Home> Karnataka
Advertisement

ಜಿಲ್ಲೆಯೊಂದರಲ್ಲಿ ಒಂದೇ ವರ್ಷದಲ್ಲಿ ಮದುವೆಗೂ ಮುನ್ನವೇ 326 ಅಪ್ರಾಪ್ತೆಯರು ಪ್ರೆಗ್ನೆಂಟ್: ಆಘಾತಕಾರಿ ಅಂಕಿ-ಅಂಶ ಬೆಳಕಿಗೆ

Shocking News: ಒಂದೇ ವರ್ಷದಲ್ಲಿ ತುಮಕೂರು ಜಿಲ್ಲೆಯಲ್ಲಿ ಬರೊಬ್ಬರಿ 326 ಬಾಲೆಯರು ಮದುವೆಗೂ ಮುನ್ನವೇ ಗರ್ಭಿಣಿಯರಾಗಿದ್ದಾರೆ. ಅದರಲ್ಲಿ ನಾಲ್ವರು ಬಾಲೆಯರು 11 ವರ್ಷದವರು ಅನ್ನೋದು ಮತ್ತಷ್ಟು ಆಘಾತಕಾರಿ ಅಂಶ.

ಜಿಲ್ಲೆಯೊಂದರಲ್ಲಿ ಒಂದೇ ವರ್ಷದಲ್ಲಿ ಮದುವೆಗೂ ಮುನ್ನವೇ 326 ಅಪ್ರಾಪ್ತೆಯರು ಪ್ರೆಗ್ನೆಂಟ್: ಆಘಾತಕಾರಿ ಅಂಕಿ-ಅಂಶ ಬೆಳಕಿಗೆ

Pregnant Before Marriage: ಬೆಂಗಳೂರಿಗೆ ಪರ್ಯಾಯ ನಗರವಾಗಿ ಹೊರಹೊಮ್ಮುತಿದೆ ಕಲ್ಪತರು ನಾಡು ತುಮಕೂರು (Tumkur) ಜಿಲ್ಲೆಯಿಂದ ಆಘಾತಕಾರಿ ಅಂಶವೊಂದು ಹೊರ ಬಿದ್ದಿದ್ದು, ಒಂದೇ ವರ್ಷದಲ್ಲಿ ಬರೊಬ್ಬರಿ 326 ಬಾಲೆಯರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕಿಂತಲೂ ಆಘಾತಕಾರಿ ಸಂಗತಿ ಎಂದರೆ ಇವರಲ್ಲಿ ನಾಲ್ವರ್ ಬಾಲಕಿಯರು 11 ವರ್ಷಕ್ಕಿಂತಲೂ ಚಿಕ್ಕವರು ಎಂಬ ವಿಲಕ್ಷಣ ಅಂಶ ಸಮಾಜವನ್ನು ಆತಂಕಕ್ಕೆ ಹೂಡುವಂತೆ ಮಾಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ಈ ಅಂಕಿ-ಅಂಶವನ್ನು ಬಹಿರಂಗೊಳಿಸಿದೆ. 

ಹೌದು, ಕರ್ನಾಟಕದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಪರ್ಯಾಯವಾಗಿ ತಲೆ ಎತ್ತುತ್ತಿರುವ ತುಮಕೂರು ಜಿಲ್ಲೆಯಲ್ಲಿ ನೈತಿಕ ಮೌಲ್ಯಗಳೂ ಕುಸಿಯುತ್ತಿದೆ ಅನ್ನೋದಕ್ಕೆ ಈ ವರದಿ ಸಾಕ್ಷಿಯಾಗಿದೆ. 

ಇಂತಹ ಅನಾಹುತಕ್ಕೆ ಕಾರಣವಾಗುತ್ತಿರುವುದೇನು? 
ಜನರಲ್ಲಿ  ಶಿಕ್ಷಣದ ಕೊರತೆ, ಮೊಬೈಲ್ ಬಳಕೆ, ತಂದೆ ತಾಯಿಗಳ ನಿರ್ಲಕ್ಷ್ಯದಿಂದ ಮಕ್ಕಳು ತಪ್ಪು ದಾರಿ ತುಳಿದಿದ್ದು ಚಿಕ್ಕವಯಸ್ಸಿನಲ್ಲೇ ಅನೈತಿಕವಾಗಿ ಗರ್ಭಧರಿಸುತಿದ್ದಾರೆ. ಇದರಲ್ಲಿ ಅತ್ಯಾಚಾರದಿಂದಲೂ ಗರ್ಭಧರಿಸಿದ ಪ್ರಕರಣಗಳು ಕೂಡ ಇವೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual Assault) ಎಸಗಿದ ಆರೋಪದಡಿ 125 ಮಂದಿ ಜೈಲು ಪಾಲಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ- ತಾಯಿಯ ಈ ಒಂದು ಅಭ್ಯಾಸವು ಮಗುವಿನ ಜೀವನವನ್ನು ಹಾಳುಮಾಡುತ್ತದೆ..! ಆಘಾತಕಾರಿ ಅಂಶ ತೆರೆದಿಟ್ಟ ಹೊಸ ಸಂಶೋಧನೆ

ಇನ್ನು ಒಂದೆಡೆ ಬಾಲ್ಯ ವಿವಾಹ (Child Marriage), ಮತ್ತೊಂದೆಡೆ ಮದುವೆಗೂ ಮೊದಲು ಪ್ರೀತಿ ಪ್ರೇಮದ ಹೆಸರನಲ್ಲಿ ಲೈಂಗಿಕ ಸಾಂಗತ್ಯ, ಇವೆಲ್ಲವೂ ಹದಿ ಹರೆಯದ ಬಾಲೆಯರಲ್ಲಿ  ಗರ್ಭಧಾರಣೆಗೆ ಕಾರಣವಾಗಿದೆ. ಕೆಲವು ಪ್ರಕರಣಗಳಲ್ಲಿ ಅನೈತಿಕವಾಗಿ ಹುಟ್ಟಿದ ಮಗುವನ್ನು  ಮಾರಾಟ ಮಾಡಿ ಕರುಳ ಬಳ್ಳಿಯ ಸಂಬಂಧ ಕಡಿದುಕೊಂಡು ನಿರಾಳವಾಗಿ ಇದ್ದ ಪ್ರಕರಣವೂ ಬೆಳಕಿಗೆ ಬಂದಿದೆ. ಆದರೂ ಇವೆಲ್ಲವನ್ನೂ ಪೋಕ್ಸೋ ಪ್ರಕರಣ ಎಂದೇ ಪರಿಗಣಿಸಲಾಗುತ್ತಿದೆ. 

ಅಪ್ರಾಪ್ತ ಬಾಲಕಿಯನ್ನು (Minor Girl) ಮದುವೆಯಾಗಿ, ಲೈಂಗಿಕ ಸಂಬಂಧ ಇಟ್ಟುಕೊಂಡರೂ ಸಹ ಅದನ್ನು ಅತ್ಯಾಚಾರ ಪ್ರಕರಣವೆಂದೇ ಪರಿಗಣಿಸಲಾಗುತ್ತದೆ. ಪೋಕ್ಸೋ ಪ್ರಕರಣದಲ್ಲಿ ಜೈಲಿನಲ್ಲಿರುವ ಹೆಚ್ಚಿನ ಜನರಲ್ಲಿ ಸಂತ್ರಸ್ತ ಹೆಣ್ಣು ಮಕ್ಕಳ ತಂದೆ, ಸಹೋದರ, ಸಂಬಂಧಿಕರು, ಶಿಕ್ಷಕರು, ಸ್ವಾಮೀಜಿಗಳು ಇದ್ದಾರೆ. ಕೆಲವರು ಎರಡನೇ ಬಾರಿಗೆ  ಜೈಲು ಸೇರಿದ್ದಾರೆ. 

ಇದನ್ನೂ ಓದಿ- ಐವಿಎಫ್ ದಂಪತಿಗಳ ಪಯಣ: ವಿಜ್ಞಾನ ಹಾಗೂ ಮಾನವನ ಸ್ಪರ್ಶದಿಂದ ಜೀವನದಲ್ಲಿ ಪವಾಡ ಸೃಷ್ಟಿ!

ಒಟ್ಟಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfare) ಬಹಿರಂಗಪಡಿಸಿದ ಅಂಕಿ ಅಂಶ ನಿಜಕ್ಕೂ ನಾಗರಿಕರ ತಲೆ ತಗ್ಗಿಸುವಂತೆ ಮಾಡಿದೆ. ಇನ್ನೊಂದೆಡೆ ಹೆಣ್ಣುಮಕ್ಕಳ ಪೋಷಕರಲ್ಲಿ ಆತಂಕ ಹುಟ್ಟಿಸಿದೆ. ಏನೇ ಆಗ್ಲೀ ಪೋಷಕರು ಎಚ್ಚರಿಕೆ ವಹಿಸಿದರೆ ಇಂತಹ ಪ್ರಕರಣಗಳ ಪ್ರಮಾಣ ಕಡಿಮೆ ಮಾಡಲು ಸಾಧ್ಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More