Home> Karnataka
Advertisement

‘ಹರ್ ಘರ್ ಗಂಗಾ’ ಯೋಜನೆಗೆ ಬಜೆಟ್’ನಲ್ಲಿ 12 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದೇವೆ: ಸಿಎಂ ಬೊಮ್ಮಾಯಿ

ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವ ಸವಣೂರು, ಹಾವೇರಿ, ಸವಣೂರು ಈ ಮೂರು ಕ್ಷೇತ್ರದಲ್ಲಿ ಗಂಗಾ ಜಲ ಯೋಜನೆಗೆ ಅಡಿಗಲ್ಲು ಹಾಕುತ್ತಿದ್ದೇವೆ. ಸುಮಾರು 820 ಕೋಟಿ ಯೋಜನೆ 291 ಗ್ರಾಮಗಳಿಗೆ ಕುಡಿಯುವ ನೀರಿನ‌ ವ್ಯವಸ್ಥೆಯನ್ನು ಪ್ರತಿಯೊಂದು ಮನೆಗೆ 50 ಲೀಟರ್ ಕೊಡುವ ವಿಶೇಷವಾದ ಯೋಜನೆಗೆ ಸಂತೋಷದಿಂದ ಅಡಿಗಲ್ಲನ್ನು ಮಾಡಿದ್ದೇನೆ ಎಂದರು.

‘ಹರ್ ಘರ್ ಗಂಗಾ’ ಯೋಜನೆಗೆ ಬಜೆಟ್’ನಲ್ಲಿ 12 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದೇವೆ: ಸಿಎಂ ಬೊಮ್ಮಾಯಿ

ಹಾವೇರಿ: ಜನರಿಗೆ ಕುಡಿಯುವ ನೀರಿನ ಮೂಲಭೂತ ಸೌಕರ್ಯ ಒದಗಿಸಬೇಕೆಂದು, ಜಲ ಜೀವನ ಮಿಷನ್‌ನ  ಹರ್ ಘರ್ ಗಂಗಾ ಯೋಜನೆಗೆ 12 ಸಾವಿರ ಕೋಟಿ ರೂ ಬಜೆಟ್ ನಲ್ಲಿ ಮೀಸಲಿಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ತಡಸ ಗ್ರಾಮದಲ್ಲಿ ಆಯೋಜಿಸಿದ್ದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಇದನ್ನೂ ಓದಿ:  ಬರೋಬ್ಬರಿ 60 ಕಂಪನಿಗಳಿಗೆ ಕೋಟಿ ಕೋಟಿ ವಂಚನೆ: ಭಾರತದ ಈ ಸ್ಟಾರ್ ಕ್ರಿಕೆಟಿಗ ಅರೆಸ್ಟ್!

ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವ ಸವಣೂರು, ಹಾವೇರಿ, ಸವಣೂರು ಈ ಮೂರು ಕ್ಷೇತ್ರದಲ್ಲಿ ಗಂಗಾ ಜಲ ಯೋಜನೆಗೆ ಅಡಿಗಲ್ಲು ಹಾಕುತ್ತಿದ್ದೇವೆ. ಸುಮಾರು 820 ಕೋಟಿ ಯೋಜನೆ 291 ಗ್ರಾಮಗಳಿಗೆ ಕುಡಿಯುವ ನೀರಿನ‌ ವ್ಯವಸ್ಥೆಯನ್ನು ಪ್ರತಿಯೊಂದು ಮನೆಗೆ 50 ಲೀಟರ್ ಕೊಡುವ ವಿಶೇಷವಾದ ಯೋಜನೆಗೆ ಸಂತೋಷದಿಂದ ಅಡಿಗಲ್ಲನ್ನು ಮಾಡಿದ್ದೇನೆ ಎಂದರು.

ಈ ಕಾರ್ಯಕ್ರಮ ಬಹಳ ದಿನಗಳ ನನ್ನ ಕನಸ್ಸಾಗಿತ್ತು. ಸುಮಾರು ಆರೇಳು ವರ್ಷದ ಹಿಂದೆ ಬಹುಗ್ರಾಮ ಕುಡಿಯುವ ನಿರೀನ ಯೋಜನೆಗೆ ತಡಸ ಗ್ರಾಮವನ್ನು ಹಾಕಿದ್ದೆ. ಅಂದಿನ ಸರ್ಕಾರ ಇದನ್ನು ರಿಜೆಕ್ಟ್ ಮಾಡಿದರು. ಇದು ಕಾರ್ಯ ಸಾಧು ಇಲ್ಲ ಅಂತ. ನಂತರ ಸುತ್ತಲಿರುವ ಎಲ್ಲ ಗ್ರಾಮಗಳನ್ನು ಸೇರಿ‌ ಎರಡನೇ‌ ಡಿಪಿಆರ್ ಮಾಡಿದರೂ ಅನುಮೋದನೆ ಸಿಗಲಿಲ್ಲ. ರಾಜ್ಯ ಮಟ್ಟದ ಕಮಿಟಿಯಲ್ಲಿ ರಿಜೆಕ್ಟ್ ಮಾಡಿದರು. ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ನೂರು ವರ್ಷದ ಹಿಂದೆ ಕೆಂಪು‌ಕೋಟೆಯ ಮೇಲೆ  ನಿಂತು ಹೇಳಿದರು. ಪ್ರತಿಯೊಂದು ಮನೆಗೆ ಮುಂದಿನ ಐದು ವರ್ಷಗಳ ಒಳಗಡೆ ಕುಡಿಯುವ ನೀರನ್ನು ಕೊಡುವಂತ  ಕೆಲಸ ಮಾಡುತ್ತೇವೆ ಎಂದರು. ಯಾವ ಪ್ರಧಾನಮಂತ್ರಿಗಳು ಇದನ್ನು ಹೇಳುವಂತ ಧೈರ್ಯ ಮಾಡಿರಲಿಲ್ಲ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಹಿಂದಿನ ಯಾವುದೇ ಪ್ರಧಾನಮಂತ್ರಿ ಈ ತರ ಘೋಷಣೆ ಮಾಡಿರಲಿಲ್ಲ  ಯಾಕೆಂದರೆ ಇದು ಬಹಳ ಕಷ್ಟದ ಕೆಲಸ. 130 ಕೋಟಿ ಜನಸಂಖ್ಯೆಗೆ, ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿದಿನ 50 ಲೀಟರ್ ಒದಗಿಸುವುದು ಬಹಳ ಕಷ್ಟದ ಕೆಲಸ. ಆದರೆ  ನರೇಂದ್ರ ಮೋದಿಜಿಯವರು ಆ ಸಾಹಸವನ್ನು ಮಾಡಿದರು. ಆ ದಿಟ್ಟತನವನ್ನು ತೋರಿಸಿದರು. ಯೋಜನೆಯನ್ನು ಮಾಡಿ, ದುಡ್ಡನ್ನು ಕೊಟ್ಟರು. ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಇವತ್ತು ಈ ಯೋಜನೆ‌ ಕಳೆದ ಮೂರು ವರ್ಷದಿಂದ  ಪ್ರಾರಂಭವಾಗಿದೆ. ಇಡೀ ದೇಶದಲ್ಲಿ 12 ಕೋಟಿ‌ ಮನೆಗಳಿಗೆ ಇವತ್ತು ನೀರನ್ನು ಕೊಟ್ಟಿದ್ದಾರೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಮಟ್ಟದ ಹೇಳಬೇಕಾದರೆ, 72  ವರ್ಷ ಕೇವಲ 25ಲಕ್ಷ ಮನೆಗಳಿಗೆ ನೀರು ಇತ್ತು. ಕಳೆದ ಮೂರು ವರ್ಷದಲ್ಲಿ ನಮ್ಮ ಸರ್ಕಾರ ಬಂದ‌  ಮೇಲೆ  40 ಲಕ್ಷ ಮನೆಗಳಿಗೆ ನೀರನ್ನು ಕೊಡುವ ವ್ಯವಸ್ಥೆಯನ್ನು ಮಾಡದ್ದೇವೆ. ಇವತ್ತು ಈ ಯೋಜನೆ ದೂರದ ತುಂಗಭಂದ್ರದಿಂದ ನೀರನ್ನು ತರುವಂತ ವ್ಯವಸ್ಥೆಯನ್ನು ಮಾಡದ್ದೇವೆ. ಇದನ್ನು ನೂರು ಕ್ಷೇತ್ರಗಳಿಗೆ ಹಂಚಿ 291 ಹಳ್ಳಿಯ ಪ್ರತಿಯೊಂದು ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದೇವೆ. ಎಂದರು.

 ಕೇವಲ 8ರಿಂದ 10 ತಿಂಗಳೊಳಗೆ ಈ ಯೋಜನೆ ಪೂರ್ಣವಾಗಲಿದೆ. ತಡಸ ಗ್ರಾಮ ಸಮೇತವಾಗಿ  ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ. ಈ ಯೋಜನೆ ಪೂರ್ಣವಾದರೆ ನನ್ನ ಶಿಗ್ಗಾಂವ್, ಸವಣೂರು ಕ್ಷೇತ್ರದ ಪ್ರತಿಯೊಂದು ಮನೆಗಳಿಗೆ   ನಳದಲ್ಲಿ ನೀರು ಕೊಡುವಂತ ಯೋಜನೆ ಪೂರ್ಣವಾಗಲಿದೆ. ಬೇರೆ ಹಳಿಯಲ್ಲೂ ಈ ಯೋಜನೆ ಕವರ್ ಆಗಿದೆ. ನನ್ನ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ಕುಡಿಯುವ ನೀರು 10 ರಿಂದ 12 ತಿಂಗಳಲ್ಲಿ ಪೂರ್ಣವಾಗಲಿದೆ. ಇದು ಡಬಲ್ ಇಂಜೀನ್ ಸರ್ಕಾರದ ಕೆಲಸ ಎಂದರು.

ಶಿಗ್ಗಾಂವ್ ಕ್ಷೇತ್ರದಲ್ಲಿ ಅತೀ  ಹೆಚ್ಚು ರಸ್ತೆಗಳ‌ ನಿರ್ಮಾಣ. ಪಿ ಡಬ್ಲೂಡಿ ಇಲಾಖೆ, ಗ್ರಾಮೀಣ ಅಭಿವೃದ್ದಿ ಇಲಾಖೆ, ಹಳ್ಳಿಗೆ ಹೋಗುವಂತ ರಸ್ತೆ ಹೊಲಕ್ಕೆ ಹೋಗುವಂತ  ರಸ್ತೆ  ಸಮೇತವಾಗಿ ಈ ವರ್ಷ  ಸಂಪೂರ್ಣವಾಗಿ ಎಲ್ಲ ಗ್ರಾಮಗಳಿಗೆ ಒದಗಿಸುವ ಕೆಲಸವನ್ನು  ಮಾಡಿದ್ದೇವೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ  ಸುಮಾರು 12 ಬ್ರಿಡ್ಜ್ ಗಳಿಗೆ ಮಂಜೂರಾತಿ ಮಾಡಿದ್ದು, ಇನ್ನೂ 8  ಬ್ರಿಡ್ಜ್ ಗಳನ್ನ ನಾಳೆ‌ ಮಂಜೂರಾತಿ ಮಾಡಲಿದ್ದೇನೆ. ಕೆರೆಗಳ ಅಭಿವೃದ್ಧಿಗಳಿಗೆ 30 ಕೋಟಿ ಕೊಟ್ಟಿದ್ದೇನೆ. ನನ್ನ ತಾಲೂಕಿನಲ್ಲಿ  ಮಳೆ ಬಂದು ಶೀಥಿಲವಾಗಿರುವ ಎಲ್ಲ ಕೆರೆಗಳ‌ ದುರಸ್ಥಿಗೆ ಈಗಾಗಲೇ ಕ್ರಮ ತೆಗೆದುಕೊಂಡಿದ್ದೇನೆ ಎಂದರು.

ಶಿಗ್ಗಾಂವಿ‌ ಏತ  ನೀರಾವರಿ ಯೋಜನೆ ತಡಸವರೆಗೂ ಬಂದಿದೆ. ಸವಣೂರು ಏತ ನೀರಾವರಿ ಯೋಜನೆ ಹೀರೆ ಬೆಂಡಿಗೆರಿವರೆಗೂ ಬಂದಿದೆ. ಈ ತಾಲೂಕಿನ‌ ಸಮಗ್ರ  ಅಭಿವೃದ್ಧಿಗೆ ಕಂಕಣ ಬದ್ದನಾಗಿ ಕೆಲಸ ಮಾಡುತ್ತಿದ್ದೇನೆ. ಶಾಲಾ ಕಟ್ಟಡಗಳು, ಆಸ್ಪತ್ರೆ, ಡಿಗ್ರಿ ಕಾಲೇಜುಗಳು ಮತ್ತು ತಡಸ ಆಸ್ಪತ್ರೆಯನ್ನ‌ಉ ಸಿಎಚ್ ಸಿ ಸೆಂಟರ್ ಮೇಲ್ದರ್ಜೆಗೇರಿಸಲು ಈಗಾಗಲೇ ಆಜ್ಞೆಯನ್ನು ಮಾಡಿದ್ದೇನೆ ಎಂದರು.

ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದೆವೆ. ರೈತರ ಮಕ್ಕಳಿಗೆ ವಿದ್ಯಾ‌ನಿಧಿ, ಕಿಸಾನ್ ಸಮ್ಮಾನ್ ಯೋಜನೆ, ಯಶಸ್ವಿನಿ ಯೋಜನೆ, ಸ್ತ್ರೀ ಶಕ್ತಿ ಸಂಘಕ್ಕೆ 5 ಲಕ್ಷ ರೂ. ಕೊಟ್ಟು ಸ್ವಯಂ ಉದ್ಯೋಗ ಸೃಷ್ಠಿ, ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಹೆಸರಿನಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತ್ ನಲ್ಲಿ  ಅವರ ಸಂಘಕ್ಕೆ 2 ಲಕ್ಷ ರೂ. ನೀಡಿ ಅವರಿಗೆ ಆದಾಯ ಬರುವ‌ ನಿಟ್ಟಿನಲ್ಲಿ ಸಹಾಯ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: TTE urinates on woman: ರೈಲಿನಲ್ಲಿ ಮಹಿಳೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ TTE: ಮುಂದೇನಾಯ್ತು ಗೊತ್ತಾ?

ಶಿಗ್ಗಾಂವ ಸವಣೂರು ಕ್ಷೇತ್ರಕ್ಕೆ 69 ಕೋಟಿ ರೂ. ದಾಖಲೆಯ ಬೆಳೆವಿಮೆ ಬಂದಿದೆ. ಈ ತಾಲ್ಲೂಕನ್ನು ರಾಜ್ಯದಲ್ಲಿ ಮಾದರಿ ಮಾಡುತ್ತೇನೆ ಎಂದು ಹೇಳಿದ್ದ ಹಾಗೆ ಮಾಡಿದ್ದೇನೆ. ಬರುವಂತಹ ದಿನಗಳಲ್ಲಿ ನಂಬರ್ ಓನ್ ಮಾಡುತ್ತೇನೆ. ಇನ್ನುಳಿದ ‌ಸುಮುದಾಯದವರು ಮನವಿ ಕೊಟ್ಟಿದ್ದು, ಅದನ್ನು ಈಡೇರಿಸುತ್ತೇನೆ ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More