Home> Karnataka
Advertisement

ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಮರಿಂದ ಅನ್ನಪ್ರಸಾದ ವ್ಯವಸ್ಥೆ

ರಾಮದುರ್ಗ ಪಟ್ಟಣದ ಹೊರವಲಯದ ಹಲಗತ್ತಿ ಬಾಯಪಾಸ್ ರಸ್ತೆ ಬದಿಯಲ್ಲಿದ್ದ ತೋಟದಲ್ಲಿ ರಾಮದುರ್ಗ ಜಮೇತೆ ಉಲ್ಮಾ ಸಂಘಟನೆ ಮುಸ್ಲಿಂ ಸಮುದಾಯದವರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದಾರೆ.

ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಮರಿಂದ ಅನ್ನಪ್ರಸಾದ ವ್ಯವಸ್ಥೆ

ರಾಮದುರ್ಗ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಮರಿಂದ ಅನ್ನಪ್ರಸಾದ ವ್ಯವಸ್ಥೆ ಮಾಡಿ, ಭಾವೈಕ್ಯತೆ  ಮೆರೆಯಲಾಗಿದೆ. 

ರಾಮದುರ್ಗ ಪಟ್ಟಣದ ಹೊರವಲಯದ ಹಲಗತ್ತಿ ಬಾಯಪಾಸ್ ರಸ್ತೆ ಬದಿಯಲ್ಲಿದ್ದ ತೋಟದಲ್ಲಿ ರಾಮದುರ್ಗ ಜಮೇತೆ ಉಲ್ಮಾ ಸಂಘಟನೆ ಮುಸ್ಲಿಂ ಸಮುದಾಯದವರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ- ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ಹೊಗುವ ಮಾರ್ಗಮಧ್ಯ ತಡರಾತ್ರಿ ಭೀಕರ ಅಪಘಾತ ಸ್ಥಳದಲ್ಲೇ 6 ಸಾವು

ಈ ವೇಳೆ  ಜಮಿಯಾತ ಏ ಉಲ್ಮಾ ರಾಮದುರ್ಗ ಕಾರ್ಯದರ್ಶಿ ಮುಫ್ತಿ ಹುಸೇನ್ ಪಟೇಲ ಅವರು ಮಾತನಾಡಿ, ಇಡೀ ಜಗತ್ತಿನ ಸೃಷ್ಟಿಕರ್ತ ಒಬ್ಬನೇ, ನಮ್ಮ ನಿಮ್ಮಲಾರ ಜಗದ ಒಡೆಯಾ ಒಬ್ಬನೇ. ಆದರೆ ನಾಮ ಹಲವು ನಮ್ಮಲ್ಲಿ ಉಡುಪು ಆಹಾರ ಸೇವನೆ ಬೇರೆ ಇರಬಹುದು. ಈ ಜಗತ್ತಿನಲ್ಲಿ ಎರಡು ಜಾತಿಗಳು ಇದ್ದಾವೆ ಅದು ಒಂದು ಹೆಣ್ಣು ಒಂದು ಗಂಡು. ಇದರಲ್ಲಿ ಪಂಗಡಗಳು ಬೇರೆ ಬೇರೆ ಇದ್ದಾವೆ. ಸೃಷ್ಟಿಕರ್ತನಲ್ಲಿ ಆತ್ಮಿಯವಾಗಿ ಯಾರು ಇರುತ್ತಾನೆ ಅಂದರೆ ಅವನ ತೋರಿದ ಮಾರ್ಗದಲ್ಲಿ ಸೃಷ್ಟಿಕರ್ತನ ಆರಾಧನೆ ಮಾಡುವನೇ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು  ಹೇಳಿದರು.

ಇದನ್ನೂ ಓದಿ- Covid-19 New Variant : ಕೋವಿಡ್ ಹಳೆ ರೂಪಾಂತರಿ ತಳಿಗಳಿಗಿಂತ ತುಂಬಾ ಡೇಂಜರ್ XBB 1.5 ತಳಿ!

ಬಳಿಕ ಮಾತನಾಡಿದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಾದ ರಾಘವೇಂದ್ರಸ್ವಾಮಿ ದೊಡ್ಡಮನಿ ಅವರು, ಇಸ್ಲಾಂ ಧರ್ಮದಲ್ಲಿ ನೀವು ಒಂದು ದಿನದಲ್ಲಿ 5 ಹೊತ್ತು ನಮಾಜ್ ಮಾಡುತ್ತಿರುವದು ನಾವು ಚಿಕ್ಕಂದಿನಿಂದ ನೋಡಿಕೊಂಡು ಬಂದಿದ್ದೇವೆ. ರಾಮದುರ್ಗದಲ್ಲಿ ನಮ್ಮ ನಿಮ್ಮ ಬಾಂಧವ್ಯ ಬಹಳ ದಿನದಿಂದ ಉತ್ತಮವಾಗಿದೆ. ಇಂದು ಮಾಡಿದಂತೆ ಕಾರ್ಯಕ್ರಮ ಪ್ರತಿಯೊಂದು ವರ್ಷ ಮಾಡಿ. ಈ ಬಾಂಧವ್ಯ, ಪ್ರೀತಿ, ವಿಶ್ವಾಸ ಹೇಗೆ ಇರಲಿ ಎಂದು ಆ ಭಗವಂತ ಹತ್ತಿರ ಕೇಳಿಕೊಳ್ಳೋವೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More