Home> Karnataka
Advertisement

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾ ಪಟ್ಟಿ ಪ್ರಕಟ

ಹಿಂದಿನ ವೇಳಾಪಟ್ಟಿಗೆ ಆಕ್ಷೇಪಣೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿಯನ್ನು  ಪ್ರಕಟಿಸಿದೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾ ಪಟ್ಟಿ ಪ್ರಕಟ

ಬೆಂಗಳೂರು : 2020-21ನೇ ಸಾಲಿನ ದ್ವೀತಿಯ ಪಿಯುಸಿ (PUC Exam) ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ (Revised time table)ಪ್ರಕಟಗೊಂಡಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಮೇ 24ರಿಂದ ಜೂನ್ 16ರ ವರೆಗೆ ಪರೀಕ್ಷೆಗಳು ನಡೆಯಲಿದೆ. ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಯ ಬಗ್ಗೆ ಆಕ್ಷೇಪಣೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹೊಸ ವೇಳಾಪಟ್ಟಿ ಪ್ರಕಟಿಸುತ್ತಿರುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. 

ಈ ಹಿಂದೆ ದ್ವೀತಿಯ ಪಿಯುಸಿಗೆ  ಮೇ 24ರಿಂದ ಜೂನ್ 10 ರವರೆಗೆ ಪರೀಕ್ಷೆ (Exam) ನಡೆಸಲು ನಿರ್ಧರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾ ಪಟ್ಟಿ ಪ್ರಕಟಿಸಿತ್ತು. ಆದರೆ ಈ ಬಗ್ಗೆ ಆಕ್ಷೇಪಣೆಗಳು ಕೇಳಿ ಬಂದಿತ್ತು. ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿಯನ್ನು (Revised time table) ಪ್ರಕಟಿಸಿದೆ. 

ಇದನ್ನೂ ಓದಿ : CBSE Revised Date Sheet : 10ನೇ 12 ನೇ ತರಗತಿ ಪರೀಕ್ಷೆಯ ಪರಿಷ್ಕೃತ ವೇಳಾ ಪಟ್ಟಿ ಪ್ರಕಟ

ಪರಿಷ್ಕೃತ ವೇಳಾಪಟ್ಟಿಯಂತೆ ಪರೀಕ್ಷಾ ದಿನಾಂಕ ಹೀಗಿದೆ :
ಮೇ 24: ಸೋಮವಾರ – ಇತಿಹಾಸ
ಮೇ 25 : ಮಂಗಳವಾರ – ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮೇ 26 : ಬುಧವಾರ – ಭೂಗೋಳ ಶಾಸ್ತ್ರ
ಮೇ 27 : ಗುರುವಾರ – ಮನಃಶಾಸ್ತ್ರ, ಬೇಸಿಕ್ ಮ್ಯಾಥ್
ಮೇ 28 : ಶುಕ್ರವಾರ – ತರ್ಕಶಾಸ್ತ್ರ
ಮೇ 29 : ಶನಿವಾರ – ಕನ್ನಡ (Kannada)
ಮೇ 31 : ಸೋಮವಾರ – ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ
ಜೂ 1 : ಮಂಗಳವಾರ – ಮಾಹಿತಿ ತಂತ್ರಜ್ಞಾನ, ರೀಟೈಲ್, ಅಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್
ಜೂ 2 : ಬುಧವಾರ – ರಾಜ್ಯಶಾಸ್ತ್ರ, ಗಣಕ ವಿಜ್ಞಾನ
ಜೂ 3 : ಗುರುವಾರ – ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
ಜೂ 4 : ಶುಕ್ರವಾರ – ಅರ್ಥಶಾಸ್ತ್ರ
ಜೂ 5 :ಶನಿವಾರ - ಗೃಹ ವಿಜ್ಞಾನ
ಜೂ 7 : ಸೋಮವಾರ – ವ್ಯವಹಾರ ಅಧ್ಯಯನ, ಭೌತಶಾಸ್ತ್ರ
ಜೂ 8: ಮಂಗಳವಾರ – ಭೂಗರ್ಭ ಶಾಸ್ತ್ರ
ಜೂ 9 : ಬುಧವಾರ – ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
ಜೂ 10: ಗುರುವಾರ – ಸಮಾಜಶಾಸ್ತ್ರ, ರಸಾಯನ ಶಾಸ್ತ್ರ
ಜೂ 11: ಶುಕ್ರವಾರ – ಉರ್ದು, ಸಂಸ್ಕೃತ
ಜೂ 12 : ಶನಿವಾರ – ಸಂಖ್ಯಾಶಾಸ್ತ್ರ
ಜೂ 14: ಸೋಮವಾರ – ಐಚ್ಛಿಕ ಕನ್ನಡ
ಜೂ 15 : ಮಂಗಳವಾರ – ಹಿಂದಿ (Hindi
ಜೂ 16 : ಬುಧವಾರ – ಇಂಗ್ಲೀಷ್

ಇದನ್ನೂ ಓದಿ : CBSE VS ICSE: ಯಾವ ಬೋರ್ಡ್ ಅಡಿ ಮಕ್ಕಳ Admission ಮಾಡಿಸುವುದು ಉಚಿತ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More