Home> Karnataka
Advertisement

ಇವರೇ ವಿರೋಧ ಪಕ್ಷದ ನಾಯಕರಾಗ್ತಾರಂತೆ; ಯಶ್ವಂತ ಗುರೂಜಿಯ ಸ್ಫೋಟಕ ಭವಿಷ್ಯ!

ಶಕ್ತಿಗಿಂತ ಗ್ರಹಗತಿಗಳ ಬಲಾಬಲಗಳ ಆಧಾರದ ಮೇಲೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಆ ಯೋಗ ಇದೆ ಎಂದು ತುಮಕೂರಿನ ನೊಣವಿನಕೆರೆಯಲ್ಲಿ ಯಶ್ವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಇವರೇ ವಿರೋಧ ಪಕ್ಷದ ನಾಯಕರಾಗ್ತಾರಂತೆ; ಯಶ್ವಂತ ಗುರೂಜಿಯ ಸ್ಫೋಟಕ ಭವಿಷ್ಯ!

ತುಮಕೂರು: ವಿಜಯಪುರ ನಗರದ ಶಾಸಕ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ ಆಗುತ್ತಾರೆಂದು ನೊಣವಿನಕೆರೆಯ ಕಾಲಜ್ಞಾನಿ ಡಾ.ಯಶ್ವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಗ್ರಹ-ಗತಿಗಳ ಬಲಾಬಲಗಳನ್ನು ತಾಳೆ ಹಾಕಿ ನೋಡಿದ್ರೆ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ ಆಗುತ್ತಾರೆ. ಯತ್ನಾಳ್‌ಗೆ ವಿರೋಧ ಪಕ್ಷದ ನಾಯಕನ ಸ್ಥಾನ‌ವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

2 ಪೂರ್ಣಿಮೆ ಹಾಗೂ 3 ಅಮಾವಾಸ್ಯೆವರೆಗೂ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಲ್ಲವೆಂದು ಈ ಹಿಂದೆಯೇ ನಾನು ಹೇಳಿದ್ದೆ. ಈಗ ಅದು ನಿಜ ಆಗಿದೆ. ಇದೀಗ ಆ ಯೋಗ ಕೂಡಿ ಬರ್ತಿದೆ. ಮುಂಬರುವ ಅಮಾವಾಸ್ಯೆ ಬಳಿಕ ತತಕ್ಷಣವೇ ಯತ್ನಾಳ್ ವಿರೋಧ ಪಕ್ಷದ ನಾಯಕ ಆಗುತ್ತಾರೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಗೆಲುವು ಬಿಜೆಪಿಯ ಭಯಕ್ಕೆ ಕಾರಣ – ಮುಖ್ಯಮಂತ್ರಿ ಸಿದ್ದರಾಮಯ್ಯ

ವಿರೋಧ ಪಕ್ಷದ ನಾಯಕ ಯಾರು ಆಗ್ತಾರೆ ಅಂತಾ ಕೆಲವರು ನನ್ನನ್ನು ಕೇಳಿದ್ರು. ಎಲ್ಲಾ ನಾಯಕರ ಜಾತಕಗಳ ಬಲಾಬಲಗಳನ್ನು ತಾಳೆ ಹಾಕಿ, ವಿಮರ್ಶೆ ಮಾಡಿ ನೋಡಲಾಗಿದೆ. ಹಿಂದೂ ಹುಲಿ ಅಂತಾ ಏನ್ ಕರಿತಾರೆ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ ಆಗ್ತಾರೆ.

ಕೆಲ ರಾಜಕಾರಣಿಗಳು ನನಗೆ ಸವಾಲು ಹಾಕಿದ್ದರು. ಅಧಿವೇಶನ ನಡೆಯುತ್ತಿದೆ, ಶೀಘ್ರವೇ ವಿಪಕ್ಷದ ನಾಯಕನ ಆಯ್ಕೆ ನಡೆಯುತ್ತೆ ಎಂದು. ಅವರು ಸವಾಲು ಹಾಕಿದಾಗ ಕೂಡ ನಾನು ಯಾವುದೇ ಕಾರಣಕ್ಕೂ 2 ಪೂರ್ಣಿಮೆ ಹಾಗೂ 3 ಅಮಾವಾಸ್ಯೆ ಮುಗಿಯೋವರೆಗೂ ಅದು ಅಸಾಧ್ಯವೆಂದು ಹೇಳಿದ್ದೆ.‌ ಇದು ಸತ್ಯ ಕೂಡ. ಇದು ನನ್ನ ಹೇಳಿಕೆ ಅಲ್ಲ. ಸ್ವತಃ ಕಾಲಜ್ಞಾನ ಭವಿಷ್ಯವಾಣಿಯಂತೆ ಹೇಳ್ತಿದ್ದೇನೆ. ಖಂಡಿತವಾಗಿಯೂ ಯತ್ನಾಳ್‌ಗೆ ವಿರೋಧ ಪಕ್ಷದ ನಾಯಕನ ಸ್ಥಾನ ಪ್ರಾಪ್ತಿ ಆಗುತ್ತದೆ ಎಂದು ಹೇಳಿದರು.

ಶಕ್ತಿಗಿಂತ ಗ್ರಹಗತಿಗಳ ಬಲಾಬಲಗಳ ಆಧಾರದ ಮೇಲೆ ಯತ್ನಾಳ್‌ಗೆ ಆ ಯೋಗ ಇದೆ ಎಂದು ತುಮಕೂರಿನ ನೊಣವಿನಕೆರೆಯಲ್ಲಿ ಯಶ್ವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಇನ್ನು ಮುಂದೆ ಅಂಗನವಾಡಿಗಳಲ್ಲಿ ಪಾಮೊಲಿನ್‌ ಬದಲಿಗೆ ಸೂರ್ಯಕಾಂತಿ ಎಣ್ಣೆ ಬಳಸಲು ಸರ್ಕಾರ ನಿರ್ಧಾರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More