Home> Karnataka
Advertisement

Chamarajanagar : ನೀರಿನಲ್ಲಿ ಮುಳುಗುತ್ತಿದ್ದ ಮರಿ ಆನೆ ಕೊನೆಗೂ ತಾಯಿ ಮಡಿಲಿಗೆ!

ಪತ್ರಕರ್ತನ ಸಮಯಪ್ರಜ್ಞೆಯಿಂದ ನೀರಿನಲ್ಲಿ ಮುಳುಗುತ್ತಿದ್ದ ಮರಿಯಾನೆಯೊಂದು ತಾಯಿ ಮಡಿಲು ಸೇರಿದ ಘಟನೆ ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಪಾಲಾರ್ ಅರಣ್ಯ ಪ್ರದೇಶದ ಬೀಟ್ ನಲ್ಲಿ ಗುರುವಾರ ನಡೆದಿದೆ.

Chamarajanagar : ನೀರಿನಲ್ಲಿ ಮುಳುಗುತ್ತಿದ್ದ ಮರಿ ಆನೆ ಕೊನೆಗೂ ತಾಯಿ ಮಡಿಲಿಗೆ!

ಚಾಮರಾಜನಗರ : ಪತ್ರಕರ್ತನ ಸಮಯಪ್ರಜ್ಞೆಯಿಂದ ನೀರಿನಲ್ಲಿ ಮುಳುಗುತ್ತಿದ್ದ ಮರಿಯಾನೆಯೊಂದು ತಾಯಿ ಮಡಿಲು ಸೇರಿದ ಘಟನೆ ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಪಾಲಾರ್ ಅರಣ್ಯ ಪ್ರದೇಶದ ಬೀಟ್ ನಲ್ಲಿ ಗುರುವಾರ ನಡೆದಿದೆ.

ದಿನಪತ್ರಿಕೆಯೊಂದರ ವರದಿಗಾರ ಜಿ.ಪ್ರದೀಪ್ ಕುಮಾರ್ ಮತ್ತು ಕುಟುಂಬ ತಮಿಳುನಾಡಿನ ಕೊಳತ್ತೂರಿಗೆ ತೆರಳುತ್ತಿದ್ದಾಗ ಮೆಟ್ಟೂರು ಹಿನ್ನೀರಿನಲ್ಲಿ ಆನೆ ಮರಿಯೊಂದು ನೀರು ದಾಟಲು ತೆರಳಿ ಮುಳುಗುತ್ತಿದ್ದನ್ನು ಗಮನಿಸಿದ್ದಾರೆ. ಕೂಡಲೇ, ಸಮಯಪ್ರಜ್ಞೆ ಮೆರೆದ ಪ್ರದೀಪ್ ಹಾಗೂ ಕುಟುಂಬ ಸತತ 1 ತಾಸು ಆನೆ ಮರಿಯನ್ನು ಕಾಪಾಡಿಕೊಂಡು ತಮಿಳುನಾಡಿನ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ‌.

ಇದನ್ನೂ ಓದಿ : ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ: ಸಂವಿಧಾನದ 9 ನೇ ಶೆಡ್ಯೂಲ್ ನಲ್ಲಿ ಸೇರ್ಪಡೆಗೆ ಕೇಂದ್ರಕ್ಕೆ ಪ್ರಸ್ತಾವನೆ

ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತಾಯಿ ಆನೆ ಮಡಿಲಿಗೆ ಮರಿಯಾನೆಯನ್ನು ಸೇರಿಸಿದ್ದಾರೆ. ಮೆಟ್ಟೂರು ಜಲಾಶಯದ ಹಿನ್ನೀರು ದಾಟುವಾಗ ತಾಯಿಯಿಂದ ಬೇರ್ಪಟ್ಟಿದೆ ಎನ್ನಲಾಗುತ್ತಿದೆ. ಇನ್ನೂ ಇದು ಜನಿಸಿ ಕೇವಲ 2 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : ಬೆಂಗಳೂರು ಉತ್ತರ ಭಾಗದಲ್ಲಿ 184 ಎಕರೆ ವಿಸ್ತೀರ್ಣದ ಪಾರ್ಕ್ ನಿರ್ಮಾಣ: ಆರ್.ಅಶೋಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More