Home> Karnataka
Advertisement

ಪೇ ಸಿಎಂ ನಂತರ SayCM.com ಪ್ರಾರಂಭಿಸಿದ ಕರ್ನಾಟಕ ಕಾಂಗ್ರೆಸ್

ಈ ವೆಬ್‌ಸೈಟ್, ಕಾಂಗ್ರೆಸ್ ಪ್ರಚಾರದ ಅಧಿಕೃತ ಪ್ರಚಾರದ ಹಾಡನ್ನು ಹೊಂದಿದೆ. ಇದುವರೆಗೆ ಕಾಂಗ್ರೆಸ್ ಬಿಜೆಪಿಗೆ ಕೇಳಿದ ಎಲ್ಲಾ ಪ್ರಶ್ನೆಗಳನ್ನು ಇದರಲ್ಲಿ ಪಟ್ಟಿಮಾಡಲಾಗಿದೆ.

ಪೇ ಸಿಎಂ ನಂತರ  SayCM.com ಪ್ರಾರಂಭಿಸಿದ ಕರ್ನಾಟಕ ಕಾಂಗ್ರೆಸ್

ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಇಂದು SayCM.com ಅನ್ನು ಪ್ರಾರಂಭಿಸಿದೆ.     2018 ರಲ್ಲಿ ನೀಡಿದ್ದ 600 ಪ್ರಣಾಳಿಕೆಗಳಲ್ಲಿ 90% ಭರವಸೆಗಳನ್ನು ಈಡೇರಿಸಲು, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು SayCM QR ಕೋಡ್ ಅಡಿಯಲ್ಲಿ ಹೇಳಲಾಗಿದೆ. 

ಈ ವೆಬ್‌ಸೈಟ್, ಕಾಂಗ್ರೆಸ್ ಪ್ರಚಾರದ ಅಧಿಕೃತ ಪ್ರಚಾರದ ಹಾಡನ್ನು  ಹೊಂದಿದೆ. ಇದುವರೆಗೆ ಕಾಂಗ್ರೆಸ್ ಬಿಜೆಪಿಗೆ ಕೇಳಿದ ಎಲ್ಲಾ ಪ್ರಶ್ನೆಗಳನ್ನು ಇದರಲ್ಲಿ ಪಟ್ಟಿಮಾಡಲಾಗಿದೆ. ಇದುವರೆಗೆ 50 ಪ್ರಶ್ನೆಗಳಿಗೆ ಉತ್ತರ ನೀಡದ ಬಿಜೆಪಿ ಮೌನಕ್ಕೆ ಶರಣಾಗುವ ಮೂಲಕ ಮಾಡಿರುವ ತಪ್ಪನ್ನು ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್ ಹೇಳಿದೆ.  

ಇದನ್ನೂ ಓದಿ : ಗಣಿತದಲ್ಲಿ ಕಡಿಮೆ ಅಂಕ : ಪೋಷಕರಿಗೆ ಹೆದರಿ ಮನೆ ಬಿಟ್ಟು ಹೋದ ಬಾಲಕಿ

ನಿನ್ನೆ ಪತ್ರಿಕಾಗೋಷ್ಠಿ ನಡೆಸಿರುವ ಕರ್ನಾಟಕ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆ ನೀಡಿದ್ದರು, PayCM ಮಾತ್ರ ನಿಮ್ಮನ್ನು ಮಾತನಾಡುವಂತೆ ಮಾಡಿದರೆ, ನಿಮ್ಮ ವೈಫಲ್ಯಗಳಿಗೆ ಉತ್ತರಿಸಲು ನಾವು SayCM ಅನ್ನು ಪ್ರಾರಂಭಿಸುತ್ತೇವೆ."ಎಂದು ಹೇಳಿದ್ದರು.

ಅದರಂತೆಯೇ ಇಂದು, PayCm ಅನ್ನು ಹೋಲುವ QR ಕೋಡ್ ಅನ್ನು ಪ್ರಾರಂಭಿಸಲಾಗಿದೆ. ಈ QR ಕೋಡ್ ಬಳಕೆದಾರರನ್ನು SayCm.com ಗೆ ಕರೆದೊಯ್ಯುತ್ತದೆ. ಕರ್ನಾಟಕ ಕಾಂಗ್ರೆಸ್ ಈಗಾಗಲೇ PayCM ನೊಂದಿಗೆ ಪೋಸ್ಟರ್ ಪ್ರಚಾರವನ್ನು ಮಾಡಿದ್ದು, ಈಗ ಮತ್ತೆ 'SayCM'ಮೂಲಕ ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ : KPTCL ಅಕ್ರಮ ನೇಮಕಾತಿ ಪ್ರಕರಣ: ಮತ್ತೆ ಇಬ್ಬರ ಬಂಧನ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More