Home> Karnataka
Advertisement

ಧಾರವಾಡಕ್ಕೆ ಮತ್ತೊಂದು ವಿವಿ

ವಿದ್ಯಾಕಾಶಿ ಧಾರವಾಡದಲ್ಲಿ ಮೂರು ವಿಶ್ವವಿದ್ಯಾಲಯಗಳಿವೆ. ಕವಿವಿ, ಕೃವಿವಿ ಕಾನೂನು ವಿವಿ ಇದರ ಜೊತೆಗೆ ಇದೀಗ ಮತ್ತೊಂದು ವಿವಿ ತಯಾರಿಗೆ ಸಿದ್ಧತೆಗಳು ನಡೆಯುತ್ತಿವೆ.  ವಿದ್ಯಾಕಾಶಿ ಎಂದೇ ಹೆಸರು ಪಡೆದ ಧಾರವಾಡಕ್ಕೀಗ‌ ಮತ್ತೊಂದು ವಿಶ್ವವಿದ್ಯಾಲಯ  ಧಾರವಾಡಕ್ಕೆ ಬರಲು ಭರ್ಜರಿ ಸಿದ್ಧತೆ ನಡೆದಿದ್ದು ಆದಷ್ಟು ಬೇಗೆ ಭೂಮಿ ಪೂಜೆ ನೆರವೇರಲಿದೆ.

ಧಾರವಾಡಕ್ಕೆ ಮತ್ತೊಂದು ವಿವಿ

ಧಾರವಾಡ:  ವಿದ್ಯಾಕಾಶಿ ಎಂದೇ ಹೆಸರು ಪಡೆದ ಧಾರವಾಡಕ್ಕೀಗ‌ ಮತ್ತೊಂದು ಹೆಮ್ಮೆ ಗರಿ ಬರಲಿದೆ.‌ ಈಗಾಗಲೇ ಧಾರವಾಡದಲ್ಲಿ ಕರ್ನಾಟಕ ವಿವಿ, ಕಾನೂನು ವಿವಿ, ಕೃಷಿ ವಿವಿ ಇವೆ.‌ ಇದರ ಜೊತೆಗೆ ಐಐಟಿ ಹಾಗೂ ಐಐಐಟಿ ಕೂಡಾ ಬಂದಿವೆ. ಈಗ ಫಾರೆನ್ಸಿಕ್ ಯುನಿವರ್ಸಿಟಿ ಕ್ಯಾಂಪಸ್ ಧಾರವಾಡದಲ್ಲಿ ಆರಂಭವಾಗಲಿದೆ. ಗುಜರಾತಿನಲ್ಲಿ ಫಾರೆನ್ಸಿಕ್ ಯುನಿವರ್ಸಿಟಿ ಇದೆ. ಇದರ ಕ್ಯಾಂಪಸ್ ಇದೇ ಮೊದಲು ಬಾರಿಗೆ ದಕ್ಷಿಣ ಭಾರತದಲ್ಲಿ ಆರಂಭ ಆಗುತ್ತಿದ್ದು ಅದು ಧಾರವಾಡದಲ್ಲಿ ಅನ್ನೋದು ಮತ್ತೊಂದು ವಿಶೇಷವಾಗಿದೆ.

ಇನ್ನು ಫಾರೆನ್ಸಿಕ್ ಕ್ಯಾಂಪಸ್ ಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕ ವಿವಿ ಕ್ಯಾಂಪಸ್ ನಲ್ಲಿ  800 ಎಕರೆ ವಿಸ್ತಾರವಾದ ಪ್ರದೇಶದಲ್ಲಿದೆ. ಹೀಗಾಗಿ  ಇದೇ ಕವಿವಿ ಕ್ಯಾಂಪಸ್ ಮಾಡಬೇಕೋ  ಅಥವಾ ಕೃಷಿ ವಿವಿಯಲ್ಲಿ ಮಾಡಬೇಕೋ ಅನೋದರ ಬಗ್ಗೆ ಚರ್ಚೆ ನಡೆದಿವೆ. ಅಲ್ಲದೇ ಇದೇ ಜನವರಿ 28ಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಧಾರವಾಡಕ್ಕೆ ಆಗಮಿಸಲಿದ್ದು, ಅವರ ಕೈಯಿಂದ ನೂತನವಾಗಿ ಆರಂಭವಾಗುತ್ತಿರುವ ಫಾರೆನ್ಸಿಕ್ ವಿವಿ ಕ್ಯಾಂಪಸ್ ಕಟ್ಟಡದ ಶಂಕು ಸ್ಥಾಪನೆ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಕವಿವಿ  ಕ್ಯಾಂಪಸ್ ನಲ್ಲೇ ಹೊಸದಾಗಿ ನಿರ್ಮಾಣ ಆಗುತ್ತಿರುವ ಫಾರೆನ್ಸಿಕ್ ವಿವಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಯತ್ನದಿಂದ ಧಾರವಾಡಕ್ಕೆ ಬಂದಿದೆ. ಸದ್ಯ ಇಡೀ ದೇಶದಲ್ಲಿ ಕೇವಲ 7 ವಿವಿಗಳಿದ್ದು, ಅದರ‌ ಸಾಲಿಗೆ ಧಾರವಾಡ ಕೂಡ ಸೇರ್ಪಡೆ ಆಗಲಿದ್ದು 8ನೇ ಕ್ಯಾಂಪಸ್ ಆಗಿ ಹೊರಹೊಮ್ಮಲಿದೆ. 

ಇದನ್ನೂ ಓದಿ- ಸಂಸದೆ ಸುಮಲತಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಜಗಳ..!

ಇನ್ನು ಈ ಫಾರೆನ್ಸಿಕ್ ವಿವಿ ಇಲ್ಲಿ ಬರುವುದರಿಂದ ನಮ್ಮ ರಾಜ್ಯಕ್ಕೆ ದೊಡ್ಡ ಲಾಭ ಆಗಲಿದೆ. ಅಪರಾಧ ಜಗತ್ತಿನ ಬಗ್ಗೆ ಮಾಹಿತಿ‌ ಕಲೆ‌ ಹಾಕಲು ಇದು ಸಹಾಯ ಆಗಲಿದೆ. ಪೂನಾ,‌ ತ್ರಿಪುರಾ, ಸೇರಿ ಹಲವು ಕಡೆ ಈ ಕ್ಯಾಂಪಸ್ ಗಳಿದ್ದು ಫಾರೆನ್ಸಿಕ್ ವಿವಿ ಧಾರವಾಡಕ್ಕೆ ಬಂದರೆ ಕ್ರೈಂ ಬೇಗ ಡಿಟೆಕ್ಟ್‌ ಮಾಡಲು ಸಹಾಯ ಆಗುತ್ತೆ. ನಮ್ಮ ರಾಜ್ಯದ ಯುವಕರಿಗೆ ಅಪರಾಧ ಪ್ರಕರಣಗಳನ್ನು ಹೇಗೆ ಬೆನ್ನತ್ತಬೇಕು ಎಂಬ ಬಗ್ಗೆ ಅಧ್ಯಯನ  ಮಾಡಲು ಸಹಾಯ ಆಗುತ್ತದೆ. ಪೊಲೀಸ್ ಇಲಾಖೆ,‌ ಕಾನೂನು ತಜ್ಞರಿಗೆ ಕ್ಯಾಂಪಸ್ ಹೆಚ್ಚು ಸಹಕಾರಿ ಆಗಲಿದ್ದು, ನಮ್ಮ ರಾಜ್ಯದ ಮನೋ ವಿಜ್ಞಾನ ಶಾಸ್ತ್ರ, ಅಪರಾಧ ಶಾಸ್ತ್ರ, ಬಯೋಟೆಕ್ನಾಲಜಿ, ಸೈಕಾಲಜಿ ಹಾಗೂ ಭೌತಶಾಸ್ತ್ರದ ವಿಭಾಗದ ವಿದ್ಯಾರ್ಥಿಗಳಿಗೆ ಇದು ಅನಕೂಲವಾಗಲಿದೆ. ಇನ್ನು ಎಲ್ಲಕ್ಕಿಂತ ಹೆಚ್ಚಾಗಿ ಸೈಬರ್ ಕ್ರೈಂಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಆಗಲಿದೆ. ಡಿಎನ್ಎ ಮಾಡಲು‌ ಕೂಡ ವಿವಿ ಸಹಾಯ ಮಾಡಲಿದೆ ಎಂದು ಹಿರಿಯ ಡಿಎನ್ ಎ ತಜ್ಞ ಹೇಳ್ತಾರೆ.

ಇದನ್ನೂ ಓದಿ- Vijayapura: ಶಾಲೆಗೆ ಕುಡಿದು ಟೈಟ್ ಆಗಿ ಬಂದ ಶಿಕ್ಷಕ..!

ಒಟ್ಟಿನಲ್ಲಿ ವಿದ್ಯಾಕಾಶಿ ಧಾರವಾಡ ನಗರಕ್ಕೆ ಈ ಕ್ಯಾಂಪಸ್ ಬರುವುದರಿಂದ ಧಾರವಾಡ ಹೆಸರು ಉತ್ತುಂಗಕ್ಕೆ ಏರಲಿದೆ. ಅಲ್ಲದೇ ನಮ್ಮ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೂ ಅಪರಾಧ ಜಗತ್ತಿನ ಅಧ್ಯಯನಕ್ಕೂ ಒಂದು ಒಳ್ಳೆಯ ವೇದಿಕೆ ಸಿಗುತ್ತದೆ. ಸದ್ಯ ಎರಡು ಕಡೆ ಕ್ಯಾಂಪಸ್ ಗಾಗಿ ಜಾಗ‌ ಹುಡುಕಾಟ ನಡೆದಿದ್ದು, ಎಲ್ಲಿ ಇದು ಫೈನಲ್ ಆಗುತ್ತೆ ಅನೋದು ಕಾಯ್ದು ನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More