಜ್ಞನಗರ, ಗಾಂಧಿನಗರ, ಚಾಮರಾಜಪೇಟೆ, ಶಿವಾಜಿನಗರ, ಶಾಂತಿನಗರ, ರಾಜಾಜಿನಗರ, ಸಿ.ವಿ.ರಾಮನ್ ನಗರ ಹಾಗೂ ಮಹದೇವಪುರ ವಿಧಾನಸಭೆ ಕ್ಷೇತ್ರಗಳು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 

ಬೆಂಗಳೂರು ಕೇಂದ್ರ ಕ್ಷೇತ್ರ ಪರಿಚಯ:

2023ರ ಅಸೆಂಬ್ಲಿ ಚುನಾವಣೆ

1. ಸರ್ವಜ್ಞ ನಗರ : ಕೆ.ಜೆ.ಜಾರ್ಜ್-ಕಾಂಗ್ರೆಸ್
 (ಬಿಜೆಪಿ ಅಭ್ಯರ್ಥಿ ವಿರುದ್ಧ 60,000 ಮತಗಳ ಗೆಲುವು)
2. ಗಾಂಧಿನಗರ : ದಿನೇಶ್ ಗುಂಡೂರಾವ್-ಕಾಂಗ್ರೆಸ್
  (ಬಿಜೆಪಿ ಅಭ್ಯರ್ಥಿ ವಿರುದ್ಧ ಕೇವಲ 105 ಮತಗಳ ಗೆಲುವು)
3. ಚಾಮರಾಜಪೇಟೆ : ಜಮೀರ್ ಅಹಮದ್ ಖಾನ್-ಕಾಂಗ್ರೆಸ್
  (ಬಿಜೆಪಿ ಅಭ್ಯರ್ಥಿ ವಿರುದ್ಧ54,000 ಮತಗಳ ಗೆಲುವು)
4. ಶಿವಾಜಿನಗರ : ರಿಜ್ವಾನ್ ಅರ್ಷದ್-ಕಾಂಗ್ರೆಸ್
   (ಬಿಜೆಪಿ ಅಭ್ಯರ್ಥಿ ವಿರುದ್ಧ 23,194 ಮತಗಳ ಗೆಲುವು)
5. ಶಾಂತಿನಗರ : ಎನ್.ಎ.ಹ್ಯಾರಿಸ್-ಕಾಂಗ್ರೆಸ್
  (ಬಿಜೆಪಿ ಅಭ್ಯರ್ಥಿ ವಿರುದ್ಧ 7125 ಮತಗಳ ಗೆಲುವು) 
6. ರಾಜಾಜಿನಗರ : ಸುರೇಶ್‌ ಕುಮಾರ್‌-ಬಿಜೆಪಿ 
 (ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 8060 ಮತಗಳ ಗೆಲುವು)
7. ಸಿ.ವಿ.ರಾಮನ್‌ನಗರ : ರಘು-ಬಿಜೆಪಿ
  (ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 16,395 ಮತಗಳ ಜಯ)
8. ಮಹದೇವಪುರ : ಮಂಜುಳ ಲಿಂಬಾವಳಿ-ಬಿಜೆಪಿ
 (ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 44,508 ಮತಗಳ ಜಯ)

ನಿರ್ಣಾಯಕ ಸಾಮಾಜಿಕ ಅಂಶಗಳು

ಮತದಾರನಿಗೆ ಕನೆಕ್ಟಿಂಗ್‌ ವಿಷಯ
- ಐಟಿ ಬಿಟಿ, ಬಹುರಾಷ್ಟ್ರೀಯ ಸಂಸ್ಥೆಗಳು ಹೆಚ್ಚಾಗಿವೆ
- ಗಾರ್ಮೆಂಟ್ಸ್, ಗುಡಿ ಕೈಗಾರಿಕೆ, ಅರೆ ಕೈಗಾರಿಕೆಗಳ ಪ್ರದೇಶ 
- ಕುಡಿಯುವ ನೀರು, ಸ್ವಚ್ಛತೆ, ಒಳಚರಂಡಿ ಸೌಕರ್ಯ ಕಲ್ಪಿಸಿಲ್ಲ
- ನೈರ್ಮಲ್ಯ, ಆರೋಗ್ಯ ಕಾಪಾಡುವುದೇ ಬಹುದೊಡ್ಡ ಸಮಸ್ಯೆ 
- ಶ್ರೀಮಂತ, ಬಡ-ಮಧ್ಯಮ ಮತ್ತು ಕಾರ್ಮಿಕರು ಹೆಚ್ಚು ವಾಸ
- ಬಡ-ಮಧ್ಯಮ ಕಾರ್ಮಿಕರು ಉದ್ಯೋಗಕ್ಕಾಗಿ ವಲಸಿಗರೇ ಹೆಚ್ಚು
- ಉತ್ತರ ಕರ್ನಾಟಕ, ತಮಿಳುನಾಡು  ಕಟ್ಟಡ ಕಾರ್ಮಿಕರು ವಾಸ
- ಸಂಚಾರ ದಟ್ಟಣೆ ಮುಕ್ತ ರಸ್ತೆಗಳಿಲ್ಲ, ಹೆಚ್ಚು ದಟ್ಟಣೆಯ ರಸ್ತೆಗಳು
- ಮೆಟ್ರೋ ರೈಲಿನ ಸಂಪರ್ಕ, ಮೂಲಸೌಕರ್ಯಕ್ಕೆ ಆದ್ಯತೆ ಬೇಕಿದೆ
- ಹೊಸ ಸ್ಲಂಗಳ ನಿರ್ಮಾಣ, ಕೊಳಚೆ ಪ್ರದೇಶ ಅಭಿವೃದ್ಧಿ ಮರೀಚಿಕೆ
- ಅಪಾರ್ಟಮೆಂಟ್, ವಸತಿ ಸೌಲಭ್ಯಕ್ಕೆ ಹೆಚ್ಚಿನ ಭೂಪ್ರದೇಶ ಬಳಕೆ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಒಟ್ಟು 23,89,761 ಮತದಾರರನ್ನು ಹೊಂದಿದೆ. ಅವುಗಳಲ್ಲಿ ಪುರುಷ ಮತದಾರರು 12,34,786, ಮಹಿಳಾ ಮತದಾರರು 11,54,511 ಮತ್ತು ಇತರರು 464 ಇದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಮರು ಶೇ.17.5, ಎಸ್ ಸಿ ಮತ್ತು ಎಸ್ ಟಿ ಶೇ.18 ಮತ್ತು ಕ್ರಿಶ್ಚಿಯನ್ನರು ಶೇ.4.4ರಷ್ಟಿದ್ದಾರೆ. ಕ್ಷೇತ್ರದಲ್ಲಿ ಸುಮಾರು 5 ಲಕ್ಷ ತಮಿಳು ಭಾಷಿಕರಿದ್ದಾರೆ. ಸುಮಾರು 4 ಲಕ್ಷ ಮುಸ್ಲಿಂ ಸಮುದಾಯ ಹಾಗೂ ಸರಿಸುಮಾರು 2 ಲಕ್ಷ ಕ್ರಿಷ್ಚಿಯನ್ ಸಮುದಾಯದವರು ಇದ್ದಾರೆ. ಅದರ ಜೊತೆಗೆ ಮಾರವಾಡಿಗಳು ಹಾಗೂ ಗುಜರಾತಿ ಸಮುದಾಯದವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಶೇ.3.95%ರಷ್ಟು ಗ್ರಾಮೀಣ ಮತ್ತು ಶೇ.96.05% ರಷ್ಟು ನಗರ ಜನಸಂಖ್ಯೆಯಿದೆ. ಅಲ್ಪಸಂಖ್ಯಾತ ಮತದಾರರ ಪ್ರಾಬಲ್ಯವಿದೆ. ಜತೆಗೆ ಭಾಷಾ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. 6 ಲಕ್ಷ ತಮಿಳು ಜನರು , 5 ಲಕ್ಷ ಮುಸ್ಲಿಮರು ಮತ್ತು ಸುಮಾರು 2 ಲಕ್ಷ ಕ್ರೈಸ್ತರು ಇದ್ದಾರೆ. ಬಲಿಜಿಗ, ಗೊಲ್ಲ, ಕುರುಬ, ತಿಗಳ, ವಿಶ್ವಕರ್ಮ, ಮಡಿವಾಳ, ಕಮ್ಮ ಇತ್ಯಾದಿ ಹಿಂದುಳಿದ ವರ್ಗದವರು ಸುಮಾರು 6 ಲಕ್ಷ ಜನರಿದ್ದಾರೆ. ವಿಶೇಷವಾಗಿ ಚಿಕ್ಕಪೇಟೆ ಮತ್ತು ಗಾಂಧಿನಗರ ಉಪನಗರಗಳ ಸುತ್ತಲೂ. ಶಿವಾಜಿನಗರ , ಹಲಸೂರು , ಗಾಂಧಿನಗರ, ಶೇಷಾದ್ರಿಪುರಂನ ಉಪನಗರಗಳ ಸುತ್ತ ತಮಿಳು ಜನಸಂಖ್ಯೆ ಕೇಂದ್ರೀಕೃತವಾಗಿದೆ. ಇವು ಗೆಲ್ಲುವ ಅಭ್ಯರ್ಥಿಗೆ ನಿರ್ಣಾಯಕ ಅಂಶವಾಗಿದೆ.

ಮತದಾರರ ಸಂಖ್ಯೆ
* ಪುರುಷ : 12,34,786
* ಮಹಿಳೆಯರು : 11,54,511
* ಇತರೆ : 464
*ಒಟ್ಟು ಮತಗಳು : 23,89,761

ಜಾತಿವಾರು ಲೆಕ್ಕಚಾರ 
* ಮುಸ್ಲಿಂ : 5 ಲಕ್ಷ
* ದಲಿತರು : 4.50 ಲಕ್ಷ
* ತಮಿಳರು : 5 ಲಕ್ಷ
* ಕ್ರಿಶ್ಚಿಯನ್ : 2 ಲಕ್ಷ
* ಹಿಂದುಳಿದ ವರ್ಗ : 6 ಲಕ್ಷ

ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ.ಮೋಹನ್ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ ನಿಂದ ಹೊಸ ಮುಖ ಮನ್ಸೂರ್ ಅಲಿ ಖಾನ್ ರನ್ನು ಕಣಕ್ಕಿಳಿಸಲಾಗಿದೆ. ಕ್ಷೇತ್ರ ಮೊದಲಿನಿಂದಲೂ ಬಿಜೆಪಿಯ ಭದ್ರಕೋಟೆಯಾಗಿದೆ. 2009ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಎಚ್. ಟಿ ಸಾಂಗ್ಲಿಯಾನ ವಿರುದ್ದ ಬಿಜೆಪಿ ಪಿ.ಸಿ.ಮೋಹನ್ 35 ಸಾವಿರ ಮತಗಳ ಅಂತರದಿಂದ ಜಯ ದಾಖಲಿಸಿದ್ದರು. 2014 ಮತ್ತು 2019 ರ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ವಿರುದ್ದ ಪಿ.ಸಿ.ಮೋಹನ್‌ ಜಯಗಳಿಸಿದ್ದರು. ಸದ್ಯ ಮತ್ತೊಮ್ಮೆ ಜಯ ದಾಖಲಿಸುವ ನಿರೀಕ್ಷೆಯಲ್ಲಿ ಪಿ.ಸಿ. ಮೋಹನ್ ಇದ್ದಾರೆ.‌ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸ ಹಾಗೂ ಮೋದಿ ಶಕ್ತಿಯೊಂದಿಗೆ ನಾಲ್ಕನೇ ಬಾರಿ ಗೆಲ್ಲಲು ಮುಂದಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ 70,968 ಮತಗಳ ಗೆಲುವಿನ ಅಂತರದಿಂದ ಗೆದ್ದಿದ್ದರು. ಒಟ್ಟು 6,02,853 ಮತಗಳನ್ನು ಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ 5,31,885 ಮತಗಳನ್ನು ಪಡೆದು ಸೋತಿದ್ದರು. ಆದರೆ ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಪಿ.ಸಿ.ಮೋಹನ್ ಗೆಲುವಿನ ಅಂತರ ಕಡಿಮೆಯಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಗ್ಯಾರಂಟಿ ಬಲ ಹಾಗೂ ಸಂಸದರ ವಿರುದ್ಧದ ವಿರೋಧಿ ಅಲೆ ಬಳಸಿ ಈ ಬಾರಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಮುಂದಾಗಿದೆ.

ಚುನಾವಣಾ ಹಿನ್ನೋಟ  

2014ರ ಚುನಾವಣೆ  
* ಪಿಸಿ ಮೋಹನ್‌, ಬಿಜೆಪಿ-ಗೆಲುವು
* ಪಡೆದ ಮತಗಳು 557,130 (ಶೇ.51.85)
* ರಿಜ್ವಾನ್‌ ಅರ್ಷದ್‌, ಕಾಂಗ್ರೆಸ್‌-ಸೋಲು
* ಪಡೆದ ಮತಗಳು 419,630 (ಶೇ.39.05)
* ಬಾಲಕೃಷ್ಣ, ಆಪ್‌-ಸೋಲು -39,869
* ಗೆಲುವಿನ ಅಂತರ 137,500    (ಶೇ.12.80)

ಚುನಾವಣಾ ಹಿನ್ನೋಟ

2019ರ ಚುನಾವಣೆ 
* ಪಿಸಿ ಮೋಹನ್‌, ಬಿಜೆಪಿ-ಗೆಲುವು
* ಪಡೆದ ಮತಗಳು 602,853    (ಶೇ.50.35)
* ರಿಜ್ವಾನ್‌ ಅರ್ಷದ್, ಕಾಂಗ್ರೆಸ್‌-ಸೋಲು
* ಪಡೆದ ಮತಗಳು 5,31,885    (ಶೇ.44.43)    
* ನಟ ಪ್ರಕಾಶ ರಾಜ್‌, ಪಕ್ಷೇತರ -28,906
* ಗೆಲುವಿನ ಅಂತರ 70,968    (ಶೇ.5.92)

ಚುನಾವಣಾ ಮುನ್ನೋಟ

2024ರ ಚುನಾವಣೆ  
* ಪಿಸಿ ಮೋಹನ್‌: ಬಿಜೆಪಿ - 3 ಬಾರಿ ಗೆಲುವು
* ಮನ್ಸೂರ್‌ ಅಲಿಖಾನ್‌: ಕಾಂಗ್ರೆಸ್ -ಹೊಸಮುಖ

ಫಲಿತಾಂಶ: ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಸತತ ನಾಲ್ಕನೇ ಬಾರಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Read More