Home> Karnataka
Advertisement

Karnataka Assembly Election: ಮತಗಟ್ಟೆ ಆವರಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

Karnataka Election 2023: ಮತದಾನ ಮಾಡಲು ವೃದ್ದರು, ಮದುಮಕ್ಕಳು ಸೇರಿದಂತೆ ಮೊದಲ ಬಾರಿಗೆ ಮತದಾನ ಮಾಡಲು ಬಂದ ಯವಕರು ಕಥೆ ಒಂದೆಡೆಯಾದರೇ, ಮತದಾನಕ್ಕೆ ಬಂದ ಓರ್ವ ಮಹಿಳೆ ಮತಗಟ್ಟೆ ಆವರಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

Karnataka Assembly Election: ಮತಗಟ್ಟೆ ಆವರಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

ಬಳ್ಳಾರಿ : ಮತದಾನ ಮಾಡಲು ವೃದ್ದರು, ಮದುಮಕ್ಕಳು ಸೇರಿದಂತೆ ಮೊದಲ ಬಾರಿಗೆ ಮತದಾನ ಮಾಡಲು ಬಂದವರ ಕಥೆ ಒಂದೆಡೆಯಾದರೇ ,  ಇವರಷ್ಟೇ ಅಲ್ಲದೇ  ಮತದಾನ ಮಾಡಲು ಮತಗಟ್ಟೆ ಆವರಣಕ್ಕೆ ತುಂಬು ಗರ್ಭಿಣಿಯರು ಸಹ ಬಂದಿದ್ದಾರೆ.

ಇದನ್ನೂ ಓದಿ: Karanataka election: ಗೆಲುವಿನ ಗದ್ದುಗೆ ಏರಲು ಮತಗಟ್ಟೆಯ ಮುಂದೆ ʼವಾಮಾಚಾರʼ..!

ಹೀಗಿರುವಾಗ ಮತದಾನಕ್ಕೆ ಬಂದ ಓರ್ವ ಮಹಿಳೆ ಮತಗಟ್ಟೆ ಆವರಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳ್ಳಾರಿಯ ಕುರುಗೋಡು ತಾಲೂಕಿನ ಕೊರಲಗುಂದಿ‌ ಗ್ರಾಮದ ಮಣಿಲಾ ಎಂಬ ಮಹಿಳೆ ಮತದಾನ ಮಾಡಲು ಬಂದಿದ್ದರು.

ತುಂಬು ಗರ್ಭಿಣಿಯಾಗಿದ್ದ ಮಣಿಲಾಗೆ ಮತದಾನ ಕೇಂದ್ರದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಗರ್ಭಿಣಿಗೆ ಮತಗಟ್ಟೆ ಬಳಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅಲ್ಲಿದ್ದ ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ಮತದಾರರು ನೆರವಿಗೆ ಬಂದು ಮಹಿಳೆಗೆ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: Deve Gowda Voted: ಹೆಲಿಕಾಪ್ಟರ್‌ ಮೂಲಕ ಬಂದಿಳಿದು ಮತದಾನ ಮಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು

 ಹೆರಿಗೆ ಬಳಿಕ ಹೆರಿಗೆ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಸದ್ಯ ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. 16ನೇ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮತದಾನ ಮುಕ್ತಾಯವಾಗಲು ಇನ್ನು ಕೆಲವೇ ನಿಮಿಷಗಳು ಬಾಕಿ ಉಳಿದಿವೆ. ಹೀಗಿರುವಾಗ ಮತದಾನ ವೇಳೆ ಅಪರೂಪದ ಘಟನೆ ನಡೆದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More