Home> Karnataka
Advertisement

ಸಿದ್ದರಾಮಯ್ಯ ಅವರಿಗೆ ದಮ್ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ: ಅನಂತಕುಮಾರ್ ಹೆಗಡೆ

Anantkumar Hegde: ಸಿದ್ದರಾಮಯ್ಯನವರಿಗೆ ದಮ್ ಇದ್ರೆ ಹಿಂದೂ ರಾಷ್ಟ್ರ ಆಗುವುದನ್ನ ತಡೆಯಲಿ. ಹಿಜಾಬಿನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು. 

ಸಿದ್ದರಾಮಯ್ಯ ಅವರಿಗೆ ದಮ್ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ: ಅನಂತಕುಮಾರ್ ಹೆಗಡೆ

ಶಿರಸಿ: ಸಿದ್ದರಾಮಯ್ಯನವರಿಗೆ ದಮ್ ಇದ್ರೆ ಹಿಂದೂ ರಾಷ್ಟ್ರ ಆಗುವುದನ್ನ ತಡೆಯಲಿ. ಹಿಜಾಬಿನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ. ಸಿದ್ದರಾಮಯ್ಯನವರ ಸರ್ಕಾರ ಹುಚ್ಚು ಮಹಮದ್ ನ ಸರ್ಕಾರ ಎಂದು ಸಂಸದ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದರು.  

ಅಲ್ಪಸಂಖ್ಯಾತರ ವೋಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ. ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ. ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತಿದ್ದಾರೆ ಎಂದು ಹೇಳಿದರು. 

ಟಿಪ್ಪು ಈ ರಾಜ್ಯವನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ತೊಂದರೆಗೀಡು ಮಾಡಿದ ವ್ಯಕ್ತಿ. ಅವನ ಹೆಸರನ್ನೇ ತೆಗೆದುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತೆ. ಕಾಂಗ್ರೆಸ್‌ಗೆ ಮುಂದಿನ ದಿನ ಜನತೆ ಹೇಗೆ ಉತ್ತರ ಕೊಡುತ್ತಾರೆ ಎಂಬುದನ್ನು ಯೋಚನೆ ಮಾಡಬೇಕು ಎಂದರು. 

ಇದನ್ನೂ ಓದಿ : ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಬದ್ಧ: ಸಚಿವ. ಕೆ.ಹೆಚ್ ಮುನಿಯಪ್ಪ 

ಸಿದ್ದರಾಮಯ್ಯ ಯಾರು ಬೇಕಾದರೂ ಏನುಬೇಕಾದರೂ ಡ್ರೆಸ್ ಹಾಕಿಕೊಂಡು ಹೋಗಬಹುದು ಎಂಬ ಹೇಳಿಕೆ ಮುಂದಿನ ದಿನ ಆತಂಕಕಾರಿ ಬೆಳವಣಿಗೆಗೆ ಕಾರಣ ಆಗುತ್ತೆ. ನಮ್ಮವರು ಕೇಸರಿ ಶಾಲು ಹಾಕಿಕೊಂಡು ಹೋಗುತ್ತಾರೆ. ಅವರು ಹಿಜಾಬ್  ಹಾಕಿಕೊಂಡು ಹೋಗುತ್ತಾರೆ ಎಂದು ಹೇಳಿದರು. 

ಸರ್ಕಾರಕ್ಕೆ ಒಂದು ಚೌಕಟ್ಟಿನ ಕಲ್ಪನೆ ಸರರ್ಕಾಕ್ಕೆ ಇಲ್ಲ ಎಂದಾದರೇ ಸರ್ಕಾರ ಇದೆ ಎಂದು ಅನಿಸುವುದಿಲ್ಲ. ಸಿದ್ದರಾಮಯ್ಯನವರಿಗೆ ಧಮ್‌ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ. ಸಿದ್ದರಾಮಯ್ಯನ ದುರಂಹಕಾರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ಹಿಂದೂ ವಿರೋಧಿ ಸರ್ಕಾರ ಇರಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ನವರು ಬದುಕಬೇಕು ಎಂದರೆ ಮುಸ್ಲೀಮರ ಹಿಜಾಬನ್ನು ಹಿಡಿದುಕೊಂಡೇ ವೋಟು ತೆಗೆದುಕೊಳ್ಳಬೇಕು. ಹಿಜಾಬಿನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ ಎಂದು ಹೇಳಿದರು. 

ಇದನ್ನೂ ಓದಿ : ಕಲುಷಿತ ಕಾಂಗ್ರೆಸ್‌ ಎಂದು ಕೈ ಪಕ್ಷದ ಮೇಲೆ ಕಿಡಿಕಾರಿದ ಜೆಡಿಎಸ್ 

ಇದು ಆರ್ಥಿಕ ಸುಭದ್ರತೆಯ ಕಲ್ಪನೆಯೇ ಇಲ್ಲದಂತಹ ಕೆಲವರು ಮಾಡಿದ ಉಪದ್ರವ. ಜನರಿಗೂ ಸಹ ಇದೆಲ್ಲ ಬೇಕಾಗಿಲ್ಲ. ಇದರ ಪರಿಣಾಮ ಅಭಿವೃದ್ಧಿಗೆ ಹಣವಿಲ್ಲ. ಸಾಲ ತಂದು ಈ ಸರ್ಕಾರ ಫ್ರೀ ಬಸ್ ಕೊಟ್ಟಿರುವುದು ಹುಚ್ಚು ಮಹಮದ್ ನ ಸರ್ಕಾರ ಎಂದರು. 

ರಾಮ ಮಂದಿರ ಉದ್ಘಾಟನೆ ಇದು ಹಿಂದು ಸಮಾಜದ ವಿಜಯ. ಇದು ಹಿಂದೂ ಸಮಾಜದ ನಿರ್ಮಾಣದ ಮೊದಲ ಹೆಜ್ಜೆಯ ಗುರುತು ಎಂದು ಅನಂತಕುಮಾರ್ ಹೆಗಡೆ ತಿಳಿಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More